ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು ಮೃತನ ತಂದೆ ತಾಯಿ ಸಾಕ್ಷ್ಯ ವಿಚಾರಣೆ ನಡೆದಿದೆ. ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭವಾದ ವಿಚಾರಣೆ ಸಂಜೆ 5 ಗಂಟೆ ತನಕ ನಡೆದು ನಾಳೆಗೆ ಮುಂದೂಡಿಕೆಯಾಗಿದೆ

57 ನೇ ಸಿಸಿಹೆಚ್ ಕೋರ್ಟ್ ನಲ್ಲಿ ಸಾಕ್ಷ್ಯ ವಿಚಾರಣೆಯ ಪ್ರಾರಂಭದ ಸುಮಾರು ಒಂದು ಗಂಟೆಗಳ ಕಾಲ ರೇಣುಕಾಸ್ವಾಮಿ ತಾಯಿ ಹೇಳಿಕೆ ದಾಖಲಿಸಲಾಗಿದ್ದು, ವಿಟ್ನೆಸ್ ಬಾಕ್ಸ್ ನಲ್ಲಿ ನಿಂತು ಇಬ್ಬರು ಹೇಳಿಕೆ ನೀಡಿದ್ದಾರೆ. ಕೋರ್ಟ್ ಇಂದೇ ಈ ಇಬ್ಬರ ಹೇಳಿಕೆ ದಾಖಲಿಸಲಿದ್ದು, ಇದಾದ ಬಳಿಕ ಕ್ರಾಸ್ ಎಕ್ಸಾಮಿನೇಷನ್ ಪ್ರಕ್ರಿಯೆ ಶುರುವಾಗಿತ್ತು. ಮೊದಲಿಗೆ ಪವಿತ್ರಾ ಗೌಡ ವಕೀಲ ಬಾಲನ್ ರೇಣುಕಾಸ್ವಾಮಿ ತಾಯಿ ರತ್ನಪ್ರಭರನ್ನ ರೇಣುಕಾಸ್ವಾಮಿ ದೈನಂದಿನ ಚಟುವಟಿಕೆ, ಕಾಣೆಯಾಗಿದ್ದರ ಬಗ್ಗೆ, ಕೊಲೆಯಾಗಿದ್ದರ ಬಗ್ಗೆ ಕೆಲ ಪ್ರಶ್ನೆಗಳನ್ನು ಕೇಳಿದರು. ಈ ಪ್ರಶ್ನೆಗಳಿಗೆ ತಾವು ನೋಡಿದಂತೆ, ಕೇಳಿದಂತೆ ರತ್ನಪ್ರಭ ಉತ್ತರ ನೀಡಿದರು.

ಸಂಜೆ 5 ಗಂಟೆ ಸುಮಾರಿಗೆ ಇನ್ನು 2 ಗಂಟೆ ಕ್ರಾಸ್ ಎಕ್ಸಾಮಿನೇಷನ್ ಮಾಡಬೇಕು ಎಂದು ವಕೀಲ ಬಾಲನ್ ಮನವಿ ಮಾಡಿದ್ದರಿಂದ ವಿಚಾರಣೆ ನಾಳೆಗೆ ಮುಂದೂಡಲಾಗಿದೆ. ಹೀಗಾಗಿ ನಾಳೆಯೂ ರೇಣುಕಾಸ್ವಾಮಿ ತಾಯಿ ರತ್ನಪ್ರಭ, ತಂದೆ ಕಾಶಿನಾಥಯ್ಯ ಕ್ರಾಸ್ ಎಕ್ಸಾಮಿನೇಷನ್ ನಡೆಯಲಿದೆ. ಜೊತೆಗೆ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಕೂಡ ಇಬ್ಬರನ್ನ ಕ್ರಾಸ್ ಎಕ್ಸಾಮಿನೇಷನ್ ಮಾಡಲಿದ್ದಾರೆ
![]()
ಇನ್ನು ಸಾಕ್ಷ್ಯ ವಿಚಾರಣೆ ಪ್ರಕ್ರಿಯೆಯನ್ನ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಣೆ ಮಾಡಿದರು












