ಮೇಷ ರಾಶಿಯ ಈ ದಿನದ ಭವಿಷ್ಯ

ಮೇಷ ರಾಶಿಯರಿಗೆ ಇಂದು ವೃತ್ತಿ ರಂಗದಲ್ಲಿ ನಿರೀಕ್ಷಿಸಿದ ಫಲ. ಮೇಲಧಿಕಾರಿಗಳಿಂದ ನಿಮ್ಮ ಶ್ರಮಕ್ಕೆ ಮೆಚ್ಚಿಗೆ ಸಿಗಲಿದೆ. ಬಹು ದಿನಗಳಿಂದ ಶ್ರಮಿಸಿದ್ದ ಉತ್ತಮ ಸಾಧನೆಯ ಪರಿಣಾಮವು ನಿಮ್ಮ ವೃತ್ತಿ ಜೀವನದ ಮೇಲೆ ಕಾಣುತ್ತದೆ. ಇಂದು ನಿಮ್ಮ ಆದಾಯ ಹೆಚ್ಚಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.
ವೃಷಭ ರಾಶಿಯ ಈ ದಿನದ ಭವಿಷ್ಯ

ಇಂದು ವೃಷಭ ರಾಶಿಯ ರಫ್ತುದಾರರಿಗೆ ಒತ್ತಡ ಹೆಚ್ಚಾಗುತ್ತದೆ. ಮಾನಸಿಕ ಕಿರಿ ಕಿರಿ ಉಂಟಾಗಲಿದೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಇರಲಿ. ಆದಾಯ ಹೆಚ್ಚಾಗಲಿದೆ. ಹೂಡಿಕೆಯಲ್ಲಿ ಎಚ್ಚರಿಕೆ ಇರಲಿ. ವಿವಾದಗಳಲ್ಲಿರುವ ಆಸ್ತಿಗಳನ್ನು ಖರೀದಿಸಬೇಡಿ. ಆಸ್ತಿ ಖರೀದಿಗೆ ಮುಂದೆ ಉತ್ತಮ ದಿನಗಳು ಕಾದಿವೆ.
ಮಿಥುನ ರಾಶಿಯ ಈ ದಿನದ ಭವಿಷ್ಯ

ಮಿಥುನ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಅಭಿವೃದ್ಧಿ ಹೆಚ್ಚಾಗಲಿ. ಹಲವು ದಿನಗಳಿಂದ ವ್ಯಾಪಾರದಲ್ಲಿ ಭಾಧಿಸುತ್ತಿರುವ ಸಮಸ್ಯೆಗಳು ನಿವಾರಣೆಯಾಗಿ ಆದಾಯ ಹೆಚ್ಚಲಿದೆ. ವ್ಯವಹಾರದಲ್ಲಿ ದಿಢೀರ್ ಧನಲಾಭವಾಗಲಿದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
ಕರ್ಕಾಟಕ ರಾಶಿಯ ಈ ದಿನದ ಭವಿಷ್ಯ

ಕರ್ಕಾಟಕ ರಾಶಿಯವರು ಇಂದು ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸಿ. ಇಂದು ನೀವು ತೆಗೆದುಕೊಳ್ಳುವ ಕೆಲ ನಿರ್ಧಾರ ಬದುಕಿನ ನೆಮ್ಮದಿಯ ಪ್ರಶ್ನೆಯಾಗಿದೆ. ಇಂದು ತರಕಾರಿ ಸಿಮೆಂಟ್, ಉಕ್ಕು ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಗಳಿವೆ.
ಸಿಂಹ ರಾಶಿಯ ಈ ದಿನದ ಭವಿಷ್ಯ

ಸಿಂಹ ರಾಶಿಯವರು ಇಂದು ನೀವು ಸಾಧಿಸಬೇಕೆಂದಿರುವ ವೃತ್ತಿ ಗುರಿಗಳತ್ತ ಗಮನ ಹರಿಸಲಿದ್ದೀರಿ. ಹೊಸ ಹೂಡಿಕೆಯಲ್ಲಿ ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಉತ್ತಮ ಸಮಯ ಕಳೆಯುವಿರಿ. ಮಾನಸಿಕ ಒತ್ತಡ ಕಡಿಮೆಯಾಗಲಿದೆ.
ಡಾಕ್ಟರ ವೃತ್ತಿಯವರು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಎಚ್ಚರಿಕೆಯಿಂದ ಹೆಜ್ಜೆ ಇಡಿ.
ಕನ್ಯಾ ರಾಶಿಯ ಈ ದಿನದ ಭವಿಷ್ಯ

ಕನ್ಯಾ ರಾಶಿಯವರಿಗೆ ಗುರುವಿನ ಕೃಪೆ ಇರುವುದರಿಂದ ಮುಟ್ಟಿದೆಲ್ಲವೂ ಚಿನ್ನವಾಗುವ ಸಮಯ. ಈ ದಿನ ವಿದ್ಯಾರ್ಥಿಗಳಿಗೆ ವಿಶೇಷವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ. ವೃತ್ತಿ ರಂಗದಲ್ಲಿ ನಿರೀಕ್ಷಿಸಿದ ಲಾಭ ಸಿಗಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ತುಲಾ ರಾಶಿಯ ಈ ದಿನದ ಭವಿಷ್ಯ

ತುಲಾ ರಾಶಿಯವಿಗೆ ವೃತ್ತಿ ರಂಗದಲ್ಲಿ ಬಯಸಿದ ಬಡ್ತಿ ಸಿಗಲಿದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನೂ ನಿರೀಕ್ಷಿಸಬಹುದು. ಆರೋಗ್ಯ ಸುಧಾರಿಸಲಿದೆ. ಮಾನಸಿಕ ಒತ್ತಡ ಕಡಿಮೆಯಾಗಲಿದೆ.
ವೃಶ್ಚಿಕ ರಾಶಿಯ ಈ ದಿನದ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಹಣದ ವಹಿವಾಟಿನ ವಿಚಾರದಲ್ಲಿ ಸ್ವಲ್ಪ ಎಚ್ಚರದಿಂದಿರಿ. ಅಪರಿಚಿತರೊಂದಿಗೆ ವ್ಯವಹಾರ ಬೇಡ. ಹಣ ವ್ಯಯ ಮಾಡುವ ಮುನ್ನ ಎಚ್ಚರಿಕೆ ಇರಲಿ. ನೌಕರರಿಗೆ ಹಲವು ಅವಕಾಶಗಳು ಲಭ್ಯವಾಗುತ್ತವೆ.
ಧನು ರಾಶಿಯ ಈ ದಿನದ ಭವಿಷ್ಯ

ಧನು ರಾಶಿಯವರಿಗೆ ಇಂದು ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ನಿಮಗೆ ಹೊಸ ಯೋಚನೆಗಳು ನಿಮ್ಮ ಕುಟುಂಬ ಸದಸ್ಯರೊಂದಿಗಿನ ಸಂಬಂಧ ಹೆಚ್ಚು ಬಲಗೊಳ್ಳುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗಲಿದೆ.
ಮಕರ ರಾಶಿಯ ಈ ದಿನದ ಭವಿಷ್ಯ

ಮಕರ ರಾಶಿಯವರು ಈ ದಿನವನ್ನು ನೆಮ್ಮದಿಯಿಂದ ಕಳೆಯಲಿದ್ದೀರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದ ಫಲಿತಾಂಶ ಸಿಗಲಿದೆ. ಈ ದಿನದಲ್ಲಿ ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಹೊಸ ಹೂಡಿಕೆಯ ಬಗ್ಗೆ ಹೆಚ್ಚು ಆಲೋಚನೆ ಮಾಡುವಿರಿ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ.
ಕುಂಭ ರಾಶಿಯ ಈ ದಿನದ ಭವಿಷ್ಯ

ಕುಂಭ ರಾಶಿಯವರು ಇಂದು ಕಠಿಣ ಶ್ರಮಕ್ಕೆ ಸೂಕ್ತ ಪ್ರತಿಫಲ ಪಡೆಯಲಿದ್ದೀರಿ. ಇಂಜಿನಿಯರಿಂಗ್ ಕ್ಷೇತ್ರದವರಿಗೆ ಹೆಚ್ಚಿನ ಲಾಭವಾಗಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ದೂರ ಪ್ರವಾಸದ ಅವಕಾಶ. ಅಪರಿಚಿತರೊಂದಿಗೆ ವ್ಯವಹಾರ ಸಲ್ಲದು. ಕೌಟುಂಬಿಕವಾಗಿ ಉತ್ತಮ ಜೀವನ
ಮೀನ ರಾಶಿಯ ಈ ದಿನದ ಭವಿಷ್ಯ

ಮೀನ ರಾಶಿಯವರು ಇಂದು ನಿಮ್ಮ ಆರೋಗ್ಯದ ಬಗ್ಗೆ ಸೂಕ್ತ ಗಮನ ನೀಡಬೇಕಾಗುತ್ತದೆ. ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ತಪ್ಪಿಸಿ. ನಡೆ ನುಡಿಯಲ್ಲಿ ಎಚ್ಚರಿಕೆ ಇರಲಿ. ಹಿತ ಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ. ಯಾರೊಂದಿಗೂ ಅತಿಯಾದ ಸಲುಗೆ ಬೇಡ. ವ್ಯವಹಾರದಲ್ಲಿ ದಿಢೀರ್ ಧನ ಲಾಭ












