ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾದ ಬಹು ನಿರೀಕ್ಷಿತ ಮತ್ತು ಬಹು ಕೋಟಿ ವೆಚ್ಚ ಮತ್ತು ಬಹು ತಾರಗಣಗ ಒಳಕೊಂಡ ಚಿತ್ರ ಕಾಂತರ sequel Chapter 1 ಚಿತ್ರವು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದೂ, ಚಿತ್ರ ಮಂದಿರದತ್ತ ಪ್ರೇಕ್ಷಕರು ಬರುತ್ತಿದ್ದಾರೆ.

ಚಿತ್ರ ನೋಡಿದ ನಟ, ನಿರ್ಮಾಪಕ ಯಶ್ ಕಾಂತರ ಚಿತ್ರದ ನಟ, ನಿರ್ದೇಶಕ ಮತ್ತು ಕಥೆಗಾರ ರಿಷಬ್ ಶೆಟ್ಟಿ, ನಿರ್ಮಾಪಕ ವಿಜೆಯ್ ಕಿರಗಂದೂರು, ಹೊಂಬಾಳೆ ಚಿತ್ರ ನಿರ್ಮಾಣ ಸಂಸ್ಥೆ ಹಾಗೂ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ನಟಿ ರುಕ್ಮಿಣಿ ವಸಂತ್ ಮತ್ತು ನಟ ಗುಲಶನ್ ದೇವಯ್ಯ ಈ ಎಲ್ಲರ ಶ್ರಮವನ್ನು ಮತ್ತು ಕೆಲಸವನ್ನು ಗಮನಿಸಿದ ಯಶ್ ರವರು ಹೊಗೊಳಿ ಕೊಂಡಾಡಿದ್ದಾರೆ.

ಕಾಂತರ Chapter-1 ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ಹೊಸ ಆಯಾಮವನ್ನು ನೀಡಿದೆ. ರಿಷಬ್ ಶೆಟ್ಟಿ, ಬದ್ದತೆ, ಪಕ್ವತೆ, ಹಾಗೂ ಭಕ್ತಿಯೂ ಪರದೆಯ ಪ್ರತಿಯೊಂದು ಫ್ರೇಮ್ ನಲ್ಲಿ ಎದ್ದು ಕಾಣುತ್ತದೆ. ಕಥೆಗಾರನಾಗಿ, ನಿರ್ದೇಶಕನಾಗಿ ಮತ್ತು ನಟನಾಗಿ ನಿಮ್ಮ ಏನನ್ನು ಗ್ರಹಿಸಿದ್ರಿ ಅದನ್ನು ಹಾಗೇ ಪರೆದಯ ಮೇಲೆ ತಂದಿದ್ದೀರಿ, ನೋಡುತ್ತಲೇ ಚಿತ್ರದೊಳಗೆ ಹೋಗುವಂತ ಅನುಭವವನ್ನು ನೀಡಲಿದೆ.


ಚಿತ್ರ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಹೊಂಬಾಳೆ ಚಿತ್ರ ನಿರ್ಮಾಣ ಸಂಸ್ಥೆಗೆ ಹೃತ್ಫೂರಕ ಅಭಿನಂದನೆಗಳನ್ನು ತಿಳಿಸಿದರು. ಹಾಗೂ ದೊಡ್ಡ ಗುರಿಗಳನ್ನು ಹೊಂದಿರುವ ಚಿತ್ರತಂಡಗಳ ಮೇಲೆ ನೀವು ಯಾವುದೇ ಅಪೇಕ್ಷಗಳಲ್ಲಿದೆ ನೀಡುತ್ತಿರುವ ಸಹಕಾರ ಚಿತ್ರರಂಗದ ಘನತೆಯನ್ನು ಹೆಚ್ಚುಸುತ್ತಲೇ ಇದ್ದೀರಿ.

ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ನಿಮ್ಮ ಸಂಗೀತವು ಪ್ರತಿಯೊಂದು ಫ್ರೇಮ್ ಗೆ ಜೀವ ತುಂಬಿದೆ. ಅರವಿಂದ್ ಕಶ್ಯಪ್ ನಿಮ್ಮ ಅಮೋಘ್ನ ಛಾಯಾಗ್ರಹಣವು ಬೇರೊಂದು ಲೋಕವನ್ನೇ ಸೃಷ್ಟಿಸಿದ್ದಾರೆ.


ಅತ್ಯುತ್ತಮವಾದ ನಟೆನೆ ಮೂಲಕ ಜಯರಾಮ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್ ಹಾಗೂ ಇಡೀ ಕಾಲವಿದರ ತಂಡಕ್ಕೆ ಮತ್ತು ಚಿತ್ರತಡಂದ ಸದಸ್ಯರುಗಳ ಶ್ರಮವನ್ನು ಗುರಿತಿಸಿದಲ್ಲದೆ. ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಅವರ ಪ್ರತಿಭೆ ಪಾತ್ರದ ಮೂಲಕ ಅನಾವರಣಗೊಳಿಸಿದ್ದಾರೆ ಹಾಗೂ ಚಿತ್ರದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದಂತಿದೆ. ಹಾಗೂ ಎಲ್ಲರೂ ಒಟ್ಟಾಗಿ ಒಂದು ಬೇರೊಂದು ರೀತಯ ಚಿತ್ರದ ಜೊತೆಗೆ ಅದ್ಬುತವಾದ ಚಿತ್ರವನ್ನು ನೀಡಿದ್ದಾರೆಂದು ಯಶ್ ಟ್ವೀಟ್ ಮೂಲಕ ಅಭಿನಂದನೆಗಳ ಮಹಾಪುರವೇ ಹರಿಸಿದ್ದಾರೆ.