ಬೆಂಗಳೂರು: ನಗರದಲ್ಲಿ ನಡೆದ 7.11 ಕೋಟಿ ರೂ ದರೋಡೆ ಪ್ರಕರಣ ಸಂಬಂಧ ಹಣ ತುಂಬಲು ಬಳಸುತ್ತಿದ್ದ ಬಾಕ್ಸ್ ಗಳು ಆಂದ್ರಪ್ರದೇಶದ ಚಿತ್ತೂರು ಬಳಿ ಪತ್ತೆಯಾಗಿವೆ. ಆದರೆ ಸಿಕ್ಕಿರೋ 2 & 3 ಬಾಕ್ಸ್ ಗಳು ಖಾಲಿಯಾಗಿದ್ದವು.

ದರೋಡೆಕೋರರು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮೂಲಕ ಪರಾರಿಯಾಗಿದ್ದರು ಎಂದು ತಿಳಿದುಬಂದ ಹಿನ್ನೆಲೆ ಎರಡು ರಾಜ್ಯದ ಪೊಲೀಸರ ತನಿಖೆ ವೇಳೆ ಚಿತ್ತೂರು ಜಿಲ್ಲೆಯ ಕುಪ್ಪಂ ತಾಲ್ಲೂಕಿನ ಕುರ್ಮಾನಿಪಲ್ಲಿಯ ನಿರ್ಜನ ಪ್ರದೇಶದ ಬಳಿ ಸಿಎಂಎಸ್ ವಾಹನದಲ್ಲಿ ಹಣ ತುಂಬಲು ಬಳಸುವ ಬಾಕ್ಸ್ಗಳು ಪತ್ತೆಯಾಗಿವೆ. ಆದರೆ ದರೋಡೆಕೋರರು ಹಣದ ಬಾಕ್ಸ್‌ಗಳನ್ನು ಎಸೆದು ಪರಾರಿಯಾಗಿದ್ದಾರೆ.

ಇನ್ನು ಪ್ರಕರಣದ ಪ್ರಮುಖ ಆರೋಪಿ ಎಕ್ಸ್ ವಿಯರ್‌ನನ್ನ ಪೊಲೀಸರು ಬಂಧಿಸಿದ್ದಾರೆ. ರಾಬರಿ ನಂತರ ಇನೊವಾ ಕಾರಿನ ಜೊತೆ ವ್ಯಾಗನಾರ್ ಕಾರ್ ನಲ್ಲಿ ತೆರಳಿದ್ದ ಎಕ್ಸ್ ವಿಯರ್, ಕುಪ್ಪಂ ನಲ್ಲಿ ಕಾರು ನಿಲ್ಲಿಸಿ ಹಣವನ್ನು ಚೀಲದಲ್ಲಿ ತುಂಬಿಕೊಂಡು ಎಸ್ಕೇಪ್ ಆಗಿದ್ದ. ಆದರೆ ತಮಿಳುನಾಡಿನಲ್ಲಿ ಎಕ್ಸ್ ವಿಯರ್ ನನ್ನ ಬಂಧಿಸಿ ಕರೆತಂದ ಪೊಲೀಸರು ವಿಚಾರಣೆ ನಡೆಸಿತ್ತಿದ್ದಾರೆ. ಹಾಗೆ ಪ್ರಕರಣ ಸಂಬಂಧ ಇದುವರೆಗೆ 5-6 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.













