
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ವಿಡಿಯೋ ವೈರಲ್ ಸಂಬಂಧ ನಟ ಧನ್ವೀರ್ ಗೆ ಪೊಲೀಸರು ವಿಚಾರಣೆ ನಡೆಸಿದ್ದು, ಮತ್ತೊಮ್ಮೆ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ನೀಡಿದ್ದಾರೆ.

ಜೈಲಿನ ಕೈದಿಗಳು ಮೊಬೈಲ್ ವಿಡಿಯೋ ವೈರಲ್ ಆಗಿದ್ದು ಭಾರೀ ಸದ್ದು ಮಾಡಿತ್ತು. ಬಳಿಕ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮೊಬೈಲ್ ಬಳಸಿದ್ದ ಮೂವರ ವಿರುದ್ಧ ಕೇಸ್ ದಾಖಲಾಗಿತ್ತು. ಈ ಕೇಸ್ ತನಿಖೆಗೆ ಸಹಕರಿಸುತ್ತಿರುವ ಸಿಸಿಬಿ ಪೊಲೀಸರು ನಿನ್ನೆ ರಾತ್ರಿ ಏರ್ ಪೋರ್ಟ್ ರಸ್ತೆಯಲ್ಲಿ ಧನ್ವೀರ್ ರನ್ನ ವಶಕ್ಕೆ ಪಡೆದಿತ್ತು.

ಧನ್ವೀರ್ ರನ್ನ ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಮಧ್ಯಾಹ್ನದವರೆಗೆ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದರು. ಬಳಿಕ ಪರಪ್ಪನ ಅಗ್ರಹಾರ ಠಾಣೆಗೆ ಕರೆದೊಯ್ದರು. ಅಲ್ಲಿ ಡಿಸಿಪಿ ನಾರಾಯಣ್ ಧನ್ವೀರ್ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ನನಗೆ ಆತ್ಮೀಯರೊಬ್ಬರು ಜೈಲಿನ ವಿಡಿಯೋ ಕಳಿಸಿದ್ದಾರೆ. ಅದನ್ನು ನಾನು ಯಾರಿಗೂ ಕಳಿಸಿಲ್ಲ ಮಾಡಿಲ್ಲ ಎಂದು ಉತ್ತರ ನೀಡಿದ್ದಾರೆ.

ಸದ್ಯ ತನಿಖೆ ಸಂಬಂಧ ಪೊಲೀಸರು ಧನ್ವೀರ್ ಮೊಬೈಲ್ ಸೀಜ್ ಮಾಡಿ FSLಗೆ ಕಳಿಸಿದ್ದಾರೆ. ಹಾಗೆ ನ.13ರಂದು ಮತ್ತೆ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ನೀಡಿದ್ದಾರೆ













