ಬೆಳಗಾವಿ: ರಾಜ್ಯ ಸಂಪುಟ ಪುನಾರಚನೆ ಯಾವಾಗ ಆಗುತ್ತೆ ಎನ್ನುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸತೀಶ್, ಸಂಪುಟ ಪುನಾರಚನೆ ಬಗ್ಗೆ ಕಾದು ನೋಡಬೇಕು. ಅದು ಯಾವಾಗ ಮಾಡ್ತಾರೆ ಅನ್ನೋದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು. ಹಾಗೆ ಡಿಕೆಶಿ ಮತ್ತೆ ದೆಹಲಿಗೆ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್, ಅವರು ಹೋಗ್ತಾರೆ ಬರ್ತಾರೆ.. ಬೇರೆ ಬೇರೆ ಕೆಲಸ ಇರುತ್ತೆ ಎಂದಿದ್ದಾರೆ.
ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಲ್ಲ ಎಂಬ ಡಿಕೆಶಿ ಮಾತಿಗೆ ಪ್ರತಿಕ್ರಿಯಿಸಿ, ಅಧ್ಯಕ್ಷ ಸ್ಥಾನ ಬಿಡೋದಕ್ಕೆ ಯಾರು ಹೇಳಿಲ್ಲ. ಅವರೇ ಇರ್ತಾರೆ ಎಂದಿದ್ದು, ಸದ್ಯಕ್ಕೆ ನಾನು ಆ ಸ್ಥಾನದ ಅಕಾಂಕ್ಷಿಯಲ್ಲ, ಅವಕಾಶ ಬಂದಾಗ ನೋಡೋನಾ ಎಂದು ಹೇಳಿದ್ದಾರೆ.





