ಬಿಗ್ ಬಾಸ್ ಕನ್ನಡ(Bigg Boss Kannada) ಸೀಸನ್ 11ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಚೈತ್ರಾ ಕುಂದಾಪುರ (Chaithra Kundapura) ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದು, ಮೂರು ವಾರಗಳನ್ನು ಪೂರೈಸಿದ್ದಾರೆ.

ಎರಡು ವಾರಗಳ ಕಾಲಗಳ ಕಾಲ ಸೈಲೆಂಟ್ ಆಗಿದ್ದ ಚೈತ್ರಾ ಕುಂದಾಪುರ ಈ ವಾರ ಸಂಪೂರ್ಣ ವೈಲೆಂಟ್ ಆಗಿದ್ದು, ತಮ್ಮ ಆಟವನ್ನು ಮತ್ತೆ ಮೊದಲಿನಂತೆ ಆಡುತ್ತಿದ್ದಾರೆ. ಕಿರುಚಾಡುವುದು, ಆಟದಲ್ಲಿ ರೂಲ್ಸ್ ಬ್ರೇಕ್ ಮಾಡುವುದು, ಉಸ್ತುವಾರಿಗಳ ಜೊತೆ ವಾದಕ್ಕಿಳಿಯುವುದು, ಸಹ ಸ್ಪರ್ಧಿಗಳ ಜೊತೆ ಕಿರುಚಾಡುವುದು ಹೀಗೆ ಚೈತ್ರಾ ಕುಂದಾಪುರ ಮೊದಲಿನಂತೆ ಆಟವಾಡುತ್ತಿದ್ದಾರೆ. ಚೈತ್ರಾ ಕುಂದಾಪುರ ಆಟ ಹಾಗೂ ಮಾತು ಇತರ ಸ್ಪರ್ಧಿಗಳಿಗೆ ಕಿರಿ ಕಿರಿಯಾಗುತ್ತಿದ್ದು, ಅವರು ಕೂಡ ಮನಬಂದಂತೆ ಬೈದಾಡಿದ್ದಾರೆ. ಇದರಿಂದ ಬೇಸರಗೊಂಡ ಚೈತ್ರಾ ಕುಂದಾಪುರ ದಿನವಿಡಿ ಕಣ್ಣೀರು ಹಾಕಿದ್ದಾರೆ.

ಆಟದ ಮಧ್ಯೆ ರಜತ್ ಚೈತ್ರಾ ಕುಂದಾಪುರ ಅವರನ್ನು ಸುಳ್ಳಿ ಎಂದು ಕರೆದಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ತೀವ್ರ ಗಲಾಟೆಯಾಗಿದ್ದು, ನೀವು ಆಡುವ ಮಾತು ನನ್ನ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ ಎಂದು ಚೈತ್ರಾ ಕಣ್ಣೀರು ಹಾಕಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಪದೇ ಪದೇ ಅತ್ತಿದ್ದು, ದೇವರ ಮುಂದೆ ನಿಂತು ಪ್ರಾರ್ಥನೆ ಮಾಡುವಾಗಲೂ ಜೋರಾಗಿ ಕಣ್ಣೀರು ಹಾಕಿದ್ದಾರೆ. ಇದನ್ನು ಮನೆಯ ಕೆಲ ಸ್ಪರ್ಧಿಗಳು ಗಮನಿಸಿದ್ದಾರೆ. ಚೈತ್ರಾ ದೇವರ ಮುಂದೆ ಪ್ರಾರ್ಥನೆ ಮಾಡುತ್ತಾ ಅತ್ತಿರುವುದು ನಾಟಕ ಎಂದು ರಾಶಿಕಾ ಅಶ್ವಿನಿ ಗೌಡ ಹಾಗೂ ಸೂರಜ್ ಮುಂದೆ ಹೇಳಿದ್ದಾರೆ. ಇನ್ನು ಚೈತ್ರಾ ಕುಂದಾಪುರ ದೇವರ ಮುಂದೆ ಕಣ್ಣೀರು ಹಾಕಿದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.











