ಬೆಂಗಳೂರು : ಏಕದಿನ ವಿಶ್ವಕಪ್ ಪಂದ್ಯ ಗೆದ್ದ ಬಳಿಕ ಮೊದಲ ಬಾರಿಗೆ ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದೆ. ವಿಶಾಖಪಟ್ಟಣಂನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಟೀ20 ಸರಣಿ ಪ್ರಾರಂಭವಾಗಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಪಂದ್ಯದಲ್ಲಿಯೇ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ಮುಂಬರುವ ಟೀ20 ತಯಾರಿಗೂ ಭಾರತ ತಂಡ ಅಣಿಯಾಗಿದೆ. ಆರಂಭಿಕ ಪಂದ್ಯದಲ್ಲಿ ಟಾಸ್ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ಆಟದತ್ತ ಎಲ್ಲ ಅಭಿಮಾನಿಗಳ ಚಿತ್ತ ನೆಟ್ಟಿದೆ. ಆಟವನ್ನು ಹೇಗೆ ಆಡಲಿದ್ದಾರೆ ಭಾರತದ ವನೀತೆಯರು ಎನ್ನುವುದು ಸದ್ಯದ ಚರ್ಚೆಯ ವಿಚಾರವಾಗಿದೆ.
ತಂಡದ ನಾಯಕಿಯಾಗಿ ಹರ್ಮನ್ಪ್ರೀತ್ ಕೌರ್ ತಂಡದ ಗೆಲುವಿಗಾಗಿ ಆಟಗಾರರಲ್ಲಿ ಹುರಿದುಂಬಿಸುವ ಮೂಲಕ ಆಟಕ್ಕೆ ಮೆರುಗು ನೀಡಿದ್ದಾರೆ. ಬ್ಯಾಟಿಂಗ್ ಮಾಡಲಿರುವ ಶ್ರೀಲಂಕಾಗೆ ಈ ಮೂಲಕ ಶಾಕ್ ನೀಡಲು ಭಾರತ ತಂಡ ಸಿದ್ದವಾಗಿದೆ. ಚಾಮರಿ ಅಥಾಪತ್ತು ಮುನ್ನಡೆಸುತ್ತಿರುವ ಶ್ರೀಲಂಕಾ ವನಿತೆಯರ ತಂಡವು ಭಾರತಕ್ಕೆ ಪೈಪೋಟಿ ನೀಡುವ ನಿಟ್ಟಿನಲ್ಲಿ ರೆಡೆಯಾಗಿದೆ. ಟೀಂ ಇಂಡಿಯಾ ಪರ ವೈಷ್ಣವಿ ಶರ್ಮಾ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧ ಸೆಣಸಲಿದ್ದಾರೆ. ಇನ್ನೂ ಭಾರತ ತಂಡವನ್ನು ನೋಡಿದಾಗ, ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅಮಂಜೋತ್ ಕೌರ್, ಅರುಂಧತಿ ರೆಡ್ಡಿ, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ಶ್ರೀ ಚರಣಿ ಇವರುಗಳು ಭಾರತ ತಂಡದ ತಮ್ಮ ಪ್ರದರ್ಶನ ನೀಡಲಿದ್ದಾರೆ.
ಸಾಕಷ್ಟು ಹೈವೋಲ್ಟೇಜ್ ಪಂದ್ಯವಾಗಿರುವ ಇದರಲ್ಲಿ ಶ್ರೀಲಂಕಾ ತಂಡದ ನಾಯಕಿಯಾಗಿ ಚಾಮರಿ ಅಟ್ಟಪಟ್ಟು, ಹಾಸಿನಿ ಪೆರೆರಾ, ಹರ್ಷಿತಾ ಸಮರವಿಕ್ರಮ, ವಿಶ್ಮಿ ಗುಣರತ್ನೆ, ನೀಲಾಕ್ಷಿಕಾ ಸಿಲ್ವಾ, ಕೌಶಿನಿ ನುತ್ತಯಂಗನಾ (ವಿಕೆಟ್ಕೀಪರ್), ಕವಿಶಾ ದಿಲ್ಹಾರಿ, ಮಾಲ್ಕಿ ಮುದರ, ಇನೋಕಾ ರಣವೀರ, ಕಾವ್ಯಾ ಕವಿಂದಿ, ಶಶಿನಿ ಗಿಮಾಹನಿ ಭಾರತದ ವಿರುದ್ಧ ಆಟ ಆಡಲು ಸನ್ನದ್ದರಾಗಿದ್ದಾರೆ. ಪ್ರಮುಖವಾಗಿ ಭಾರತ ತಂಡದ ವಿಚಾರದಲ್ಲಿ ಸ್ಮೃತಿ ಮಂಧಾನ ತಮ್ಮ ಹಿಂದಿನ ವೈಯಕ್ತಿಕ ಸಮಸ್ಯೆಗಳಿಂದ ಹೊರಬಂದು ಭಾರತ ತಂಡವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಅದ್ಭುತ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಅಭಿಮಾನಿಗಳು ಸಹ ನಾರಿಯರ ಕ್ರಿಕೆಟ್ ಆಟವನ್ನು ನೋಡಲು ಕಾತರರಾಗಿದ್ದಾರೆ.









