
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರವರು ಸದ್ಯ ದಕ್ಷಿಣ ಅಮೇರಿಕಾದ ಪ್ರವಾಸದಲ್ಲಿದ್ದು, ಇಂದು EIA ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ನರೇಂದ್ರ ಮೋದಿ ಸರ್ಕಾರವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಒಡ್ಡುತ್ತಿದ್ದು, ಇದರ ಜೊತೆಗೆ ಸಾಂಸ್ಥಿಕ ಸಂಸ್ಥೆಗಳು ಕೂಡ ಅಪಾಯವನ್ನು ಎದುರಿಸುತ್ತಿದೆ ಎಂದು ರಾಹುಲ್ ಗಾಂಧಿ ಆತಂಕವನ್ನು ವ್ಯಕ್ತಪಡೆಸಿದರು.


“ಭಾರತದಲ್ಲಿ ಹಲವಾರು ಧರ್ಮಗಳು, ಸಂಸ್ಕೃತಿಗಳು, ಭಾಷೆಗಳಿವೆ”. ಇವುಗಳಿಗೆ ಅವಕಾಶ ಕಲ್ಪಿಸಿದೆ ಅಂದ್ರೆ ಅದು ಪ್ರಜಾಪ್ರಭುತ್ವ. ಆದರೆ ಇಂದು ಇದೇ ಪ್ರಜಾಪ್ರಭುತ್ವ ಎಲ್ಲಾ ದಿಸೆಗಳಿಂದಲೂ ಅಪಾಯವನ್ನು ಎದುರುಸುತ್ತಿದೆ ಎಂದು ಅಲ್ಲಿನ Engineering ವಿದ್ಯಾರ್ಥಿಗಳ ಜೊತೆ ನಡೆಸಿದ ಸಂವಾದದ ವೇಳೆ ಅವರು ಅಭಿಪ್ರಾಯವನ್ನು ಹಂಚಿಕೊಂಡರು.
ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಅವರು ಭಾರತ ಜಾಗತಿಕವಾಗಿ ಎದುರಿಸುತ್ತಿರುವ ಹಲವಾರು ಸವಾಲುಗಳ ಕುರಿತು ಸಹ ಮಾತನಾಡಿದರು.

ಇತಿಹಾಸದಲ್ಲಿ ಸಾಮ್ರಾಟರು ಬೆಳೆದು ಹೇಗೆ ಅಸ್ತಿತ್ವವನ್ನೇ ಕಳೆದುಕೊಂಡರು ಎಂಬುದರ ಬಗ್ಗೆ ರಾಹುಲ್ ವಿಚಾರವನ್ನು ಪ್ರಸ್ತಾಪಿಸಿದರು. ಇದೇ ವಿಚಾರದ ಬಗ್ಗೆ ಅವರು ಮಾತನಾಡುತ್ತ ಬ್ರಿಟಿಷರು ಹೇಗೆ ಕಲ್ಲಿದ್ದಲ್ಲಿಗಳನ್ನು ಸ್ವಾಧೀನ ಪಡೆಸಿಕೊಂಡರು ಎಂಬುದರ ವಿಚಾರವನ್ನು ಹಂಚಿಕೊಳ್ಳುವುದರ ಜೊತೆಗೆ ಹೇಗೆ ಅಮೇರಿಕಾ ಕಚ್ಚಾ ತೈಲ ಸೇರದಿಂತೆ internal combustion engine ಗಳ ಮೇಲೆ ಹಿಡಿತ ಸಾಧಿಸಿದರ ಬಗ್ಗೆಯೂ ಸಹ ಬೆಳಕು ಚಲ್ಲಿದರು.
ಪ್ರಸ್ತುತ ವಿದ್ಯುತ್ ಚಾಲಿತ ವಾಹನಗಳಿಂದ ಬ್ಯಾಟ್ರಿ ಚಾಲಿತ ವಾಹಗನಗಳ ಕಡೆ ಗಮನ ಹರಿಸುತ್ತಿದೆ. ಈ ಬದಲಾವಣೆಗೆ ಇಡೀ ವಿಶ್ವವೇ ಸಾಕ್ಷಿಯಾಗಿದೆ. ಹಾಗೂ ಈ ತಂತ್ರಜ್ಞಾನದ ಮೇಲೆ ಚೀನಾ ಮತ್ತು ಅಮೇರಿಕಾ ಹಿಡಿತ ಸಾಧಿಸಲು ಪೈಪೋಟಿ ನಡೆಸುತ್ತಿದೆ ಎಂದು ವಿವರಿಸಿದರು.

ಸದ್ಯ ಚೀನಾ ಈ ವಿಚಾರದಲ್ಲಿ ಮೇಲೂ ಗೈ ಸಾಧಿಸಿದ್ದು, ಭಾರತ ಮಾತ್ರ ಈ ಎರಡು ರಾಷ್ಟ್ರಗಳ ನಡುವಿನ ಸಮರವನ್ನು ಸೂಕ್ಷ್ಮದಿಂದ ಗಮನಿಸುತ್ತಿದ್ದು, ಭಾರತದಲ್ಲಿ ಅಧಿಕಾರ ವಿಕೇಂದ್ರೀಕರಣ, ಹಲಾವರು ವೈವಿದ್ಯಮಯ ವಲಯಗಳನ್ನು ಒಳಗೊಂಡಿದ್ದು ಹಾಗೂ ಆಳವಾಗಿ ಬೇರೂರಿದ ಆಧ್ಯತ್ಮ ಭಾರತವನ್ನು ವಿಶೇಷವಾಗಿ ಕಾಣುವುದರ ಜೊತೆಗೆ ಚೀನಾದ ಜೊತೆ ಹೊಲಿಕೆ ಮಾಡಿದರೆ. ಚೀನಾದ ಕೇಂದ್ರೀಕೃತ ಆಡಳಿತದಿಂದ ಅಲ್ಲಿನ ಜನರ ಹಿತಾಸಕ್ತಿಗಾಗಿ ಶ್ರಮಿಸದ ಸರ್ಕಾರದ, ಹಾಗೆ ಭಾರತದ ಆಡಳಿತ ವ್ಯವಸ್ಥೆ ಆ ರೀತಿಯಂತೆ ಎಂದೂ ಬಯಸುವುದಿಲ್ಲವೆಂದು ಅಭಿಪ್ರಾಯಪಟ್ಟರು.

ಇನ್ನು ಅಮೇರಿಕಾದ ಕುರಿತು ಮಾತನಾಡಿದ ಅವರು ಅವರು ಡೋನಾಲ್ಡ್ ಟ್ರಂಪ್ ಧ್ರುವೀಕರಣದ ಆಡಳಿತದ ನೀತಿಯಿಂದ ಅತೀ ದುರ್ಬಲ ಹಾಗೂ ಹೆಚ್ಚಾಗಿ ನಿರುದ್ಯೋಗಿಗಳು ತೀವ್ರವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
