
ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯುವ ನಾಡ ಹಬ್ಬಕ್ಕೆ ವಿಶ್ವ ಮಾನ್ಯತೆ ಪಡೆದುಕೊಂಡಿದೆ. 10 ದಿನಗಳ ಕಾಲ ನಡೆಯುವ ಅನೇಕ ಪಾರಂಪರಿಕ, ಸಾಂಸ್ಕೃತಿಕ ಮತ್ತು ದಬಾರ್ ವೈಭೋಗಗಳನ್ನು ಕಣ್ತುಬಿಕೊಳ್ಳಲು ಅರಮನೆ ನಗರಗಕ್ಕೆ ದೇಶ, ಹಾಗೂ ವಿದೇಶಿಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.
ದಸರಾ ಆಯೋಜಕರು ಸಾರ್ವಜನಿಕರಿಗೆ ಅರಮನೆಯ ಒಳಗೂ ಹೊರೆಗೂ ನಡೆಯುವ ಕಾರ್ಯಕ್ರಮಗಳನ್ನು ವೀಕ್ಷಿಸಲು ಟಿಕೆಟ್ ಗಳನ್ನು ಹೊರತಂದು ಮಾರಟ ಮಾಡುತ್ತದೆ. ಮೈಸೂರು ಜಿಲ್ಲಾಡಳಿತ ಹಾಗೂ ದಸರಾ ಆಯೋಜಕರು ಇಬ್ಬರು ಜೊತೆಗೂಡಿ ಟಿಕೆಟ್ ಅಥವಾ ಪಾಸ್ ಗಳನ್ನು ವಿತರಿಸುತ್ತದೆ. ಒಂದು ಕಡೆ ದಸರಾ ಸಂಭ್ರಾಮಚರಣೆ ನಡೆಯುತ್ತಿದ್ದರೆ ಇನ್ನೊಂದು ಕಡೆಜನತೆಯ ಹತಾಶೆ, ನಿರಾಸೆ, ಆಕ್ರೋಶ ಯಾಕೆ ಅಂತೀರಾ ? ಸುದ್ದಿ ಓದಿ!

2025 ರ ದಸರಾ ಸಂಭ್ರಮವನ್ನು ನೋಡಲು Gold ಪಾಸ್ ಒಬ್ಬರಿಗೆ ರೂ 6,500 ನಿಗದಿ ಪಡೆಸಲಾಗಿತ್ತು.ಈ ಪಾಸ್ ನಲ್ಲಿ ವಿಶ್ವ ವಿಖ್ಯಾತ ದಸರಾ procession ಅದರಲ್ಲೂ ಜಂಬೂ ಸವಾರಿ ಹಾಗೂ ಅದೇ ದಿನ ಸಂಜೆ ನಡೆಯುವ Torch Light Parade ನೋಡ ಬಹದು. ಇನ್ನು ಪ್ರತ್ಯೇಕ ಕಾರ್ಯಕ್ರಮಗಳನ್ನು ವೀಕ್ಷಣೆಗೆ 3,500 ರೂ ಟಿಕಟ್ ನಿಗದಿಯಾಗಿದ್ದು, ಈ ಟಿಕೆಟ್ ನಲ್ಲಿ ಕೇವಲ ಜಂಬೂ ಸವಾರಿ ಮೆರವಣಿಗೆಯನ್ನು ಮಾತ್ರ ನೋಡಬಹದಾಗಿದೆ.
ಯುವ ದಸರಾಗೆ ರೂ 2,500 ಹಾಗೂ ರೂ 5,000 ನಿಗದಿಪಡೆಸಲಾಗಿತ್ತು.
Torch Light Parade – ರೂ 1,500
ಡ್ರೋನ್ ಶೋ – ರೂ 1,000
ಪಾಸ್ ಗೋಲ್ಮಾಲ್ !

ಈ ಟಿಕೆಟ್ ದರಗಳನ್ನು ಮೈಸೂರ ಆಡಳಿತ, ದಸರಾ ಆಯೋಜಕರು, ಅರಮನೆ ಆಡಳಿತ ಮಂಡಳಿ ಹಾಗೂ ರಾಜ್ಯ ಸರ್ಕಾರವು ಈ ಎಲ್ಲರೂ ಸೇರಿ ಟಿಕೆಟ್ ದರವನ್ನು ನಿಗದಿಪಡಿಸುತ್ತದೆ. ಹೀಗಿರುವಾಗ ರೂ 6,500 3,500 ಕೊಟ್ಟು ಜಂಬೂ ಸವಾರಿ ನೋಡಲು ಬಂದವರಿಗೆ ಭಾರೀ ನಿರಾಶೆಯಾಗಿದೆ. ಕಾರಣ ಪೊಲೀಸರು ಮತ್ತು ಆಯೋಜಕರು 6,500 ಹಾಗೂ 3,500 ರೂ ಪಡೆದು ಬಂದವರನ್ನು ಜಂಬೂ ಸವಾರಿ ಕಾರ್ಯಕ್ರಮವನ್ನು ವೀಕ್ಷಿಸಲು ಅನು ಮಾಡಿಕೊಟ್ಟಿಲ್ಲ.
ಯಾವ ಸೂಕ್ತ ಕಾರಣಗಳನ್ನು ನೀಡದೆ ದುಡ್ಡು ಕೊಟ್ಟು ಟಿಕೆಟ್ ಪಡೆದವರಿಗೆ ಅನ್ಯಾಯ ಮಾಡಿದೆ. ರೂ 14,000 ಗಳನ್ನು ಪಡೆದ ಯುವಕರು ಅರಮನೆಯತ್ತ ಬಂದಿದ್ದಾರೆ. ಆದರೆ ಅರಮನೆಯ ಪ್ರವೇಶ ದ್ವಾರದ ಬಳಿ ನಿಂತಿದ್ದ ಪೊಲೀಸರು ಇವರುಗಳಿಗೆ ಪ್ರವೇಶ ನೀಡಿಲ್ಲ. ಕಾರಣ ಕೇಳಿದರು ಕಾರಣ ಹೇಳುತ್ತಿಲ್ಲ. ಹಾಗಿದ್ದರೆ ಈ ದುಬಾರಿ ಮ್ತತು ಭಾರೀ ಮೊತ್ತದ Gold Pass ಹಾಗೂ ಇತರೆ ಪಾಸ್ ಗಳನ್ನು ಮಾರಾಟ ಮಾಡಿದ್ದಾದರು ಯಾಕೆ?

ಹಣಕೊಟ್ಟು ದುಬಾರಿ ಟಿಕೆಟ್ ಪಡೆದವರು ಅರಮನೆ ಕಡೆ ಬಂದಿದ್ದಾರೆ. ಅರಮನೆಯ ಪ್ರವೇಶ ದ್ವಾರದ ಬಳಿ ಜನಜಂಗಳಿ ಉಂಟಾಗಿತ್ತು ಕಾರಣ, ದಸರಾ ಆಯೋಜಕರು, ಅರಮನೆ ಸಿಬ್ಬಂದಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾತನದಿಂದ ಜಂಬೂ ಸವಾರಿ ಗೆ ಪಾಸ್ ಪಡೆದವರಿಗೆ ಅನುಮತಿ ನೀಡಿಲ್ಲ.
ಒಂದು ಕಡೆ ಇಲಾಖೆಯ ಸಿಬ್ಬಂದಿಗಳ, ಸಚಿವರುಗಳ ಹಾಗೂ ಶಾಸಕರುಗಳ ಕುಟುಂಬದವರಿಗೆ ಮತ್ತು ಆಪ್ತರಿಗೆ ಜಂಬೂ ಸವಾರಿಗೆ ನೋಡಲು ಅವಕಾಶ ಕಲ್ಪಿಸಿದೆ ಆದರೆ ಗೋಲ್ಡ್ ಹಾಗೂ ಇತರೆ ಪಾಸ್ ಪಡೆದವರಿಗೆ ಅನುಮತಿ ನಿರಾಕರಿಸಿದೆ.

ಇದಕ್ಕೆ ಕಾರಣ ಜಂಬೂ ಸವಾರಿ ವೀಕ್ಷಕರ ಕೊಠಡಿ ಹೌಸ್ ಫುಲ್ . ಹಾಗಿದ್ದರೆ ಪಾಸ್ ತೆಗೆದುಕೊಂಡವರು ಹೊರಗಡೆ ಇದ್ದಾರೆ, ಹಾಗಿದ್ದರೆ ಹೌಸ್ ಫುಲ್ ಆಗಿದ್ದಾದರು ಹೇಗೆ ಅಂದ್ರೆ, ಜಿಲ್ಲಾಡಳಿತ, ಕಾರ್ಯಕ್ರಮದ ಆಯೋಜಕರು, ಸರ್ಕಾರ ಇವರುಗಳ ಸ್ವಾರ್ಥಕ್ಕೆ ಬಲಿಯಾಗಿದ್ದು ಮಾತ್ರ ಪ್ರಾಮಾಣಿಕವಾಗಿ ದುಡ್ಡುಕೊಟ್ಟು ಟಿಕೆಟ್ ಪಡೆದವರು.
ರಾಜ ಮಾತೆ ರಾಣಿ ಪ್ರಮೋದಾದೇವಿ ಹಾಗೂ ಯುಧುವೀರಿನಿಂದಾಗಿ ಅರಸರ ಮನೆತನಕ್ಕೆ ಅಪಮಾನ !
ಯಧುವೀರ ಸದ್ಯ ಮೈಸೂರು ಜಿಲ್ಲೆಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರು ರಾಜ ವಂಶಸ್ಥ ಆಗುವ ಮೊದಲು ಜನಪ್ರತಿನಿಧಿ ಹಾಲಿ ಎಂಪಿ, ಹೀಗಿರುವಾಗ ಅವರ ಜವಾಬ್ದಾರಿ ಹೆಚ್ಚಾಗಿರುತ್ತಲ್ಲವೇ? ಹಾಗಿದ್ದರು ಅವರ ಕಣ್ಣೆದುರೇ ಇಂತಹ ಅನ್ಯಾಯವಾದಗಲೂ ಜಾಣಕುರುಡು, ಜಾಣ ಕಿವುಡು ಹಾಗೂ ಮೌನ ತಾಳಿರುವುದು ಎಷ್ಟು ಸರಿ?
ಇವರದ್ದು ಬೇಜವ್ದಾರಿ ನಡೆಯಾದರೆ, ಇನ್ನೂ ಸರ್ಕಾರ ಮತ್ತು ಇಲಾಖೆಯ ಮುಖ್ಯಸ್ಥರು ಏನೂ ಮಾಡುತ್ತಿದ್ದರು. ದಸರಾ ಆಚರಣೆ ಪ್ರಾರಂಭಕ್ಕೂ ಮೊಲದೇ ಪಾಸ್ ಮಾರಟ ಮಾಡುವ ಜಿಲ್ಲಾಡಳಿತ ಪಾಸ್ ಮಾರಾಟವಾದ ಮೇಲೆ, ಪಾಸ್ ದಾರರಿಗೆ ಪ್ರವೇಶ, ಆಸನ ಹಾಗೂ ಇತರೆ ಸೌಕರ್ಯಗಳನ್ನು ಒದಗಿಸಬೇಕೆಂಬ Common Sense ಇಲ್ಲದವರು ಅದು ಹೇಗೆ ಇಷ್ಟು ವರ್ಷ ದಸರಾ ಆಯೋಜನೆ ಮಾಡುತ್ತ ಬಂದಿದ್ದಾರೆ?
ಪಾಸ್ ಗೆ ಇಷ್ಟುದೊಂದು ದುಡ್ಡು ನಗದಿಪಡಿಸಿರುವುದೇ ದೊಡ್ಡ ತಪ್ಪು, ಆ ನಂತರದಲ್ಲಿ ಪಾಸ್ ಪಡೆದವರನ್ನು ನಿರ್ಲಕ್ಷಿಸಿರುವುದು ಮತ್ತೊಂದು ತಪ್ಪು.
ಸಿಎಂ ರವರು ಮೈಸೂರ ಅರಮನೆಗೆ ಬಸ್ ಇಂದ ಬಂದ ಕೂಡಲೇ ಸರ್ಕಾರದ ವಾಹನದ ಮೂಲಕ ಅವರನ್ನು ನಿಗದಿತ ಸ್ಥಳಕ್ಕೆ ಕರೆದುಕೊಂಡು ಬರಲಾಯಿತು. ಅವರ ಜೊತೆ ಕೆಲವು ಸಚಿವರು ಸಾಥ್ ನೀಡಿದ್ದರು ಆ ವಾಹನದಲ್ಲಿ ಓರ್ವ ಯುವಕ ಕೂಡ ಇದ್ದನೂ. ಆ ಹುಡುಗ ಯಾರ ಮಗನೇ ಯಾಗರಲಿ ಆತನಿಗೆ ಮುಕ್ತವಾದ ಅವಕಾಶ ಸಿಗುವಾಗ. ಅಷ್ಟೋಂದು ಹಣ ಪಾವತಿಸಿ ಪಾಸ್ ಪಡೆದವರರನ್ನು ಉರಿ ಬಿಸಲಿನಲ್ಲಿ ಗೇಟ್ ನ ಹೊರಗೆ ನಿಲ್ಲಿಸಿರುವುದು ಎಷ್ಟರ ಮಟ್ಟಿಗೆ ಸರಿ? ಇದು ಎಲ್ಲಾ ಆಯಾಮಗಳಿಂದಲೂ ವಂಚನೆ ಅಲ್ಲದೆ ಮತ್ತೇನೂ?

ಆ ಯುವಕ ಯಾರು? ಆ ಯುವಕನಿಗೆ ಸಿಎಂ ಹಾಗೂ ಸಚಿವರುಗಳಿದ್ದ ವಾಹನದೊಳಿಗೆ ಆತನಿಗೆ ಪ್ರವೇಶ ಕಲ್ಪಿಸಿದ್ದು ಯಾರು? ಮತ್ತು ಆ ನಡೆ ಸರಿಯೇ?
ಸಮ, ಸಮಜಾದ ಬಗ್ಗೆ ಮಾತನಾಡುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಅದು ಹೇಗೆ ಪಾಸ್ ದಾರರನ್ನು ನಿರ್ಲಕ್ಷಿಸಿತು. ಇದಕ್ಕೆ ಹೊಣೆ ಯಾರು? ಸಿಎಂ, ಡಿಸಿಎಂ, ಸಚಿವರು ಹಾಗೂ ಶಾಸಕರಿದ್ದ ಕಾರ್ಯಕ್ರಮದಲ್ಲಿ ಇಂತಹ ಘಟನೆ ನಡೆಯಲು ಹೇಗೆ ಸಾಧ್ಯ?
ಸಾರ್ವಜನಿಕರೆಂದರೆ ಇಷ್ಟೊಂದು ನಿರ್ಲಕ್ಷ್ಯ ಮತ್ತು ಅಸಡ್ಡೆತನ ಸರಿಯೇ?
ಇನ್ನೂ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡುವ ಮಾಜಿ ಸಂಸದ, ಪ್ರತಾಪ್ ಸಿಂಹ ತನ್ನಿದಂಲೇ Tipu Express Train ಹೆಸರು ಬದಲಾಗಿ, ಒಡೆಯರ್ ಹೆಸರ ಕಾರಣೀಕರ್ತ ಎಂದು ಬೊಬ್ಬೆ ಹೊಡೆಯುವ ಹಿಂದೂ ಹುಲಿ ಈ ವಿಚಾರವಾಗಿ ಮಾತನಾಡದೆ, ಮೌನದಲ್ಲಿರುವುದು ಏಕೆ?

ಬೇರಲ್ಲ ವಿಚಾರಗಳ ಮಾತನಾಡುವ ಹಿಂದೂ ಸಂಘಟೆನಗಳು, ಸಾಮಾಜಿಕ ಹೋರಾಗಾರರು ಈ ವಿಚಾರದಲ್ಲಿ ಮೌನ ವಹಿಸಿರುವುದು ಎಷ್ಟರ ಮಟ್ಟಿಗೆ ಸರಿ.
ನೋಡಿ ಶ್ರಮ ಪಟ್ಟು ಪಾಸ್ ಖರೀದಿಸುವವರು ತಮಗಾದ ನೋವು, ಹತಾಶೆ ಹಾಗೂ ಆಕ್ರೋಶದಿಂದ ಸರ್ಕಾರದ ವಿರುದ್ಧ ಮತ್ತು ಅರಮನೆ ಆಡಳಿತದ ವಿರುದ್ಧ ಆಕ್ರೋಶ ಹೋರಹಾಕಿದ್ದಾರೆ. ಈ ಎಲ್ಲಾ ಎಡವಟ್ಟಿಗೆ ಕಾರಣ ಡಿಸಿ ಲಕ್ಷೀಕಾಂತ್ ರೆಡ್ಡಿ, ಮೈಸರೂ ನಗರದ ಪೊಲೀಸ್ ಆಯುಕ್ತರಾದ ಸಿಮಾ ಲಾಟ್ಕರ್, ಉಸ್ತುವಾರಿ ಸಚಿವರಾದ ಡಾ.ಹೆಚ್. ಸಿ. ಮಹಾದೇವಪ್ಪ, ಹಾಗೂ ಚಾಮುಂಡಿ ಅಭಿವೃದ್ಧಿ ಪ್ರಧಿಕಾರದ ನಿರ್ವಹಣಾ ಅಧಿಕಾರಿಯಾಗತ್ರಿ ಈ ಎಲ್ಲಾ ಮಹನೀಯರ ನಿರ್ಲಕ್ಷ್ಯ ಹಾಗೂ ಬೇಜವಾಬ್ಧಾರಿ ತನಕ್ಕೆ ಬಲಿಯಾದರವರು ಪಾಸ್ ಪಡೆದವರು.

ಅದೆಷ್ಟೋ ದೂರದ ಊರುಗಳಿಂದ, ಅದೆಷ್ಟೋ ಆಸೆ, ಕನಸ್ಸು ಹೊತ್ತು ಅರಮನೆ ನಗರಕ್ಕೆ ಬಂದೂ ಈ ವಿಶ್ವವಿಖ್ಯಾತ ದಸರಾ ಕಾರ್ಯಕ್ರಮಗಳನ್ನು ವೀಕ್ಷಣೆ ಬಂದವರಿಗೆ ಆಗಿರುವ ಹತಾಶೆ, ಬೇಸರ, ಆಘಾತ ಮತ್ತು ಆರ್ಥಿಕ ನಷ್ಟ ಇದನ್ನು ತಂಬಿಸಿಕೊಡವವರು ಯಾರು? ಈ ಮಹಾ ಎಡವಟವಟ್ಟಿಗೆ ಯಾರು ಉತ್ತರಗಳನ್ನು ನೀಡಬೇಕು?