ಮೇಷ ರಾಶಿಯ ಇಂದಿನ ಭವಿಷ್ಯ

ಮೇಷ ರಾಶಿಯವರು ಇಂದು ಹೊಸ ಕೆಲಸಗಳಲ್ಲಿ ಪ್ರಗತಿ ಸಾಧಿಸುವಿರಿ. ಆರ್ಥಿಕವಾಗಿ ಲಾಭದ ದಿನವಾಗಿದೆ. ಆದರೆ ತುರ್ತು ನಿರ್ಧಾರಗಳನ್ನು ತಪ್ಪಿಸಿ. ಯಾವುದೇ ನಿರ್ಧಾರಗಳಿದ್ದರೂ ಆಪ್ತರೊಂದಿಗೆ ಚರ್ಚಿಸಿ ತೆಗೆದುಕೊಳ್ಳಿ.
ವೃಷಭ ರಾಶಿಯ ಇಂದಿನ ಭವಿಷ್ಯ

ವೃಷಭ ರಾಶಿಯವರ ಕುಟುಂಬದಲ್ಲಿ ಇಂದು ಸಂತೋಷ ಹೆಚ್ಚಾಗಲಿದೆ. ಕೆಲಸದಲ್ಲಿ ಶಾಂತಿ ಇರಲಿದ್ದು, ಬಯಸಿದ ಬಡ್ತಿ ಸಿಗಲಿದೆ. ಹಳೆಯ ಸಮಸ್ಯೆಗೆ ಪರಿಹಾರ ದೊರೆಯುವ ಸೂಚನೆ ಇದೆ.
ಮಿಥುನ ರಾಶಿಯ ಇಂದಿನ ಭವಿಷ್ಯ

ಮಿಥುನ ರಾಶಿಯವರಿಗೆ ಇಂದು ಸಣ್ಣ ಒತ್ತಡ ಇರಬಹುದು. ಅನಗತ್ಯ ಚಿಂತೆಯನ್ನು ದೂರವಿಡಿ. ಎಲ್ಲರೊಂದಿಗೂ ಸಂಯಮದಿಂದ ವರ್ತಿಸಿ. ಕುಟುಂಬಸ್ಥರೊಂದಿಗೆ ದೂರ ಪ್ರಯಾಣದ ಅವಕಾಶ ಸಿಗಲಿದೆ.
ಕಟಕ ರಾಶಿಯ ಇಂದಿನ ಭವಿಷ್ಯ

ಕಟಕ ರಾಶಿಯವರಿಗೆ ಇಂದು ಸ್ನೇಹಿತರಿಂದ ಸಹಕಾರ ದೊರೆಯುತ್ತದೆ. ಹೊಸ ಯೋಜನೆಗಳಿಗೆ ಶುಭಾರಂಭ ಸಿಗಲಿದೆ. ಆರೋಗ್ಯ ಸ್ಥಿರವಾಗಿರಲಿದ್ದು, ಆಹಾರದ ಬಗ್ಗೆ ಕೊಂಚ ಎಚ್ಚರಿಕೆ ಇರಲಿ.
ಸಿಂಹ ರಾಶಿಯ ಇಂದಿನ ಭವಿಷ್ಯ

ಸಿಂಹ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಒಳ್ಳೆಯ ಸುದ್ದಿ ಸಿಗಲಿದೆ. ಹಣಕಾಸಿನಲ್ಲಿ ಚಿಕ್ಕ ಮಟ್ಟದ ಲಾಭವಾಗಲಿದೆ. ಆದರೆ ಖರ್ಚು ನಿಯಂತ್ರಿಸಿ. ಹೊಸಬರೊಂದಿಗೆ ವ್ಯವಹಾರ ಬೇಡ.
ಕನ್ಯಾ ರಾಶಿಯ ಇಂದಿನ ಭವಿಷ್ಯ

ಕನ್ಯಾ ರಾಶಿಯವರು ಇಂದು ಹೆಚ್ಚು ಕೆಲಸಗಳಾದರೂ ದಿನ ಸುಲಭವಾಗಿ ಸರಾಗವಾಗಿ ಸಾಗಲಿದೆ. ಆಧ್ಯಾತ್ಮಿಕ ಆಸಕ್ತಿ ಹೆಚ್ಚಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ಇಷ್ಟದ ಸ್ಥಳಕ್ಕೆ ಭೇಟಿ ನೀಡುವ ಅವಕಾಶ ಸಿಗಲಿದೆ.
ತುಲಾ ರಾಶಿಯ ಇಂದಿನ ಭವಿಷ್ಯ

ತುಲಾ ರಾಶಿಯವರ ಮನೆಯಲ್ಲಿ ಇಂದು ಸಣ್ಣ ಗೊಂದಲದ ವಾತಾವರಣ ನಿರ್ಮಾಣವಾಗಲಿದೆ. ಕೆಲಸದಲ್ಲಿ ನಿಧಾನ ಇರಲಿ. ತಾಳ್ಮೆಯಿಂದ ನಡೆದುಕೊಂಡರೆ ಎಲ್ಲಾ ಕಡೆಗಳಲ್ಲಿಯೂ ಲಾಭ ಸಿಗಲಿದೆ.
ವೃಶ್ಚಿಕ ರಾಶಿಯ ಇಂದಿನ ಭವಿಷ್ಯ

ವೃಶ್ಚಿಕ ರಾಶಿಯವರ ಹಳೆಯ ಕೆಲಸಗಳಿಗೆ ಇಂದು ಉತ್ತಮ ಫಲ ಸಿಗಲಿದೆ. ಹಣಕಾಸಿನಲ್ಲಿ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಹೊಸ ಉದ್ಯೋಗ ಆರಂಭಿಸಲು ಆತ್ಮವಿಶ್ವಾಸ ಹಾಗೂ ಆದಾಯ ಹೆಚ್ಚಳವಾಗಲಿದೆ.
ಧನು ರಾಶಿಯ ಇಂದಿನ ಭವಿಷ್ಯ

ಧನು ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ದೂರ ಪ್ರಯಾಣಕ್ಕೆ ಸೂಚನೆ ಸಿಗಲಿದೆ. ಮನೆಯಲ್ಲಿ ಶಾಂತ ವಾತಾವರಣ ಹೆಚ್ಚಾಗಲಿದೆ.
ಮಕರ ರಾಶಿಯ ಇಂದಿನ ಭವಿಷ್ಯ

ಮಕರ ರಾಶಿಯವರು ಇಂದು ಆರ್ಥಿಕವಾಗಿ ಹೆಚ್ಚು ಪ್ರಗತಿ ಸಾಧಿಸಲಿದ್ದೀರಿ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಉತ್ತೇಜನ ಸಿಗಲಿದೆ. ಯೋಜನೆಗಳು ಯಶಸ್ವಿಯಾಗುವ ಸೂಚನೆ ಇದೆ. ಕೌಟುಂಬಿಕವಾಗಿ ನೆಮ್ಮದಿ ಇರಲಿದೆ.
ಕುಂಭ ರಾಶಿಯ ಇಂದಿನ ಭವಿಷ್ಯ

ಕುಂಭ ರಾಶಿಯವರಿಗೆ ಇಂದಿನ ಆರಂಭದಲ್ಲಿ ಮಾನಸಿಕ ಚಂಚಲತೆ ಹೆಚ್ಚಾದರೂ ಮಧ್ಯಾಹ್ನದ ನಂತರ ಮನಸ್ಸಿಗೆ ಶಾಂತಿ ಸಿಗಲಿದೆ. ಆರೋಗ್ಯ ಕಡೆ ಹೆಚ್ಚಿನ ಗಮನವಹಿಸಿ.
ಮೀನ ರಾಶಿಯ ಇಂದಿನ ಭವಿಷ್ಯ

ಮೀನ ರಾಶಿಯವರಿಗೆ ಇಂದು ಸ್ನೇಹಿತರ ಸಹಕಾರ ಸಿಗಲಿದೆ. ಹೊಸ ಕೆಲಸಗಳ ಆರಂಭಕ್ಕೆ ಇಂದು ಉತ್ತಮವಾದ ದಿನವಾಗಿದೆ. ಮನೆಯಲ್ಲಿ ಸಂತೋಷ ಹೆಚ್ಚಾಗಲಿದೆ.












