ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಕರ್ಮಕಾಂಡ ಈಗ ಪೊಲೀಸ್ ಠಾಣೆ ತಲುಪಿದೆ. ಉಗ್ರನ ಸಮೇತ ಮೊಬೈಲ್ ಬಳಸುತ್ತಿದ್ದ ಕ್ರಿಮಿನಲ್ ಗಳ ವಿರುದ್ಧ NCR ದಾಖಲಾಗಿದೆ.

ಜೈಲಿನಲ್ಲಿ ನಿಷೇಧ ಇದ್ದರೂ ಮೊಬೈಲ್ ಬಳಕೆ ಮಾಡಿ ವಿಡಿಯೋ ಚಿತ್ರೀಕರಣ ಮಾಡಿದ ಆರೋಪ ಸಂಬಂಧ ಮೂವರ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ಐಸಿಸ್ ಉಗ್ರ ಜುಹಾದ್ ಹಮೀದ್ ಶಕೀಲ್ ಮುನ್ನಾ, ಸೀರಿಯಲ್ ಕಿಲ್ಲರ್ & ರೇಪಿಸ್ಟ್ ಉಮೇಶ್ ರೆಡ್ಡಿ, ಸ್ಮಗ್ಲಿಂಗ್ ಕೇಸ್ ನಲ್ಲಿ ಜೈಲು ಸೇರಿದ್ದ ತರುಣ್ ಕೊಂಡೂರು ರಾಜು ವಿರುದ್ಧNCR ದಾಖಲಾಗಿದೆ.

ಇನ್ನು ಜೈಲಿನ ವಿಡಿಯೋಗಳು ಭಾರೀ ಚರ್ಚೆಗೂ ಕಾರಣವಾಗಿತ್ತು. ಅಲ್ಲದೇ ಪ್ರತಿಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ಹರಿಹಾಯ್ದಿದ್ರು. ಹೀಗಾಗಿ ಮೊಬೈಲ್ ಬಳಕೆ ಮಾಡಿದ್ದಲ್ಲದೇ ಅದನ್ನ ವೈರಲ್ ಮಾಡಿರೋ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಜೈಲು ಅಧಿಕಾರಿಗಳ ದೂರು ನೀಡಿದ್ರು.. ಈ ಸಂಬಂಧ ಪೊಲೀಸರು NCR ಅಂದ್ರೆ ಗಂಭೀರವಲ್ಲದ ಪ್ರಕರಣ ದಾಖಲಿಸಿದ್ದಾರೆ.

ಸದ್ಯ ಪೊಲೀಸರು ಘಟನೆ ಬಗ್ಗೆ NCR ದಾಖಲಿಸಿ ತನಿಖೆ ಶುರು ಮಾಡಿದ್ದಾರೆ. ಆದರೆ ನಿನ್ನೆಯಿಂದ ಪ್ರತಿ ಬ್ಯಾರಕ್ ಹುಡುಕಿದ್ರೂ ಮೊಬೈಲ್ ಸಿಕ್ಕಿಲ್ಲ. ಒಂದು ವೇಳೆ ಜೈಲು ಅಧಿಕಾರಿಗಳು ಆರೋಪಿತರು ಬಳಸಿರೋ ಮೊಬೈಲ್ ಹುಡುಕಿ ಕೊಟ್ರೆ ಪೊಲೀಸರು FIR ದಾಖಲಿಸಿ ತನಿಖೆಯನ್ನ ಗಂಭೀರವಾಗಿ ಮಾಡಲಿದ್ದಾರೆ.

