ಸೀಸನ್ 12ರ ಬಿಗ್ ಬಾಸ್ ಮನೆಗೆ ಈ ವಾರ ಉಗ್ರಂ ಮಂಜು ಅವರ ಬ್ಯಾಚುಲರ್ ಪಾರ್ಟಿ ಆಚರಿಸಲು ಬಿಗ್ ಬಾಸ್ ಕನ್ನಡ ಸೀಸನ್ -11 ಸ್ಪರ್ಧಿಗಳಾದ ತ್ರಿವಿಕ್ರಂ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ರಜತ್ ಹಾಗೂ ಉಗ್ರಂ ಮಂಜು ಆಗಮಿಸಿದ್ದರು. ಅತಿಥಿಗಳ ಆಗಮನದಿಂದ ಕಳೆಗಟ್ಟಬೇಕಿದ್ದ ಬಿಗ್ಬಾಸ್ ಮನೆ ಈ ವಾರ ಇನ್ನಷ್ಟು ಜಗಳ ಕೂಗಾಟಗಳಿಂದ ಕೂಡಿತ್ತು.

ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕಿರುವುದು ಬಿಗ್ ಬಾಸ್ ಮನೆಯ ಈಗಿನ ಸ್ಪರ್ಧಿಗಳ ಕರ್ತವ್ಯವಾಗಿತ್ತು. ಹೀಗಾಗಿ ಎಲ್ಲರೂ ಅವರನ್ನು ಚೆನ್ನಾಗಿ ನೋಡಿಕೊಂಡರು. ಮೊದಮೊದಲು ಕೌಂಟರ್ ಕೊಡುತ್ತಿದ್ದ ಗಿಲ್ಲಿ ಎರಡನೇ ದಿನಕ್ಕೆ ಫುಲ್ ಸೈಲೆಂಟ್ ಆದರು. ಮಂಜು ಹಾಗೂ ರಜತ್ ಪದೇ ಪದೇ ಗಿಲ್ಲಿ ಮೇಲೆ ಕೂಗಾಡಿರುವುದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ವಾರ ಅನೇಕ ಏರಿಳಿತಗಳಾಗಿದ್ದು, ಕಿಚ್ಚನ ವಾರದ ಪಂಚಾಯ್ತಿಯಲ್ಲಿ ಎಲ್ಲಾದಕ್ಕೂ ಉತ್ತರ ಸಿಗಬೇಕಿದೆ. ಈಗಾಗಲೇ ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ʼಮನೆಗೆ ಪ್ರವೇಶ ಮಾಡಿರುವಂತಹ ಅತಿಥಿಗಳ ಅತೀರೇಖ ಮಾಡಿದ್ರಾ..? ಸಿಬ್ಬಂದಿಗಳು ಗೆದ್ರಾ..? ಅಥವಾ ಹೆಡ್ ವೈಟರ್ ಆಗಿ ಎಡವಿ ಬಿದ್ರಾ..? ಪ್ರಶ್ನೆಗೆ ಯಾರಿಗೆ..? ಉತ್ತರ ಯಾರಿಗೆ..? ಪಾಠ ಯಾರಿಗೆ..?ʼ ಎನ್ನುವ ಪ್ರಶ್ನೆಗಳನ್ನು ಪ್ರೋಮೋದಲ್ಲಿ ಕಿಚ್ಚ ಸುದೀಪ್ ಕೇಳಿದ್ದು, ಪೂರ್ಣ ಸಂಚಿಕೆಯನ್ನು ವಾರದ ಕಥೆ, ಕಿಚ್ಚನ ಜೊತೆ ವೀಕ್ಷಿಸಬೇಕಾಗಿದೆ.












