• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಚಂಡಮಾರುತದ ಅಬ್ಬರಕ್ಕೆ ನಲುಗಿದ ಶ್ರೀಲಂಕಾ: ಭಾರತದಿಂದ ನೆರವು

ಪ್ರತಿಧ್ವನಿ by ಪ್ರತಿಧ್ವನಿ
November 29, 2025
in ವಿದೇಶ
0
ಚಂಡಮಾರುತದ ಅಬ್ಬರಕ್ಕೆ ನಲುಗಿದ ಶ್ರೀಲಂಕಾ: ಭಾರತದಿಂದ ನೆರವು
Share on WhatsAppShare on FacebookShare on Telegram
ADVERTISEMENT

ಕೊಲಂಬೋ: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡು ತೀವ್ರಗೊಂಡಿರುವ ದಿತ್ವಾ ಸೈಕ್ಲೋನ್ ನಿಂದ ಶ್ರೀಲಂಕಾದಲ್ಲಿ 123 ಮಂದಿ ಸಾವನ್ನಪ್ಪಿದ್ದು, 130 ಮಂದಿ ನಾಪತ್ತೆಯಾಗಿದ್ದಾರೆ.

ದಿತ್ವಾ ಚಂಡಮಾರುತ ಶ್ರೀಲಂಕಾದಾದ್ಯಂತ ಭಾರಿ ಹಾನಿಯನ್ನುಂಟು ಮಾಡಿದ್ದು, ದೇಶ ಅಕ್ಷರಶಃ ನಲುಗಿ ಹೋಗಿದೆ.43,995 ಜನರು ಸರ್ಕಾರಿ ಸ್ವಾಮ್ಯದ ಪುನರ್ ವಸತಿ ಕೇಂದ್ರಗಳಿಗೆ ಸ್ಥಳಾಂತರಗೊಂಡಿದ್ದಾರೆ.

DK Suresh on Power Tussle: ಬಣ ರಾಜಕಾರಣಕ್ಕೆ ಇನ್ನಾದ್ರೂ ಬ್ರೇಕ್ ಬೀಳುತ್ತಾ? ಡಿಕೆ ಸುರೇಶ್ ಏನಂತಾರೆ?

ಚಂಡಮಾರುತವು ಮುಖ್ಯವಾಗಿ ಪೂರ್ವ ಕರಾವಳಿಯ ಟ್ರಿಂಕೋಮಲೀ ಸಮೀಪ ಕೇಂದ್ರಬಿಂದುವನ್ನು ಹೊಂದಿದೆ. ಪರಿಣಾಮ ಗಾಲೆ, ಬಡುಲ್ಲಾ, ಮಟಾರಾ ಸೇರಿದಂತೆ ಹಲವು ಜಿಲ್ಲೆಗಳು ಭಾರೀ ಹಾನಿಗೊಳಗಾಗಿವೆ. 12,313 ಕುಟುಂಬಗಳು ನೇರವಾಗಿ ಬಾಧಿತವಾಗಿದ್ದು, 43,991 ಮಂದಿ ತಮ್ಮ ನಿವಾಸಗಳನ್ನು ತೊರೆಯುವಂತಾಗಿದೆ.

 

ಭಾರೀ ಮಳೆಯಿಂದ ಅನೇಕ ಪ್ರದೇಶಗಳಲ್ಲಿ ರಸ್ತೆಗಳು ಕೊಚ್ಚಿ ಹೋಗಿ ಜಲಾವೃತಗೊಂಡಿದ್ದು, ಸಾರ್ವಜನಿಕ ಸಾರಿಗೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಸಂಪೂರ್ಣ ರೈಲು ಸಂಚಾರ ನಿಲ್ಲಿಸಲಾಗಿದೆ. ಅನೇಕ ರೈಲು ನಿಲ್ದಾಣಗಳು ನೀರಿನಲ್ಲಿ ಮುಳುಗಿ ಹೋಗಿರುವುದರಿಂದ ಟ್ರ್ಯಾಕ್‌ಗಳ ಮೇಲಿನ ಸಂಚಾರಕ್ಕೆ ಅಪಾಯ ಉಂಟಾಗಿದೆ.

ಕೊಲಂಬೋಗೆ ಆಗಮಿಸಬೇಕಿದ್ದ ಅಂತರಾಷ್ಟ್ರೀಯ ವಿಮಾನಗಳನ್ನು ತಿರುವನಂತಪುರ, ಕೊಚ್ಚಿನ್ ಮತ್ತು ಮಟ್ಟಾಲಾ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗಿದೆ. ಗೋಚರತೆ ತೀವ್ರವಾಗಿ ಕುಸಿದಿರುವುದರಿಂದ ಶ್ರೀಲಂಕನ್ ಏರ್‍ಲೈನ್ಸ್ ಸೇರಿದಂತೆ ಅನೇಕ ವಿಮಾನ ಸೇವೆಗಳು ವಿಳಂಬವಾಗಿವೆ. ನಿರಂತರ ಮಳೆ, ಭೂಕುಸಿತ ಮತ್ತು ಪ್ರವಾಹದಿಂದ ಹಾನಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನಿಸಿದ್ದಾರೆ.

ಇನ್ನು ತುರ್ತು ನೆರವಿಗಾಗಿ 1.2 ಶತಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. 2025ರ ಬಜೆಟ್‌ನಡಿ ತುರ್ತು ನಿರ್ವಹಣೆಗೆ 30 ಶತಕೋಟಿ ರೂಪಾಯಿ ಮೀಸಲಿಟ್ಟು, ಆಡಳಿತಾತ್ಮಕ ವಿಳಂಬ ತಪ್ಪಿಸಲು ಹೊಸ ಸುತ್ತೋಲೆ ಹೊರಡಿಸಿ, ರಾಷ್ಟ್ರ ಮಟ್ಟದಲ್ಲಿ ಸಂಕಷ್ಟ ನಿರ್ವಹಣಾ ಸಮನ್ವಯ ಘಟಕ ಹಾಗೂ 10 ತುರ್ತು ಹಾಟ್‌ಲೈನ್‌ಗಳ ಸಕ್ರಿಯಗೊಳಿಸಲು ತಿಳಿಸಿದ್ದಾರೆ. ಕೊಲಂಬೋದ ಪ್ರಮುಖ ರಸ್ತೆಗಳಲ್ಲಿ ನೀರಿನ ಮಟ್ಟ ಹೆಚ್ಚಳದಿಂದ ಸಾರಿಗೆ ಕಷ್ಟವಾಗಿದ್ದು, ದಕ್ಷಿಣ ಎಕ್ಸ್‌ಪ್ರೆಸ್‌ವೇಯ ಕೆಲವು ಭಾಗಗಳಲ್ಲಿ ಸಂಚಾರವನ್ನು ನಿಲ್ಲಿಸಲಾಗಿದೆ. ಹೆಚ್ಚಿನ ಪ್ರದೇಶಗಳಲ್ಲಿ ನದಿ-ಜಲಾಶಯಗಳ ನೀರಿನ ಮಟ್ಟ ಅಪಾಯದ ಮಟ್ಟ ತಲುಪಿದ್ದು, ಜನರಿಗೆ ಸ್ಥಳಾಂತರ ಸೂಚನೆಗಳನ್ನು ನೀಡಲಾಗಿದೆ.

Siddaramaiah-DKS: ನಾಳೆಯಿಂದ ಯಾವುದೇ ಗೊಂದಲ ಇರಲ್ಲ ಎಂದ ಸಿದ್ದರಾಮಯ್ಯ #pratidhvani

‌ಇನ್ನು ಶ್ರೀಲಂಕಾದಲ್ಲಿ ಸಂಭವಿಸಿದ ಜೀವಹಾನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಭಾರತದಿಂದ ಹೆಚ್ಚಿನ ಸಹಾಯವನ್ನು ಕಳುಹಿಸುವ ಬಗ್ಗೆ ಭರವಸೆ ನೀಡಿದ್ದಾರೆ.

Tags: CycloneRain EffectSrilankaSrilanka Rain
Previous Post

ಲವ್ ಮಾಕ್ಟೇಲ್ ಸಿನಿಮಾದಲ್ಲಿ ನೇರಾನೇರಾ ಬಾಡಿ ಶೇಮಿಂಗ್: ನಟಿ ಗೀತಾ ಭಾರತಿ ಬೇಸರ

Next Post

ಸಿಎಂ ಕೊಟ್ಟ ಮಾತಿನಂತೆ ನಡೆಯಬೇಕು ಎಂದು ನಾನು ಹೇಳಿಲ್ಲ-ಡಿ.ಕೆ‌. ಸುರೇಶ್..!

Related Posts

22 ಭಾರತೀಯರಿದ್ದ ಹಡಗುಗಳ ಅಪಹರಣ: ಯೆಮೆನ್, ಸೊಮಾಲಿಯಾ ಕರಾವಳಿಯಲ್ಲಿ ಹೆಚ್ಚಿದ ಆತಂಕ
Top Story

22 ಭಾರತೀಯರಿದ್ದ ಹಡಗುಗಳ ಅಪಹರಣ: ಯೆಮೆನ್, ಸೊಮಾಲಿಯಾ ಕರಾವಳಿಯಲ್ಲಿ ಹೆಚ್ಚಿದ ಆತಂಕ

by ಪ್ರತಿಧ್ವನಿ
August 21, 2026
0

ಯೆಮೆನ್ ಮತ್ತು ಸೊಮಾಲಿಯಾ ಕರಾವಳಿ ಸಮೀಪ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 22 ಭಾರತೀಯ ಸಿಬ್ಬಂದಿಯಿದ್ದ ಎರಡು ವಾಣಿಜ್ಯ ಹಡಗುಗಳನ್ನು ಸಶಸ್ತ್ರ ದುಷ್ಕರ್ಮಿಗಳು ಅಪಹರಿಸಿದ್ದಾರೆ. https://youtu.be/Xi8SRFQXkrQ?si=SpzaOeOtTSfFKt_V...

Read moreDetails
ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ: 38 ಸಾ**, ಸುನಾಮಿ ಎಚ್ಚರಿಕೆ

ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ: 38 ಸಾ**, ಸುನಾಮಿ ಎಚ್ಚರಿಕೆ

August 15, 2026
ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

August 13, 2026
ಮೈದಾನದಲ್ಲೇ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾ**

ಮೈದಾನದಲ್ಲೇ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾ**

August 7, 2026
ಮಧ್ಯಪ್ರಾಚ್ಯ ಯುದ್ಧದ ಕಾರ್ಮೋಡ, ದೇಶದಲ್ಲಿ ಇಂಧನ ಅಭದ್ರತೆ..? ; ತುರ್ತು ಹೈವೋಲ್ಟೇಜ್‌ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿ..

ಮಧ್ಯಪ್ರಾಚ್ಯ ಯುದ್ಧದ ಕಾರ್ಮೋಡ, ದೇಶದಲ್ಲಿ ಇಂಧನ ಅಭದ್ರತೆ..? ; ತುರ್ತು ಹೈವೋಲ್ಟೇಜ್‌ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿ..

July 30, 2026
Next Post
ಸಿಎಂ ಕೊಟ್ಟ ಮಾತಿನಂತೆ ನಡೆಯಬೇಕು ಎಂದು ನಾನು ಹೇಳಿಲ್ಲ-ಡಿ.ಕೆ‌. ಸುರೇಶ್..!

ಸಿಎಂ ಕೊಟ್ಟ ಮಾತಿನಂತೆ ನಡೆಯಬೇಕು ಎಂದು ನಾನು ಹೇಳಿಲ್ಲ-ಡಿ.ಕೆ‌. ಸುರೇಶ್..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada