
- *ರಾಹುಲ್ ಗಾಂಧಿ ಈ ಹೆಸರು ಕೇಳಿದರೆ ದೇಶದ 70% ಜನರಿಗೆ ಇವರೆ ರಾಷ್ಟ್ರ ನಾಯಕ.
*ರಾಹುಲ್ ಗಾಂಧಿ ಸಂಘಪರಿವಾರದವರಿಗೆ ನುಂಗಲಾರದ ತುತ್ತಾಗಿ ಪರಿಣಿಮಿಸಿದ್ದಾರೆ.
*ಇದಕ್ಕೆ ಕಾರಣ ಸಂಘಪರಿವಾರ ಮತ್ತು ಗೋಧಿ ಮಾಧ್ಯಮಗಳು.
ರಾಹುಲ್ ಗಾಂಧಿ ನಿರ್ದೇಶನದಂತೆ ಕೇಂದ್ರ ಕಾರ್ಯನಿರ್ವಹಿಸುತ್ತದೆ. ಇದು ಕೇವಲ ಹೇಳಿಕೆಯಲ್ಲ ಇದೇ ವಾಸ್ತವ.
ರಾಜಕೀಯ ನಾಯಕರಿಗೆ ದೂರದೃಷ್ಠಿ ಹಾಗೂ ಭವಿಷ್ಯವನ್ನು ಗ್ರಹಿಸುವ ಶಕ್ತಿ ಇರಬೇಕು, ಹಾಗೂ ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳುವ ಸಂವೇದನಾಶೀಲತೆ ಇರಬೇಕು!, ಯಾರಲ್ಲಿ ಇಂತಹ ಗುಣವಿರುತ್ತದ್ದೋ ಜನರೆ ಅವರನ್ನು ಜನನಾಯಕನೆಂದು ಪರಿಗಣಿಸುತ್ತಾರೆ.

ಇದಿಷ್ಟು ಗುಣಗಳು ರಾಹುಲ್ ಗಾಂಧಿಯಲ್ಲಿದ್ದು, ಭವಿಷ್ಯದ ಪ್ರಧಾನಮಂತ್ರಿ ಎಂದು ಭಾರತೀಯರು ಒಪ್ಪಿದ್ದಲ್ಲದೆ, ರಾಹುಲ್ ರನ್ನು ಕಂಡರೆ ಸಾಕು ಪಿಎಂ ಪಿಎಂ ಎಂದು ಘೋಷಣೆ ಕೂಗುತ್ತಿದ್ದಾರೆ.
ಆಡಳಿತದಲ್ಲಿರುವುದು ಬಿಜೆಪಿ, ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕ ಶ್ಯಾಡೋ ಪಿಎಂ ! ಆದರೆ ಬಿಜೆಪಿ, ಗೋಧಿ ಮಾಧ್ಯಮಗಳ ಪ್ರಮುಖ ಪ್ರಶ್ನೆ ರಾಹುಲ್ ಗಾಂಧಿ ಎಲ್ಲಿ? ಅವರ ಪ್ರಕಾರ ರಾಹುಲ್ ಗಾಂಧಿ ಈ ದೇಶದ ಅಸಲಿ ಪ್ರಧಾನಿ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇವಲ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿಯವರ ಜಪ ಮಾಡುತ್ತಿದ್ದರು. ಈಗ ರಾಹುಲ್ ಗಾಂಧಿಯನ್ನು ಸೇರಿಸಿಕೊಂಡು ಪ್ರತಿ ನಿತ್ಯ ಜಪ ಮಾಡುತ್ತಿದ್ದಾರೆ. ಗೋಧಿ ಮಾಧ್ಯಮಗಳಿಗೆ ಮತ್ತು ಬಿಜೆಪಿ ವಕ್ತಾರರಿಗೆ ಯಾರು ಈ ದೇಶದ ಪ್ರಧಾನಿ ಎಂಬ ಅನುಮಾನ ಪ್ರತಿಕ್ಷಣ ಕಾಡುತ್ತಲೇ ಇರುತ್ತದೆ!
ಪ್ರಧಾನ ಮಂತ್ರಿ ಮಾತ್ರ ವಿದೇಶ ಪ್ರವಾಸವನ್ನು ಯಾವ ಸಂದರ್ಭದಲ್ಲಾದರು ಕೈಗೊಳ್ಳಬಹುದು. ಆದರೆ ರಾಹುಲ್ ಗಾಂಧಿ ಮಾತ್ರ ಯಾವುದೇ ರಾಜ್ಯದಲ್ಲಿ ಎಂಥಹದ್ದೆ ಸಮಸ್ಯೆ, ಸಂಕಷ್ಟ ಎದುರಾದರೆ ಅಲ್ಲಿ ಇವರು ಹಾಜರಾಗಬೇಕು ? ಸಮಸ್ಯೆಯನ್ನು ಆಲಿಸಬೇಕು? ರಾಹುಲ್ ಗಾಂಧಿ ಮಾತ್ರ ಯಾರು ನಿರೀಕ್ಷಿಸಲು ಬಿಡಲಿ ಅವರು ತಮ್ಮ ಕರ್ತವ್ಯದಿಂದ ಎಂದೂ ಹಿಂದೆ ಸೆರಿದಿಲ್ಲ. ಯಾವುದೇ ಸಮದಯಲ್ಲಿ, ಅದು ಎಂಥಹದ್ದೆ ಸಂದರ್ಭವಿರಲಿ ರಾಹುಲ್ ಗಾಂಧಿ ಸಮಸ್ಯೆಗೆ ಸ್ಪಂದಿಸುತ್ತಾರೆ. ಇದು ಕೇಂದ್ರ ಸರ್ಕಾರಕ್ಕೂ ತಿಳಿದಿದೆ.



ಇದಕ್ಕೆ ಸಾಕ್ಷಿ ಎಂಬಂತೆ ಮಣಿಪುರ ಹತ್ತಿ ಉರಿದಾಗ, ಡಬಲ್ ಇಂಜಿನ್ ಸರ್ಕಾರವು ಸತತವಾಗಿ ೨ ವರ್ಷಗಳ ಕಾಲ ಘಾಡ ನಿದ್ರೆಗೆ ಜಾರಿತ್ತು. ಮೊದಲು ಮಣಿಪುರಕ್ಕೆ ಹೋಗಿ ಭೇಟಿ ನೀಡಿ ಅಲ್ಲಿನ ಜನರ ನೋವಿಗೆ, ಸಂಕಷ್ಟಕ್ಕೆ ಮಿಡಿದಿದ್ದು ಇದೇ ರಾಹುಲ್ ಗಾಂಧಿ, ಅವರು ಆಗ ಕೇವಲ ಸಂಸದಾರಗಿದ್ದ ಅವಧಿಯಲ್ಲೇ ಮಣಿಪುರಕ್ಕೆ ಭೇಟಿ ನೀಡಿ, ಸಮಸ್ಯೆಯ ಗಂಭೀರತೆ ಅರಿತು, ಪ್ರಧಾನ ಮಂತ್ರಿಗೆ ಮಣಿಪುರಕ್ಕೆ ಹೋಗಿ, ಇಲ್ಲಿನ ಜನರನ್ನು ನಿರ್ಲಕ್ಷಿಸಿ ಅವರಿಗೆ ಮೋಸ ಮಾಡಬೇಡಿ ಎಂದು ಎಚ್ಚರಿಸಿದ್ದಾರು ಕೂಡ ಕೇಂದ್ರ ಸರ್ಕಾರ ಮಣಿಪುರದ ಸಮಸ್ಯೆಯ ಗಂಭೀರತೆಯನ್ನು ಅರಿತುಕೊಳ್ಳಲೇ ಇಲ್ಲ.
ಇದು ಕೇವಲ ಮಣಿಪುರದ ಕಥೆ ಮಾತ್ರವಲ್ಲ. ದೇಶದಲ್ಲಿ ಯಾವುದೇ ಅನಹಾತುವಾಗಲೀ ಪ್ರಧಾನಿ ಗೈರು, ರಾಹುಲ್ ಹಾಜರು!

ಮಣಿಪುರ ಹೊತ್ತಿ ಉರಿಯಲು ಮಾಜಿ ಸಿಎಂ ಬಿರೇನ್ ಸಿಂಗ್ ಅವರ ನೀಚ ರಾಜಕೀಯಕ್ಕೆ ಇಡೀ ರಾಜ್ಯ ಬಲಿಯಾಗಬೇಕಾಯಿತು. ಆತನ ದ್ವೇಷ ಮತ್ತು ಕಿಚ್ಚಿಗೆ ಮಣಿಪುರದ ಜನರು ಬಲಿಯಾದರು. ತಡವಾಗಿಯಾಗಿಯಾದರು ಬಿರೇನ್ ಸಿಂಗ್ ತಾವು ಮಾಡಿರುವುದು ನೀಚಾತಿ ನೀಚ ಕೆಲಸವೆಂದು ಅರಿತು, ಪಾಪ ಕಳೆದುಕೊಳ್ಳುವ ನೆಪದಾಲ್ಲಾದರು ಸಂಘಪರಿವಾರದ ಬೇರೆ ನಾಯಕರಂತೆ ಅಧಿಕಾರಕ್ಕೆ ಆಸೆಪಡದೆ ಜವಾಬ್ಧಾರಿ ಅರಿತು, ಮಣಿಪುರ ಅಕ್ಷರಸಹ ಗಲಭೆಗೆ ತುತ್ತಾಗಿ ನಲುಗಿತ್ತೆಂದು ಭಾವಿಸಿ ರಾಜೀನಾಮೆ ನೀಡಿದ್ದಾರು ಸಹ ಮಣಿಪುರದಲ್ಲಿ ಇನ್ನು ಶಾಂತವಾಗಿಲ್ಲ.

ಮಣಿಪುರಕ್ಕೆ 2 ವರ್ಷಗಳ ಬಳಿಕ ಮೋದಿ ಈ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಬೇಟಿ ನೀಡಿದ್ದ ಬಳಿಕ ಮತ್ತೆ ಅಲ್ಲಿ ಗಲಭೆ ಶುರುವಾಗಿದೆ. ಈಗ ನೀವೇ ತಿರ್ಮಾನಿಸಿ ಯಾರು ಈ ದೇಶದ ನಿಜವಾದ ನಾಯಕನೆಂದು?
ಮೋದಿ ಅವರು ವಿದೇಶ ಪ್ರವಾಸಕ್ಕೆ ಈವರೆಗೂ 258 ಕೋಟಿ ರೂ ಖರ್ಚಾಗಿದ್ದು ಬಿಟ್ಟರೆ, ದೇಶಕ್ಕೆ ಯಾವುದೇ ಲಾಭದಾಯಕ ಫಲಿತಾಂಶ ಲಭಿಸಿಲ್ಲ. ಆದರೆ ವಿದೇಶಾಂಗ ನೀತಿ ಮತ್ತು ರಾಜತಾಂತ್ರಿಕ ವಿಷಯದಲ್ಲಿ ಭಾರತಕ್ಕೆ ಹಿನ್ನಡೆಯಾಗಿರುವುದಂತು ಸತ್ಯ.
ಭಾರತ ನೆರೆ ರಾಷ್ಟ್ರಗಳ ಜೊತೆ ಹೊಂದಿದ್ದ ಸಂಬಂಧ ಈಗ ಹಳಸಿ ಹೋಗಿದೆ ಇದಕ್ಕೆ ಯಾರು ಕಾರಣ? ನೀವೇ ಯೋಚಿಸಿ?
ಸದ್ಯ ರಾಹುಲ್ ಗಾಂಧಿ ದಕ್ಷಿಣ ಅಮೇರಿಕಾದ ಪ್ರವಾಸದಲ್ಲಿದ್ದಾರೆ.

ದೇಶದ 60% ಮತದಾರರು ನೀಡಿದ ಮತದಿಂದ ಇಂದು ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವುದರ ಜೊತೆಗೆ ಪ್ರಮುಖ ವಿಚಾರಗಳ ಬಗ್ಗೆ ಅವರು ಪ್ರವಾಸವನ್ನು ಕೈಗೊಂಡಿದ್ದಾರೆ.
ಅವರ ಈ ಭೇಟಿ ಭಾರತ-ದಕ್ಷಿಣ ಅಮೆರಿಕಾದ ನಡುವಿನ ಅನೇಕ ವರ್ಷಗಳ ಸ್ನೇಹವನ್ನು ಮತ್ತುಷ್ಟು ಗಟ್ಟಿಗೊಳಿಸುವ ಸಲುವಾಗಿ ಹಾಗೂ ಉಭಯ ರಾಷ್ಟ್ರಗಳ ಸಂಬಂಧವನ್ನು ಭದ್ರಗೊಳಿಸುವ ಕಾರಣದೊಂದಿಗೆ ಪ್ರವಾಸ ಕೈಗೊಂಡಿದ್ದಾರೆ.

ಪ್ರವಾಸದ ಮತ್ತೊಂದು ಪ್ರಮುಖ ಅಂಶವೆಂದರೆ. ಎರಡು ದೇಶಗಳ ಕಲೆ- ಸಾಂಸ್ಕೃತಿಕ ಪರಂಪರೆಯ ಪರಿಚಯ. ಇದರ ಜೊತೆಗೆ ಸಹಕಾರದ, ಆಯಾಮಗಳಿಂದ ಹೊಸ
*ವ್ಯಾಪಾರ-ವಹಿವಾಟು, ಮಾನವ ಸಂಪನ್ಮೂಲಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವುದು
*ತಂತ್ರಜ್ಞಾನ ಬಳಕೆ, ಸುಸ್ಥಿರ ಇಂಧನಗಳ ಬಳಕೆಗಾಗಿ ರಾಹುಲ್ ದಕ್ಷಿಣ ಅಮೆರಿಕಾಗೆ ತೆರಳಿರುವುದು.
* ಹಲವು ರಾಷ್ಟ್ರ ನಾಯಕರೊಂದಿಗೆ ಹಾಗೂ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದು, ಈ ಮೂಲಕ ಪ್ರಜ್ಞಾತಂತ್ರ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವುದು ಮತ್ತು ಆರ್ಥಿಕತೆ ದೃಷ್ಟಿಕೋನದಿಂದ ಒಪ್ಪಂದಕ್ಕೆ ಸಹಿಹಾಕುವುದು ಅವರ ಮುಖ್ಯಗುರಿಯಾಗಿದೆ.
*ಭಾರತದ ಮೇಲೆ ಅಮೇರಿಕ ತೆರಿಗೆ ಹೆಚ್ಚಿಸಿರುವ ಹಿನ್ನಲೆಯಲ್ಲಿ ಅಲ್ಲಿನ ಪ್ರಮುಖ ಕಂಪನಿಗಳ ಮುಖ್ಯಸ್ಥರು ಮತ್ತು ಹೂಡಿಕೆದಾರರ ಜೊತೆ ಸಭೆ ನಡೆಸಲಿದ್ದಾರೆ.

ಅವರು ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಲಿದ್ದಾರೆ, ಅದರಲ್ಲೂ ಬ್ರೆಜಿಲ್, ಕೋಲಂಬೋ, ಸೇರದಿಂತೆ ಇನ್ನು ಕೆಲವು ರಾಷ್ಟ್ರಗಳ ಯುವ ಪ್ರತಿಭೆಗಳ ಜೊತೆ ಸಂವಾದವನ್ನು ನಡೆಸಲಿದ್ದು, ಅನೇಕ ವಿಚರಾಗಳ ಮೇಲೆ ಚರ್ಚೆ ನಡೆಸಲ್ಲಿದ್ದಾರೆ.











