ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ(Arjun Janya) ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಈ ವರ್ಷದ ಬಹು ನಿರೀಕ್ಷಿತ ಕನ್ನಡ ಸಿನಿಮಾ ʼ45ʼ (45 Movie) ಈಗಾಗಲೇ ತೆರೆಕಂಡಿದೆ. ನಿನ್ನೆ ಬೆಂಗಳೂರಿನ ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋ ನಡೆಸಲಾಗಿದ್ದು, ಕನ್ನಡ ಸಿನಿ ಪ್ರಿಯರು ʼ45ʼ ಸಿನಿಮಾಗೆ ಫುಲ್ ಫಿದಾ ಆಗಿದ್ದಾರೆ.

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ , ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ʼ45ʼ ಸಿನಿಮಾ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ ʼ45ʼ ಅಬ್ಬರ ಜೋರಾಗಿದ್ದು, ಸಿನಿಮಾ ನೋಡಿದವರು ಪಾಸಿಟಿವ್ ಅಭಿಪ್ರಾಯಗಳನ್ನೇ ನೀಡುತ್ತಿದ್ದಾರೆ. ಪ್ರೀಮಿಯರ್ ಶೋ ವೀಕ್ಷಿಸಿದ ಪ್ರೇಕ್ಷಕರು ಸಿನಿಮಾ ಬಗ್ಗೆ ಏನು ಹೇಳಿದರು ಎನ್ನುವುದರ ವಿಡಿಯೋ ಇಲ್ಲಿದೆ ನೋಡಿ.












