ಬೆಂಗಳೂರು: RCB ದುರಂತದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆಯಿಂದ ಪಂದ್ಯಾವಳಿಗಳು ಪ್ರಾರಂಭವಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಇದರ ಬೆನ್ನಲ್ಲೆ ನಾಳೆಯಿಂದ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಗೆ KSCA ಅನುಮತಿ ಕೇಳಿತ್ತು. ಹೀಗಾಗಿ ನಿನ್ನೆ ಜಿಬಿಎ ಆಯುಕ್ತರ ನೇತೃತ್ವದಲ್ಲಿ ನೇಮಿಸಲಾಗಿದ್ದ ಸಮಿತಿ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿತ್ತು.
ಕಮಿಟಿ ಪರಿಶೀಲನೆ ವೇಳೆ ಕ್ರೀಡಾಂಗಣದಲ್ಲಿ ಮ್ಯಾಚ್ ನಡೆಸಲು ಸೂಕ್ತ ವ್ಯವಸ್ಥೆ ಇಲ್ಲ ಎಂದು ತಮ್ಮ ವರದಿಯಲ್ಲಿ ಉಲ್ಲೇಖ ಮಾಡಿದೆ. ಹೀಗಾಗಿ KSCAಗೆ ಸೂಕ್ತ ರೀತಿಯಲ್ಲಿ ಕ್ರೀಡಾಂಗಣ ಸಿದ್ದಪಡಿಸಲು ಸೂಚಿಸಿದ್ದು, ನಂತರ ಮುಂದಿನ ತೀರ್ಮಾನ ಕೈಗೊಳ್ಳಲು ಗೃಹ ಇಲಾಖೆ ನಿರ್ಧರಿಸಿದೆ.
ಸದ್ಯ ಕಮಿಟಿ ನಿರ್ಧಾರದಿಂದ ನಾಳೆ ನಡೆಯುವ ವಿಜಯ್ ಹಜಾರೆ ಟ್ರೋಫಿ ಮ್ಯಾಚ್ ಎಲ್ಲಿ ನಡೆಸಬೇಕು ಎಂಬುದನ್ನು KSCA ತೀರ್ಮಾನ ಮಾಡಲಿದೆ.









