
ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್ 13ರ ತನಕ ಕಾಲಾವಕಾಶ ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠ ಕಾಲಾವಕಾಶ ನೀಡಿ ವಿಚಾರಣೆಯನ್ನು ನ.13.ರ ಮಧ್ಯಾಹ್ನಕ್ಕೆ ಮುಂದೂಡಿತು.

ಬೆಂಗಳೂರಿನಲ್ಲಿ ನ.5ರಂದು ಎರಡನೇ ಸುತ್ತಿನ ಶಾಂತಿ ಸಭೆಯ ಬಳಿಕ ನಿಗದಿಯಂತೆ ಶುಕ್ರವಾರ ಅರ್ಜಿ ವಿಚಾರಣೆ ಮುಂದುವರಿಸಿದ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್, RSS ಪರ ವಕೀಲರು ಹಾಗೂ ಸರ್ಕಾರದ ಪರ ವಕೀಲರ ವಾದ- ಪ್ರತಿವಾದ ಆಲಿಸಿದರು. ಈ ವೇಳೆ ಅರ್ಜಿದಾರರ ಪರ ವಕೀಲ ಅರುಣ ಶ್ಯಾಮ್, ಬೆಂಗಳೂರಿನಲ್ಲಿ ನಡೆದ ಶಾಂತಿಸಭೆಯು ಶಾಂತಿಯುತ ಹಾಗೂ ಫಲಪ್ರದವಾಗಿತ್ತು. ಸಭೆಯಲ್ಲಿ ನಾವು ಎರಡು ದಿನಾಂಕಗಳೊಂದಿಗೆ ಪರಿಷ್ಕೃತ ಮುಂದಿಟ್ಟಿದ್ದೇವೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಅರ್ಜಿದಾರರ ಪರ ವಕೀಲರು ಹೇಳಿದಂತೆ ಶಾಂತಿ ಸಭೆ ಫಲಪ್ರದವಾಗಿತ್ತು. ಈ ಸಂಬಂಧ ಆರ್ ಎಸ್ ಎಸ್ ಸೇರಿದಂತೆ ಎಲ್ಲಾ 11 ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡುವ ಬಗೆಗೆ ನಿರ್ಧಾರ ಕೈಗೊಳ್ಳಲು ಒಂದು ವಾರದ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಇದಕ್ಕೆ ನ್ಯಾಯಾಲಯವು, ನಮ್ಮ ಮುಂದೆ ಅವೆಲ್ಲ ಅರ್ಜಿಗಳು ಬಂದಿಲ್ಲವಲ್ಲ ಎಂದಿತು. ಅದಕ್ಕೆ ಶಶಿಕಿರಣ ಶೆಟ್ಟಿ, ಶಾಂತಿಸಭೆಯಲ್ಲಿ ಹಲವು ಸಂಘಟನೆಗಳು ಪಾಲ್ಗೊಂಡಿದ್ದವು. RSS ಸೇರಿದಂತೆ ಎಲ್ಲ ಅರ್ಜಿದಾರರಿಗೆ ಒಂದು ಸಲಕ್ಕೆ ಸೀಮಿತವಾಗಿ ಅವಕಾಶ ಮಾಡಿಕೊಡಲು ಸರ್ಕಾರ ಯತ್ನಿಸುತ್ತಿದೆ. ಅದಕ್ಕೆ ಒಂದು ವಾರದ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಎಜಿ ಮನವಿ ಪುರಸ್ಕರಿಸಿದ ನ್ಯಾಯಪೀಠ, ಅರ್ಜಿಗಳ ಬಗೆಗೆ ನಿಲುವು ವ್ಯಕ್ತಪಡಿಸಲು ಸರ್ಕಾರಕ್ಕೆ ನ.13ರ ತನಕ ಕಾಲಾವಕಾಶ ನೀಡಿ, ವಿಚಾರಣೆಯನ್ನು ನ.13ರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.








