ಮೇಷ ರಾಶಿಯ ಈ ದಿನದ ಭವಿಷ್ಯ

ನೀವು ಅನೇಕ ದಿನಗಳಿಂದ ನಿರೀಕ್ಷಿಸುತ್ತಿದ್ದ ಮಹತ್ತರವಾದ ಕೆಲಸವೊಂದು ಇಂದು ನೆರವೇರಲಿದೆ. ನೀವು ಬಳಸುತ್ತಿದ್ದ ಉದ್ಯೋಗಾವಕಾಶಗಳು ನಿಮಗೆದೊರೆಯಲಿವೆ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗೆ ಅವಕಾಶಗಳು ಇರುತ್ತವೆ. ನಿಮ್ಮ ಕಚೇರಿಯಲ್ಲಿ ನಿಮ್ಮ ಸ್ಥಾನ ಬದಲಾಗುವ ಸಾಧ್ಯತೆ ಹೆಚ್ಚಿದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ.
ವೃಷಭ ರಾಶಿಯ ಈ ದಿನದ ಭವಿಷ್ಯ

ವೃಷಭ ರಾಶಿಯ ಜನರು ಈ ದಿನ ಎಚ್ಚರಿಕೆ ವಹಿಸಬೇಕು. ಮಾತು, ನಡೆ ನುಡಿಗಳಲ್ಲಿ ಎಚ್ಚರ ವಹಿಸುವುದು ಅಗತ್ಯ. ಪಿತ್ರಾರ್ಜಿತ ಆಸ್ತಿ ವ್ಯವಹಾರಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿ ಕೌಟುಂಬಿಕವಾಗಿ ಮಾತುಕತೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಅವಸರದ ತೀರ್ಮಾನ ಬೇಡ. ಆರೋಗ್ಯ ಸಮಸ್ಯೆ ಕೂಡ ಎದುರಾಗುವ ಸಾಧ್ಯತೆ ಇದೆ.
ಮಿಥುನ ರಾಶಿಯ ಈ ದಿನದ ಭವಿಷ್ಯ

ಈ ದಿನ ಮಿಥುನ ರಾಶಿಯ ಜನರಿಗೆ ಹೊಸ ಸ್ಥಳಗಳನ್ನು ನೋಡುವ ಭಾಗ್ಯವಿದೆ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅವಕಾಶವಿದ್ದು, ನಿಮ್ಮ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸಲು ಸಕಾಲವಾಗಿದೆ. ಇನ್ನು ನಿಮ್ಮ ವ್ಯಾಪಾರವನ್ನು ಹೆಚ್ಚಿಸಲು ಹೊಸ ಸ್ಥಳಗಳಿಂದ ಹಣ ಲಭ್ಯವಾಗುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಕೌಟುಂಬಿಕ ಭಿನ್ನಾಭಿಪ್ರಾಯಗಳು ಬರದಂತೆ ಎಚ್ಚರವಹಿಸಿ.
ಕಟಕ ರಾಶಿಯ ಈ ದಿನದ ಭವಿಷ್ಯ

ಕಟಕ ರಾಶಿಯವರರಿಗೆ ಈ ನವೆಂಬರ್ ತಿಂಗಳು ಆರ್ಥಿಕ ಸಮಸ್ಯೆಯಿಂದ ಹೊರಬರಲು ಸಕಾಲವಾಗಿದೆ. ಸೋಮಾರಿತನದಿಂದ ದೂರವಿದ್ದು, ತಮ್ಮ ಉದ್ಯೋಗ ಹಾಗೂ ಉದ್ಯಮದಲ್ಲಿ ನಿರಂತರವಾಗಿ ತೊಡಗಿಸಿಕೊಂಡರೆ ಉತ್ತಮ ಫಲ ಸಿಗಲಿದೆ. ಇಂದು ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಕೌಟುಂಬಿಕ ಜೀವನದಲ್ಲಿ ಸಂತಸ ಇರಲಿದೆ.
ಸಿಂಹ ರಾಶಿಯ ಈ ದಿನದ ಭವಿಷ್ಯ

ಸಿಂಹ ರಾಶಿಯವರು ಇಂದು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರ ಬೇಕು. ಸಣ್ಣ ನಿರ್ಲಕ್ಷ್ಯ ದೊಡ್ಡ ಹೊಡೆತಕ್ಕೆ ಕಾರಣವಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಮಾತಿನಲ್ಲಿಯೂ ಕೂಡ ಎಚ್ಚರಿಕೆ ಬೇಕಾಗಿದ್ದು, ಕುಟುಂಬದಲ್ಲಿ ವಿವಾದಗಳನ್ನು ತಪ್ಪಿಸಲು ಪ್ರಯತ್ನಿಸಿ. ಇಂದು ನಿಮ್ಮ ಕಷ್ಟ ಸುಖಗಳಿಗೆ ಸ್ನೇಹಿತರ ಬೆಂಬಲ ದೊರೆಯಲಿದೆ.
ಕನ್ಯಾ ರಾಶಿಯ ಈ ದಿನದ ಭವಿಷ್ಯ

ಕನ್ಯಾ ರಾಶಿಯ ಜನರಿಗೆ ಸದ್ಯ ಗುರುವಿನ ಕೃಪಾ ಕಟಾಕ್ಷವಿರುವ ಕಾರಣ ಆಭರಣ, ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಹೊಸ ಉದ್ಯೋಗ ಸಿಗಲು ಹಾಗೂ ಉದ್ಯಮ ಆರಂಭಿಸಲು ಇದು ಸಕಾಲವಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ಮುಖ್ಯ. ಚಾಲಕ ವೃತ್ತಿಯಲ್ಲಿ ಇರುವವರು ಎಚ್ಚರಿಕೆಯಿಂದ ವಾಹನ ಚಲಾಯಿಸಿ.
ತುಲಾ ರಾಶಿಯ ಈ ದಿನದ ಭವಿಷ್ಯ

ತುಲಾ ರಾಶಿಯ ಜನರಿಗೆ ಇಂದು ಧನ ಲಾಭವಾಗಲಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವ್ಯಾಪಾರ ವಹಿವಾಟಿನಲ್ಲಿ ಕೂಡ ಅತೀವ ಲಾಭವಾಗುವ ಸಾಧ್ಯತೆ. ಜೊತೆಗೆ ಶತ್ರುಗಳು ಹೆಚ್ಚಾಗಲಿದ್ದು, ತೊಂದರೆಗಳೂ ಉಂಟಾಗಬಹುದು ಹೀಗಾಗಿ ಎಚ್ಚರಿಕೆಯಿಂದ ಇರಿ.
ವೃಶ್ಚಿಕ ರಾಶಿಯ ಈ ದಿನದ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಎಂದಿನಂತೆ ರಕ್ತ ಸಂಬಂಧಗಳೇ ಸಂಕಟದಲ್ಲಿ ನೆರವಾಗಲಿದ್ದಾರೆ. ಈ ದಿನ ತಾಯಿಯಿಂದ ಹಣ ಪಡೆಯುವ ಸಾಧ್ಯತೆ ಇದೆ. ನಿಮ್ಮ ಮಾತು ನಡೆಯಲ್ಲಿ ಎಚ್ಚರಿಕೆ ಇರಲಿ. ಅತಿಯಾದ ಕೋಪವನ್ನು ಒಳ್ಳೆಯದಲ್ಲ. ಮಾನಸಿಕ ಒತ್ತಡ ಕಾಡಬಹುದು. ಎಚ್ಚರಿಕೆಯಿಂದ ಹೆಜ್ಜೆ ಇಡಿ.
ಧನು ರಾಶಿಯ ಈ ದಿನದ ಭವಿಷ್ಯ

ಧನು ರಾಶಿಯವರಿಗೆ ಈ ದಿನ ಕೆಲಸದ ಸ್ಥಳದಲ್ಲಿ ತೊಂದರೆಗಳು ಎದರಾಗುವ ಸಾಧ್ಯತೆಯಿದ್ದು, ಎಚ್ಚರದಿಂದ ಇರಿ. ಕೆಲಸದ ಒತ್ತಡದಿಂದ ಮಾನಸಿಕ ಕಿರಿಕಿರಿ ಉಂಟಾಗಲಿದೆ. ಈ ದಿನ ನಿಮಗೆ ವೆಚ್ಚಗಳು ಕೂಡ ಹೆಚ್ಚಾಗಬಹುದು. ನಿಮ್ಮ ಕಷ್ಟಕ್ಕೆ ಸ್ನೇಹಿತರು ಬೆಂಬಲ ನೀಡುತ್ತಾರೆ.
ಮಕರ ರಾಶಿಯ ಈ ದಿನದ ಭವಿಷ್ಯ

ಮಕರ ರಾಶಿಯವರು ಇಂದು ಉತ್ತಮ ದಿನವಾಗಿದ್ದು, ಎಲ್ಲಾ ಕಾರ್ಯಗಳಲ್ಲಿ ಅಪೇಕ್ಷಿತ ಯಶಸ್ಸು ಸಿಗುತ್ತದೆ. ಈ ಕಾರಣ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಮಾನಸಿಕ ಒತ್ತಡ ಕಡಿಮೆಯಾಗಲಿದ್ದು, ಕುಟುಂಬದಲ್ಲಿ ಶಾಂತಿ-ಸಂಪತ್ತು ಹೆಚ್ಚಲಿದೆ.
ಕುಂಭ ರಾಶಿಯ ಈ ದಿನದ ಭವಿಷ್ಯ

ಶನಿ ದೃಷ್ಟಿ ಇರುವ ಕುಂಭ ರಾಶಿಯವರು ಆದಷ್ಟು ತಾಳ್ಮೆಯಿಂದ ವರ್ತಿಸಬೇಕು. ನೀವು ಇಂದು ಮಾನಸಿಕ ನೆಮ್ಮದಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೇ ವ್ಯವಹಾರದಲ್ಲಿ ಧನ ವ್ಯಯವಾಗುವ ಸೂಚನೆಗಳಿದ್ದು, ಎಚ್ಚರಿಕೆಯಿಂದ ಹೆಜ್ಜೆ ಇಡಿ.
ಮೀನ ರಾಶಿಯ ಈ ದಿನದ ಭವಿಷ್ಯ

ಮೀನ ರಾಶಿಯವರಿಗೆ ತಮ್ಮ ಬಹುದಿನದ ಕನಸು ವಿದೇಶ ಪ್ರಯಾಣದ ಅವಕಾಶ ಸಿಗುವ ಸಾಧ್ಯತೆ ಇದೆ. ಈ ದಿನ ನಿಮ್ಮ ಖರ್ಚು ಹೆಚ್ಚಾಗುತ್ತದೆ. ಕೌಟುಂಬಿಕ ಶಾಂತಿ ಹೆಚ್ಚಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದು, ಮಾನಸಿಕ ಒತ್ತಡ ಕಡಿಮೆಯಾಗಲಿದೆ.












