
“ಈ ಕಾರ್ಯಕ್ರಮದಲ್ಲಿ ಬಾಗವಹಿಸುವುದು ಒಂದು ಸಂಭ್ರಮ. ಯಾಕೆಂದರೆ ಸಾಧಕರಿಗೆ ಗೌರವಿಸುವ ಕಾರ್ಯಕ್ರಮವಾಗಿದೆ. ಐಟಿ ಎಕ್ಸಪೋರ್ಟ್ ಅಂದರೆ ಕೇವಲ ಹಣಕಾಸಿನ ವ್ಯವಹಾರ ಅಷ್ಟೇ ಅಲ್ಲ. ಎಕ್ಸಪೋರ್ಟ್ ಜಾಸ್ತಿ ಆದಂತೆ ಉದ್ಯೋಗ ಸೃಷ್ಟಿಯೂ ಹೆಚ್ಚಾಗುತ್ತದೆ. ಜನರ ಜೀವನ ಮಟ್ಟ ಸಹ ಅಭಿವೃದ್ಧಿ ಆಗುತ್ತದೆ. ಸಾಮಾಜಿಕ ವ್ಯವಸ್ಥೆ ಸುಧಾರಿಸುತ್ತದೆ. ಕರ್ನಾಟಕ ದೇಶಕ್ಕೆ ಐಟಿ ವಿಭಾಗದಲ್ಲಿ ಲೀಡರ್. ಒಟ್ಟು ದೇಶದ ಐಟಿ ಎಕ್ಸಪೋರ್ಟ್ ನಲ್ಲಿ ಸುಮಾರು 35 ರಿಂದ 40% ನಮ್ಮ ರಾಜ್ಯವೇ ಮಾಡುತ್ತಿದೆ. ದೇಶದ ಎಲ್ಲ ಭಾಗಗಳಿಂದ ಶಿಕ್ಷಣಕ್ಕಾಗಿಯೂ ನಮ್ಮ ರಾಜ್ಯಕ್ಕೆ ಯುವಜನತೆ ಆಗಮಿಸುತ್ತಾರೆ. ಉತ್ತಮ ರೀತಿಯ ಶಿಕ್ಷಣ ಸಂಸ್ಥೆಗಳು ನಮ್ಮ ರಾಜ್ಯದಲ್ಲಿದೆ. ಜ್ಞಾನ ಮತ್ತು ತಂತ್ರಜ್ಞಾನ ಒಂದಕ್ಕೊಂದು ಹತ್ತಿರದ ಸಂಬಂಧ ಹೊಂದಿದ್ದು, ಕರ್ನಾಟಕದ ಐಟಿ ವಲಯದ ಬೆಳವಣಿಗೆಗೆ ಇದೂ ಒಂದು ಕಾರಣ. ನಮ್ಮ ಸರ್ಕಾರ, ಅದರಲ್ಲಿಯೂ ಐಟಿ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಹೆಚ್ಚಿನ ಒತ್ತು ನೀಡುವ ಜೊತೆಗೆ ಉದ್ಯಮ ಸ್ನೇಹಿ ಸರ್ಕಾರಿ ನೀತಿಯನ್ನು ತಂದಿದ್ದಾರೆ. ಸ್ಟಾರ್ಟ್ ಪ್ ಗಳಿಗೆ ಹೆಚ್ಚಿನ ಸಲಹೆ, ತಂತ್ರಜ್ಞಾನ ಸಹಾಯ ನೀಡಲಾಗುತ್ತಿದೆ. ಅವರ ಈ ಕಾರ್ಯದಿಂದ ಕರ್ನಾಟಕ ಸದಾ ಮುಂದಿರಲು ಸಾಧ್ಯವಾಗಿದೆ”

ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನದ ಅಗತ್ಯ ಕುರಿತು ಮಾತನಾಡಿದ ದಿನೇಶ್ ಗುಂಡೂರಾವ್
“ಆರೋಗ್ಯ ಸಚಿವನಾಗಿ, ಆರೋಗ್ಯ ಕ್ಷೇತ್ರಕ್ಕೂ ತಂತ್ರಜ್ಞಾನದ ಹೆಚ್ಚಿನ ಸಹಾಯ ಬೇಕಾಗಿದೆ. ನಮ್ಮ ಇಲಾಖೆಗೂ ಒಬ್ಬ ತಂತ್ರಜ್ಞಾನ ಪರಿಣಿತ ಅಧಿಕಾರಿಯನ್ನು ನೇಮಿಸಿಕೊಳ್ಳುವ ಕುರಿತು ಯೋಚಿಸುತ್ತಿದ್ದೇನೆ. ಯಾಕೆಂದರೆ ಎಐ ಮತ್ತು ಟೆಲಿಮೆಡಿಸಿನ್ ನಿಂದ ಹಳ್ಲಿಗಳಿಗಲ್ಲಿಯೂ ಅತ್ಯುತ್ತಮ ವೈದ್ಯಕೀಯ ನೆರವು ನೀಡಲು ಸಹಕಾರಿ ಆಗಲಿದೆ. ನಾವು ಸರಿಯಾಗಿ ಇದನ್ನು ಕಾರ್ಯರೂಪಕ್ಕೆ ತಂದರೆ ಹೆಲ್ತ ವಿಭಾಗದಲ್ಲಿಯೂ ದೇಶಕ್ಕೇ ಮಾದರಿ ಆಗಲಿದ್ದೇವೆ”.

ಇಲ್ಲಿ ಬೇರೆ ಬೇರೆ ಪ್ರದೇಶದಿಂದ, ಹಿನ್ನಲೆಯಿಂದ ಬಂದು ಸಾಧನೆ ಮಾಡಿದವರಿದ್ದಾರೆ. ನಿಮಗೆಲ್ಲರಿಗೂ ಅಭಿನಂದನೆಗಳು. ತಂತ್ರಜ್ಞಾನ ನಿಂತ ನೀರಲ್ಲ. ಸದಾ ಹೊಸ ಹೊಸ ಆವಿಷ್ಕರದ ಕುರಿತು ಕೆಲಸ ಮಾಡುತ್ತಿರಬೇಕು. ನಿಮ್ಮ ಜೊತೆ ನಮ್ಮ ಸರ್ಕಾರದ ಬೆಂಬಲ ಇರುತ್ತದೆ. ಕರ್ನಾಟಕವನ್ನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಯಾವಾಗಲೂ ಮುಂಚೂಣಿಯಲ್ಲಿಡುವ ಮೂಲಕ, ಸಾಮಾಜಿಕ ಸುಸ್ಥಿರತೆ ತರಲು ಶ್ರಮಿಸೋಣ. ಎಂದು ಹೇಳಿದರು.






