ಬಿಹಾರ ಚುನಾವಣೆಗೆ ಇನ್ನೇನು ಕೇವಲ ಒಂದೇ ದಿನ ಬಾಕಿಯಿದೆ. ಈಗಾಗಲೇ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೊನೆಯ ಹಂತದ ಕಸರತ್ತನ್ನು ನಡೆಸುತ್ತಿವೆ. ಆದರೆ ಇದೀಗ ಬಿಹಾರದಲ್ಲಿ ಮತ್ತೊಮ್ಮೆ ಅಧಿಕಾರದ ಕನಸು ಕಾಣುತ್ತಿರುವ ಎನ್‌ಡಿಎ ಮೈತ್ರಿಕೂಟಕ್ಕೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬಿಗ್ ಶಾಕ್ ನೀಡಿದ್ದಾರೆ.

ಹರಿಯಾಣದ ವಿಧಾನಸಭಾ ಚುನಾವಣೆ ಸಮಯದಲ್ಲಿ ನಡೆದಿದೆ ಎನ್ನಲಾಗಿದ್ದ ಮತಗಳ್ಳತನ ಹಗರಣವನ್ನು ಇಂದು ಸುದ್ದಿಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದಾರೆ. ಈ ಮೂಲಕ ಬಿಜೆಪಿ ನಾಯಕರು ಸೇರಿದಂತೆ ಇಡೀ ಎನ್‌ಡಿಎ ಮೈತ್ರಿಕೂಟಕ್ಕೆ ರಾಹುಲ್ ಗಾಂಧಿ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದಾರೆ.

ಹರಿಯಾಣದ ಚುನಾವಣೆಯಲ್ಲಿ ಬಿಜೆಪಿಯಿಂದ ಮತಗಳ್ಳತನ ನಡೆದಿದೆ. ಬಿಜೆಪಿ ನಾಯಕರೇ ಇದರಲ್ಲಿ ಶಾಮೀಲಾಗಿದ್ದಾರೆ. ಒಬ್ಬ ನಾಯಕನ ಮನೆಯಲ್ಲಿ 66 ಮತಗಳ ಚಲಾವಣೆಯಾಗಿದೆ. ಹೀಗೆ ವಾಸ್ತವದಲ್ಲಿ ಬಿಹಾರದಲ್ಲಿ 25 ಲಕ್ಷ ಮತಗಳ ಕಳ್ಳತನವಾಗಿದೆ ಎಂದು ರಾಹುಲ್ ಗಾಂಧಿ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.
ಒಂದೇ ವ್ಯಕ್ತಿ ಹಲವು ಕಡೆ ಮತದಾನ ಮಾಡಿರುವ ಉದಾಹರಣೆಗಳಿವೆ. ಹರಿಯಾಣದಲ್ಲಿ ಬ್ರೆಜಿಲ್ ಮಾದರಿಯ ಫೋಟೊ ಬಳಸಿ ಅನೇಕ ಬೂತ್ಗಳಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಹೆಸರಿನಲ್ಲಿ ಮತದಾನ ನಡೆದಿದ್ದು, ಒಟ್ಟು 25 ಲಕ್ಷ ಮತಗಳ್ಳತನವಾಗಿದೆ ಎಂದು ಆರೋಪಿಸಿದ್ದಾರೆ.






