ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ನವೆಂಬರ್ ಕ್ರಾಂತಿ ವಿಚಾರ ಜೋರಾಗಿದೆ. ಒಂದು ಕಡೆ ಡಿಕೆಶಿ ಬೆಂಬಲಿಗ ಶಾಸಕರು ಮಲ್ಲಿಕಾರ್ಜುನ ಖರ್ಗೆ ಭೇಟಿಗೆ ದೆಹಲಿಗೆ ಹೋಗಿದ್ರೆ ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಬೆಂಬಲಿಗ ಸಚಿವರು, ಶಾಸಕರು ನಿನ್ನೆ ರಾತ್ರಿ ಡಿನ್ನರ್ ಮೀಟಿಂಗ್ ನೆಪದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.

ನಿನ್ನೆ ರಾತ್ರಿ ಕ್ರೆಸೆಂಟ್ ರಸ್ತೆಯಲ್ಲಿರೋ ಸಚಿವ ಸತೀಶ್ ಜಾರಕಿಹೊಳಿ ಸರ್ಕಾರಿ ನಿವಾಸದಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ, ದಿನೇಶ್ ಗುಂಡೂರಾವ್, ಹೆಚ್.ವೆಂಕಟೇಶ್, ಮುನಿಯಪ್ಪ, ಮಾಜಿ ಸಚಿವ ರಾಜಣ್ಣ ಭಾಗಿಯಾಗಿ ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ಡಿನ್ನರ್ ಮಿಟಿಂಗ್ ಬಳಿಕ ಮಾತಾಡಿದ ಮಾಜಿ ಸಚಿವ ರಾಜಣ್ಣ, ಡಿಕೆಶಿ ಬೆಂಬಲಿಗರು ದೆಹಲಿಗೆ ಯಾವ ಉದ್ದೇಶಕ್ಕೆ ದೆಹಲಿಗೆ ಹೋಗಿದ್ದಾರೆ ಅನ್ನೋದು ಗೊತ್ತಿಲ್ಲ. ನಾವು ಇಲ್ಲಿ ಊಟಕ್ಕೆ ಸೇರಿದ್ದು, ಪಕ್ಷವನ್ನ 2028ಕ್ಕೆ ಅಧಿಕಾರಕ್ಕೆ ತರಲು ಕಾರ್ಯತಂತ್ರ ಮಾಡುವುದು ನಮ್ಮ ಉದ್ದೇಶವಾಗಿದೆಯೇ ಹೊರತು ಅದನ್ನ ಬಿಟ್ಟರೆ ಏನಿಲ್ಲ ಎಂದರು

ಇನ್ನು ಡಿಕೆ ಸುರೇಶ್ ಸಿದ್ದರಾಮಯ್ಯ ಮಾತು ಉಳಿಸಿಕೊಳ್ಳುತ್ತಾರೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಎಐಸಿಸಿ ಪತ್ರದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿಕೆಶಿವಕುಮಾರ್ ಉಪಮುಖ್ಯಮಂತ್ರಿ ಅಂತ ಹೇಳಿದ್ರು. ಈ ವಿಲ್ ಕಂಟಿನ್ಯೂ ಅಪ್ ಟು ದಿ ಪಾರ್ಲಿಮೆಂಟ್ ಎಲೆಕ್ಷನ್ ಅಂತ ಹೇಳಿದ್ರು.
ಇದು ರೈಟಿಂಗ್ ನಲ್ಲಿದೆ. ಅದು ಫಾಲೋ ಆಗಿದಿಯಾ…?
ಬೇರೆಯವರನ್ನ ಕೇಳಬೇಕಾದ್ರೆ ಅವರು ಅದೇ ರೀತಿ ನಡೆದುಕೊಳ್ಳಬೇಕಲ್ವಾ ಎಂದು ಪ್ರಶ್ನಿಸಿದರು.
![]()
ನವೆಂಬರ್ ಕ್ರಾಂತಿ ವಿಚಾರವಾಗಿ ಮಾತನಾಡಿದ ರಾಜಣ್ಣ,
ರಾಜಕಾರಣ ನಿಂತ ನೀರಲ್ಲ. ನಿರಂತರ ಪ್ರಕ್ರಿಯೆ. ನವೆಂಬರ್, ಡಿಸೆಂಬರ್, ಜನವರಿಯಲ್ಲೂ ಕ್ರಾಂತಿ ಆಗುತ್ತೆ.
ರಾಜಕಾರಣದಲ್ಲಿ ಯಾರು ಸನ್ಯಾಸಿ ಅಲ್ಲ. ಅಧಿಕಾರ ಇರುವವರು ಉಳಿಕೊಳ್ಳಲು ಹೋರಾಟ ಇರುತ್ತೆ.
ಇಲ್ಲದೆ ಇರುವವರು ಅಧಿಕಾರ ಪಡೆಯಲು ಕಾಯುತ್ತಾರೆ.
ಮುಂದೆ ಏನಾಗುತ್ತೋ ನೋಡೋಣ ಎಂದು ಹೇಳಿದ್ದಾರೆ.












