ಮೇಷ ರಾಶಿಯ ಈ ದಿನದ ಭವಿಷ್ಯ

ಮೇಷ ರಾಶಿಯವರಿಗೆ ಇಂದು ಕೆಲಸದ ಸ್ಥಳದಲ್ಲಿ ಬದಲಾವಣೆಯ ಸಾಧ್ಯತೆಯಿದೆ. ಬಹು ದಿನಗಳಿಂದ ಬಯಸಿದ್ದ ಬಡ್ತಿ ಸಿಗಲಿದೆ. ಅನಗತ್ಯ ಖರ್ಚು ಹೆಚ್ಚಾಗಲಿದೆ. ದೂರ ಪ್ರವಾಸದ ಅವಕಾಶ ಸಿಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಉತ್ತಮ ಅಭಿವೃದ್ಧಿಯಾಗಲಿದೆ. ಹೊಸ ಹೂಡಿಕೆಯತ್ತ ಎಚ್ಚರಿಕೆಯಿಂದ ಹೆಜ್ಜೆ ಇಡಿ.
ವೃಷಭ ರಾಶಿಯ ಈ ದಿನದ ಭವಿಷ್ಯ

ವೃಷಭ ರಾಶಿಯವರಿಗೆ ಧನ-ಕನಕಗಳ ಲಾಭ ಹೆಚ್ಚಲಿದ್ದು, ಸಂಗ್ರಹವಾದ ಸಂಪತ್ತು ಹೆಚ್ಚಾಗಲಿದೆ. ಕೌಟುಂಬಿಕವಾಗಿ ಶಾಂತಿ ಹೆಚ್ಚಾಗಲಿದೆ. ಅವಿವಾಹಿತರಿಗೆ ವಿವಾಹಕ್ಕೆ ಅಡೆತಡೆಗಳು ಉಂಟಾಗುತ್ತದೆ. ಸಂಬಂಧಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಮಾತು ನಡೆ ನುಡಿಯಲ್ಲಿ ಎಚ್ಚರಿಕೆ ಇರಲಿ.
ಮಿಥುನ ರಾಶಿಯ ಈ ದಿನದ ಭವಿಷ್ಯ

ಮಿಥುನ ರಾಶಿಯವರಿಗೆ ಬಹಳ ದಿನಗಳಿಂದ ಇದ್ದ ಒತ್ತಡ ಕಡಿಮೆಯಾಗಲಿದ್ದು, ಮಾನಸಿಕವಾಗಿ ನೆಮ್ಮದಿಯನ್ನು ಕಾಣುತ್ತೀರಿ. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ಸಿಗಲಿದೆ. ಬಹಳ ದಿನಗಳಿಂದ ಬಾಕಿಯಿದ್ದ ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ.
ಕಟಕ ರಾಶಿಯ ಈ ದಿನದ ಭವಿಷ್ಯ

ಕಟಕ ರಾಶಿಯವರು ಇಂದು ಹಣದ ಬಗ್ಗೆ ಎಚ್ಚರಿಕೆ ವಹಿಸಿ. ಆದಾಯದಲ್ಲಿ ಅಡೆತಡೆಗಳು ಉಂಟಾಗಲಿದೆ. ಅನ್ಯರ ಸಹವಾಸ ಸಲ್ಲದು. ನಿರುದ್ಯೋಗಿಗಳಿಗೆ ಹಳೆಯ ಸ್ನೇಹಿತರಿಂದ ಸಹಾಯವಾಗಿದ್ದು, ಬಯಸಿದ ಉದ್ಯೋಗ ಪ್ರಾಪ್ತಿಯಾಗಲಿದೆ.
ಸಿಂಹ ರಾಶಿಯ ಈ ದಿನದ ಭವಿಷ್ಯ

ಸಿಂಹ ರಾಶಿಯವರ ದೂರ ಪ್ರಯಾಣದ ಕೆಲಸ ಕಾರ್ಯ ಸಿದ್ಧಿಯಾಗಲಿದೆ. ಮಾನಸಿಕ ಕಿರಿಕಿರಿ ಹೆಚ್ಚಾಗಲಿದ್ದು, ಧ್ಯಾನ ಯೋಗದತ್ತ ಹೆಚ್ಚಿನ ಗಮನವಹಿಸಿ. ಇಂದು ವ್ಯಾಪಾರದಲ್ಲಿ ಏರುಪೇರಾಗುವ ಸಾಧ್ಯತೆ ಇದೆ.
ಕನ್ಯಾ ರಾಶಿಯ ಈ ದಿನದ ಭವಿಷ್ಯ

ಕನ್ಯಾ ರಾಶಿಯವರ ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಮಾನಸಿಕ ನೆಮ್ಮದಿ ಹೆಚ್ಚಲಿದೆ. ಅನಿರೀಕ್ಷಿತ ಧನ ಲಾಭದ ಸಾಧ್ಯತೆ. ಆರೋಗ್ಯದ ಬಗ್ಗೆ ಜಾಗೃತರಾಗಿರಿ. ಊಟದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಕೌಟುಬಿಕ ಜೀವನ ಉತ್ತಮವಾಗಿರಲಿದೆ.
ತುಲಾ ರಾಶಿಯ ಈ ದಿನದ ಭವಿಷ್ಯ

ತುಲಾ ರಾಶಿಯವರು ಇಂದು ಹಿತ ಶತ್ರುಗಳಿಂದ ದೂರವಿರಿ. ಯಾರೊಂದಿಗೂ ಅತಿಯಾದ ಸಲುಗೆ ಬೇಡ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿದೆ. ಮೂಗಿನ ಮೇಲಿರುವ ಅತಿಯಾದ ಕೋಪವನ್ನು ತಪ್ಪಿಸಿ, ನಡೆ ನುಡಿಯಲ್ಲಿ ಎಚ್ಚರಿಕೆ ಇರಲಿ.
ವೃಶ್ಚಿಕ ರಾಶಿಯ ಈ ದಿನದ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ದಿನಪೂರ್ತಿ ಸಮಯ ವ್ಯರ್ಥವಾಗಲಿದೆ. ಸ್ನೇಹಿತ ಭೇಟಿ ಹಾಗೂ ಅಪರಿಚಿತರ ಭೇಟಿಯಿಂದ ಈ ದಿನ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ ಇದೆ. ಕೌಟುಂಬಿಕ ಕಿರಿ ಕಿರಿ ಹೆಚ್ಚಾಗಲಿದೆ. ನಿಮ್ಮ ಹೊಸ ಯೋಜನೆಗೆ ಹಿತೈಷಿಗಳಿಂದ ಬೆಂಬಲ ಸಿಗಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಧನಸ್ಸು ರಾಶಿಯ ಈ ದಿನದ ಭವಿಷ್ಯ

ಧನಸ್ಸು ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ ಇದೆ. ಬಯಸಿದ ಬಡ್ತಿ ಸಿಗುವ ಸಾಧ್ಯತೆ ಹೆಚ್ಚಿದೆ. ದೂರ ಪ್ರಯಾಣದ ಅವಕಾಶ ಸಿಗಿದೆ. ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಧನ ಲಾಭವಾಗಲಿದೆ. ಕುಟುಂಬದ ವಿಚಾರದಲ್ಲಿ ಎಚ್ಚರಿಕೆ ಇರಲಿ.
ಮಕರ ರಾಶಿಯ ಈ ದಿನದ ಭವಿಷ್ಯ

ಮಕರ ರಾಶಿಯವರಿಗೆ ಇಂದು ವಿರಾಮವಿಲ್ಲದ ದಿನ. ಕೆಲಸದ ಸ್ಥಳದಲ್ಲಿ ಸಾಕಷ್ಟು ಕೆಲಸದ ಒತ್ತಡ ಉಂಟಾಗುತ್ತದೆ. ತಾಳ್ಮೆಯಿಂದ ವರ್ತಿಸಿದರೆ ನಿರೀಕ್ಷಿಸಿದ ಲಾಭ ಸಿಗಲಿದೆ. ಬಹಳ ದಿನಗಳಿಂದ ಬರಬೇಕಾದ ಬಾಕಿ ಹಣ ಇಂದು ಕೈ ಸೇರಲಿದೆ.
ಕುಂಭ ರಾಶಿಯ ಈ ದಿನದ ಭವಿಷ್ಯ

ಕುಂಭ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದಲ್ಲಿ ಪ್ರಗತಿಯಾಗಲಿದ್ದು, ನಿರೀಕ್ಷಿತ ಫಲ ಸಿಗಲಿದೆ. ಕಠಿಣ ಪರಿಶ್ರಮದ ಅಗತ್ಯವಿರುತ್ತದೆ. ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ. ಮಾನಸಿಕ ಕಿರಿ ಕಿರಿ ಕಡಿಮೆಯಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಮೀನ ರಾಶಿಯ ಈ ದಿನದ ಭವಿಷ್ಯ

ಮೀನ ರಾಶಿಯವರಿಗೆ ವಿದೇಶ ಸಂಬಂಧಪಟ್ಟ ವ್ಯವಹಾರದಲ್ಲಿ ಅಭಿವೃದ್ಧಿಯಾಗಲಿದೆ. ಹೊಸ ಹೂಡಿಕೆಗೆ ಅವಕಾಶಗಳು ಸಿಗಲಿದೆ. ಕೌಟುಂಬಿಕವಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಹೊಸ ಸ್ನೇಹದ ಬಗ್ಗೆ ಎಚ್ಚರಿಕೆ ಇರಲಿದೆ. ಇಂದು ಹಿತ ಶತ್ರುಗಳಿಂದ ದೂರವಿರಿ.












