ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪವಿತ್ರ ಗೌಡಗೆ ನ್ಯಾಯಾಲಯ ಟಿವಿ ಭಾಗ್ಯ ಕರುಣಿಸಿದೆ.

ಇಂದು ನಡೆದ ವಿಚಾರಣೆ ವೇಳೆ ಪವಿತ್ರಾಗೌಡ ಗೆ ಟಿವಿ ಕೊಟ್ಟಿಲ್ಲ. ಪವಿತ್ರಾಗೌಡಗೆ ಟಿವಿ, ಮನೆ ಊಟ ನೀಡಬೇಕೆಂದು ವಕೀಲ ಬಾಲನ್ ಮನವಿ ಮಾಡಿದ್ದರು.

ಇದಕ್ಕೆ ಜೈಲು ಕೈಪಿಡಿಯಲ್ಲಿರುವುದನ್ನು ಮಾತ್ರ ನೀಡಬೇಕು ಎಂದು ಎಸ್ ಪಿಪಿ ಪ್ರಸನ್ನಕುಮಾರ್ ಪ್ರತಿಕ್ರಿಯೆ ನೀಡಿದ್ದರು.
ಈ ಬಗ್ಗೆ ಪರಿಶೀಲಿಸಿದ ಕೋರ್ಟ್ ಪವಿತ್ರಗೌಡ ಇರುವ ಸೆಲ್ ಗೆ ಟಿವಿ ಅಳವಡಿಸಲು ಸೂಚನೆ ನೀಡಿದೆ. ಹಾಗೆ ದಿನಪತ್ರಿಕೆ, ಲೈಬ್ರರಿಯ ಪುಸ್ತಕ ಒದಗಿಸಲೂ ತಿಳಿಸಿದೆ.













