ಬಿಹಾರದಲ್ಲಿ ಮೊದಲ ಹಂತ ಚುನಾವಣೆ ಮುಗಿದ ಮೇಲೆ ಎರಡನೇ ಹಂತ ಚುನಾವಣೆ ನಡೆಯಬೇಕಿದೆ. ಅದರ ಹಿನ್ನಲೆಯಲ್ಲಿ ಬಿಹಾರದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿರುಸಿನ ಪ್ರಚಾರಕ್ಕೆ ಇಳಿದಿದ್ದಾರೆ. ಹೇಗಾದ್ರು ಆರ್‌ಜೆಡಿನ ಮುಣ್ಣು ಮುಕಿಸ್ಬೇಕು ಅಂತ ಪಣ ತೊಟ್ಟಿರುವ NDA ಮೈತ್ರಿಕೊಟ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸರಣಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ.

ಬಿಹಾರದ ಗಯಾಜಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್, “ಆರ್‌ಜೆಡಿ ಸರ್ಕಾರದ ಅವಧಿಯಲ್ಲಿ ಗಲಭೆಗಳು ಮತ್ತು ಹತ್ಯಾಕಾಂಡಗಳು ನಡೆಯುತ್ತಿದ್ದವು… ಹಬ್ಬಗಳ ಮೊದಲು ಗಲಭೆಗಳು ನಡೆಯುತ್ತಿದ್ದವು… ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು, ಎಂಜಿನಿಯರ್‌ಗಳು, ವೈದ್ಯರು, ಹೆಣ್ಣುಮಕ್ಕಳು ಮತ್ತು ಮಕ್ಕಳು, ಯಾರೂ ಸುರಕ್ಷಿತವಾಗಿರಲಿಲ್ಲ… ಯುವಕರಿಗೆ ಉದ್ಯೋಗವಿಲ್ಲ ಮತ್ತು ಬಡವರಿಗೆ ಪಡಿತರವಿಲ್ಲ. ಅವರು ಮೇವು ತಿನ್ನುತ್ತಿದ್ದಾಗ ಅವರು ಹೇಗೆ ಪಡಿತರವನ್ನು ನೀಡಬಹುದಿತ್ತು? ಅವರು ಹೇಗೆ ಉದ್ಯೋಗಗಳನ್ನು ಒದಗಿಸಬಹುದಿತ್ತು? ಅವರು ಉದ್ಯೋಗಗಳಿಗೆ ಬದಲಾಗಿ ನಿಮ್ಮ ಭೂಮಿಯನ್ನು ಕಸಿದುಕೊಂಡರು ಎಂದು ಸಿಎಂ ಯೋಗಿ ಆರೋಪ ಮಾಡಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಎನ್‌ಡಿಎ ಮತ್ತು ವಿಪಕ್ಷ ಮೈತ್ರಿಕೂಟವಾದ ಮಹಾಘಟಬಂಧನ್ ನಾಯಕರು RJD ಪಕ್ಷನ ಅಧಿಕಾರಕ್ಕೆ ತರಬೇಕು ಎಂದು ಪಣತೊಟ್ಟಿದ್ದಾರೆ. ಪ್ರಧಾನಿ ಮೋದಿ, ಸಿಎಂ ನೀತಿಶ್ ಕುಮಾರ್ ಲೋಕಸಭಾ ವಿಪಕ್ಷ ನಾಯಕರದ ರಾಹುಲ್ ಗಾಂಧಿ, ತೇಜಸ್ವಿ ಯಾದವ್, ಸಂಸದೆ ಪ್ರಿಯಾಂಕಾ ಗಾಂಧಿ ಅವರು ಬಿಹಾರದಲ್ಲಿ ನೆಲೆ ಹೊಡಿ ಚುನಾವಣೆಯ ಅಬ್ಬರ ಪ್ರಚಾರ ಮಾಡುತ್ತಿದ್ದಾರೆ.


