ಸರಿಗಮಪ ಖ್ಯಾತಿಯ ಸುಹಾನಾ ಸೈಯದ್ ಮಂತ್ರ ಮಾಂಗಲ್ಯ ವಿವಾಹ ಪದ್ಧತಿ ಮೂಲಕ ಬಹುಕಾಲದ ಗೆಳೆಯ, ರಂಗಭೂಮಿ ಕಲಾವಿದ ನಿತಿನ್ ಅವರನ್ನು ಮದುವೆಯಾಗಿದ್ದಾರೆ.

ಸರಿಗಮಪ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾದ ಹಾಡುಗಾರ್ತಿ ಸುಹಾನಾ ಸಯ್ಯದ್ (Suhana Syed) ಅವರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 16 ವರ್ಷಗಳ ಲಾಂಗ್ ಟೈಮ್ ಬಾಯ್ಫ್ರೆಂಡ್, ರಂಗಭೂಮಿ ಕಲಾವಿದನಾಗಿರುವ ನಿತಿನ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದೂ ಭಕ್ತಿಗೀತೆಯನ್ನು ಹಾಡುವ ಮೂಲಕ ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಸುಹಾನಾ ದಿಟ್ಟತನದಿಂದ ಹಾಡಿ ಸಂಗೀತ ಪ್ರೇಮಿಗಳ ಹೃದಯ ಗೆದ್ದಿದ್ದರು. .

”ಪ್ರತಿ ಜೀವಿಯ ಅನ್ವೇಷಣೆ ಪ್ರೇಮಕ್ಕಾಗಿಯೇ. ಪ್ರತಿ ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ, ಪ್ರೇಮಕ್ಕೆ ಕಾರಣ ಇಲ್ಲ. ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ…….. ಪ್ರೇಮಕ್ಕೆ ಯಾವ ಮಿತಿ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿ. ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು.. ಪ್ರತಿ ಸವಾಲು, ಪ್ರತಿ ಸಂಶಯ ಮತ್ತು ಪ್ರತಿ ಭಯದ ಮೌನದಲ್ಲಿಯೂ ನಮ್ಮನ್ನು ಹಿಡಿದಿಟ್ಟಿದ್ದು ಪ್ರೀತಿ.. ಇಂದು, ನಮ್ಮ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.. ನಿಮ್ಮ ಆಶೀರ್ವಾದವಿರಲಿ !” ಎಂದು ಸುಹಾನಾ ಪೋಸ್ಟ್ ಶೇರ್ ಮಾಡಿದ್ದರು.

ಇದು ಪರಸ್ಪರ ಆಯ್ಕೆ ಮಾಡಿಕೊಂಡ ಎರಡು ಆತ್ಮಗಳ ಕಥೆ—ಲೋಕವು ಒಂದನ್ನು ಆರಿಸಿಕೊಳ್ಳಲು ಕೇಳಿದಾಗ ಇದು ಆಯ್ಕೆ. ಇಂದು, ಇದು ಇನ್ನು ಮುಂದೆ ನಮ್ಮ ರಹಸ್ಯವಲ್ಲ. ಇದು ಸ್ನೇಹ ಮತ್ತು ಪ್ರೇಮಕಥೆಯಾಗಿದೆ. ನಮ್ಮ ಹೃದಯಗಳು ಪದಗಳನ್ನು ಮೀರಿದ ಭಾಷೆಯನ್ನು ಮಾತನಾಡಿವೆ, ಭಿನ್ನಾಭಿಪ್ರಾಯಗಳು ಸಂಧಿಸುವ ಸ್ಥಳಗಳಲ್ಲಿ ಅರಳಿದ ಪ್ರೀತಿಯ ಶಾಂತ ಸಿಂಫನಿ ಎಂದು ಸುಹಾನಾ ಪೋಸ್ಟ್ ಮಾಡಿದ್ದರು.





