ವೃತ್ತಿ ಜೀವನದಲ್ಲಿ ವಿರಾಮದ ನಂತರ, ವಿಶೇಷವಾಗಿ ತಾಂತ್ರಿಕ ಕರ್ತವ್ಯಗಳಲ್ಲಿ ಮಹಿಳೆಯರು ಮತ್ತೆ ಕಾರ್ಯಪಡೆಗೆ ಸೇರಲು ಸಹಾಯ ಮಾಡುವಲ್ಲಿ ಮತ್ತು ಮಹಿಳೆಯರು ಮರುಕೌಶಲ್ಯ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಲು ಅಭ್ಯರ್ಥಿಗಳನ್ನು ಹುರಿದುಂಬಿಸುತ್ತಿರುವ ಭಾರತದ ಅತಿದೊಡ್ಡ AI-ಚಾಲಿತ ವೃತ್ತಿ ವೇದಿಕೆಯಾಗಿರುವ ಹರ್ ಕೀ ಸಂಸ್ಥೆಯ ಸ್ಥಾಪಕರು ಮತ್ತು ಸಿಇಒ ನೇಹಾ ಬಗಾರಿಯಾ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತಮ್ಮ ಕಚೇರಿಯಲ್ಲಿ ಭೇಟಿ ಮಾಡಿ ಮಹಿಳೆಯರನ್ನು ಉದ್ಯೋಗಾವಕಾಶಗಳು, ಮಾರ್ಗದರ್ಶನ, ಕಲಿಕೆಯ ಸಂಪನ್ಮೂಲಗಳು ಮತ್ತು ನೆಟ್‌ವರ್ಕಿಂಗ್‌ಗೆ ಸಂಪರ್ಕಿಸುವಲ್ಲಿನ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ವೃತ್ತಿಜೀವನವನ್ನು ಪುನರಾರಂಭಿಸುವಲ್ಲಿ ಬೆಂಬಲ ನೀಡಲು ವಿಶೇಷ ಮಹಿಳಾ ಕೌಶಲ್ಯ ಮತ್ತು ಉದ್ಯೋಗ ಸಿದ್ಧತೆ ಕಾರ್ಯಕ್ರಮವನ್ನು ಪ್ರಾರಂಭಿಸುವ ಯೋಜನೆಗಾಗಿ ಈ ಸಂಸ್ಥೆಯೊಂದಿಗೆ ಜತೆಯಾಗಿ ಕೆಲಸ ಮಾಡುವುದಾಗಿ ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಮಹಿಳೆಯರನ್ನು ಉದ್ಯೋಗಗಳಲ್ಲಿ ತೊಡಗಿಸಲು ಕಲಿಕಾ ಸಂಯೋಜಕರು, AI-ಚಾಲಿತ ಸಂದರ್ಶನ ತರಬೇತಿ ಏಜೆಂಟ್‌ಗಳು, ಸಂಘಟಿತ ಮಾರ್ಗದರ್ಶನ ಜಾಲಗಳು ಮತ್ತು ನೇಮಕಾತಿ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲು ಹರ್‌ಕೀ ಸಂಸ್ಥೆ ತಮ್ಮ ಜೊತೆಗೂಡಲಿದೆ ಎಂದೂ ಸಚಿವರು ಈ ಸಂದರ್ಭದಲ್ಲಿ ಹೇಳಿದರು.