• Home
  • About Us
  • ಕರ್ನಾಟಕ
Wednesday, January 14, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಡಿಕೆಶಿ ಬಿಜೆಪಿ ಪಕ್ಷವನ್ನು ಸೇರಿಕೊಂಡರೆ ಅವರಷ್ಟು ಪ್ರಾಮಾಣಿಕ ದೇಶಭಕ್ತ ಮತ್ತೊಬ್ಬರಿಲ್ಲ: ರವಿಕೃಷ್ಣಾ ರೆಡ್ಡಿ

ಪ್ರತಿಧ್ವನಿ by ಪ್ರತಿಧ್ವನಿ
August 22, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ವಿಧಾನಸಭೆಯಲ್ಲಿ ಗುರುವಾರ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಶಿವಕುಮಾರ್ ಅವರು ಹಿಂದೆ ಆರ್‌ಎಸ್ಎಸ್ ಸಮವಸ್ತ್ರ ಧರಿಸಿದ್ದರು ಎಂದು ಹೇಳಿದಾಗ, ಶಿವಕುಮಾರ್ ಅವರು, ನನಗೂ ಆರ್‌ಎಸ್‌ಎಸ್‌ ಬಗ್ಗೆ ಗೊತ್ತು, ತಮಾಷೆಯಾಗಿ ಆರ್‌ಎಸ್‌ಎಸ್‌ ಪ್ರಾರ್ಥನಾ ಗೀತೆಯನ್ನು ಹಾಡಿ ಗಮನ ಸೆಳೆದದ್ದು, ಈ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಧಾನಸಭೆಯಲ್ಲಿ ಮಾತನಾಡುತ್ತಾ ‘ನಮಸ್ತೇ ಸದಾ ವತ್ಸಲೇ ಮಾತೃಭೂಮಿ’ ಗೀತೆ ಎಂದು ಪಠಿಸಿದ್ದಾರೆ.

ADVERTISEMENT

ಈ ಕುರಿತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷರು ರವಿಕೃಷ್ಣಾ ರೆಡ್ಡಿ ತಮ್ಮ ಸಾಮಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಇಷ್ಟೂ ವರ್ಷದ ಹೋರಾಟಗಳಲ್ಲಿ ಒಮ್ಮೆಯೂ ನಮ್ಮನ್ನು ಸಕ್ರಿಯವಾಗಿ ಬೆಂಬಲಿಸದೆ ಭ್ರಷ್ಟ JCB ಪಕ್ಷಗಳಿಗೇ ಮತ ನೀಡಿದವರೆಲ್ಲಾ ಆಗಾಗ “ನಿಮ್ಮ ಬಗ್ಗೆ ಬಹಳ ಗೌರವ ಇತ್ತು. ಆದರೆ ಇದು ಸರಿಹೋಗಲಿಲ್ಲ.” ಎಂದು ಹೇಳುವುದು ನೋಡಿದರೆ, ಏನೆಂದು ಹೇಳಬೇಕೋ ಗೊತ್ತಾಗುವುದಿಲ್ಲ. ಅವರ ಪಕ್ಷ/ಜಾತಿ/ಕುಲ/ಮತ/ಸಿದ್ಧಾಂತ/ಇತ್ಯಾದಿಗಳ ಮೂಲಕ್ಕೆ ಹೋಗದೇ ಇರುವ ತನಕ, ಅವರಿಗಿಷ್ಟವಿಲ್ಲದವರ ವಿರುದ್ಧ ಹೋರಾಟ ಮಾಡುತ್ತಿದ್ದರೆ ಆಗ ನಾವು ಒಳ್ಳೆಯವರು.

ನಾವು ಯಾವ ಭ್ರಷ್ಟರ ವಿರುದ್ಧ ಹೋರಾಡಿದ್ದೆವೋ ಅವರು ಅವರಿಷ್ಟದ ಪಕ್ಷ ಸೇರಿಕೊಂಡರೆ ಆಗ ಆ ಭ್ರಷ್ಟರೂ ಅವರಿಗೆ ಒಳ್ಳೆಯವರೇ. ನಾಳೆ ಡಿ.ಕೆ. ಶಿವಕುಮಾರ್ ಬಿಜೆಪಿ ಪಕ್ಷವನ್ನು ಸೇರಿಕೊಂಡರೆ ಅವರಷ್ಟು ಪ್ರಾಮಾಣಿಕ ದೇಶಭಕ್ತ ಮತ್ತೊಬ್ಬರಿಲ್ಲ. ಅದೇ ರೀತಿ ವಿಜಯೇಂದ್ರ/ಯತ್ನಾಳ್ ಇತ್ಯಾದಿಗಳು ಕಾಂಗ್ರೆಸ್ ಸೇರಿಕೊಂಡರೆ ಆಗ ಅವರಷ್ಟು ಸಂವಿಧಾನನಿಷ್ಟ ಜಾತ್ಯತೀತವಾದಿ ಅಪ್ಪಟ ವಿಶ್ವಮಾನವ ಮತ್ತೊಬ್ಬನಿಲ್ಲ.

ಸದ್ಯ, ನಮ್ಮ ಜೊತೆ ನಿಂತವರು ಇಂತಹವರಲ್ಲ. ಹಾಗೇನಾದರೂ ಆಗಿದ್ದರೆ ಇವರು ನಮ್ಮನ್ನು ನಡುದಾರಿಯಲ್ಲಿ ಕೈಬಿಟ್ಟು ಕಟುಕರ ಕೈಗೆ ಒಪ್ಪಿಸಿ ಓಡಿಬಿಡುತ್ತಿದ್ದರು.ಸತ್ಯಂ ವದ. ಧರ್ಮಂ ಚರ.(ಸತ್ಯವನ್ನು ನುಡಿ. ಧರ್ಮದಲ್ಲಿ ನಡೆ) ನುಡಿನಡೆಯಲ್ಲಿ ಅಪ್ರಾಮಾಣಿಕರಾಗಿರುವವರಿಂದ ನನ್ನನ್ನು ಕಾಪಾಡೋ, ಭಗವಂತ! (ಇದನ್ನು ದೇವರೋ, ಪ್ರಕೃತಿಯೋ , ಅಂತಹದ್ದೆ ಯಾವುದೋ ಶಕ್ತಿಯೇ ಮಾಡಬೇಕು. ಯಾಕೆಂದರೆ ನಮ್ಮ ಬಳಿಗೆ ಬಂದು ನಮಗೆ ಹತ್ತಿರವಾಗುವ ಖದೀಮರ ಆಯ್ಕೆ ನಮ್ಮ ಕೈಯಲ್ಲಿರುವುದಿಲ್ಲ. ಅವರು ಖದೀಮರು ಎಂದು ಗೊತ್ತಾದ ನಂತರ ನಾವು ಏನು ಮಾಡುತ್ತೇವೆ ಎನ್ನುವುದು ಮಾತ್ರ ನಮ್ಮ ಆಯ್ಕೆಯೇ ಆಗಿರುತ್ತದೆ. ನಾನಂತೂ ಹೀಗೆ ಹತ್ತಿರವಾಗಿದ್ದ ಅನೇಕ ಖದೀಮರನ್ನು ದೂರ ಓಡಿಸಿದ್ದೇನೆ.

ಈಗಲೂ ಅರಿವಾದಾಗಲೆಲ್ಲ ಮಾಡುತ್ತಿರುತ್ತೇನೆ.) ಅಸತ್ಯ/ಅಧರ್ಮವನ್ನು ಬೆಂಬಲಿಸುವ ಭ್ರಷ್ಟ/ದುಷ್ಟರ ಸಹವಾಸ ಅಥವ ಬೆಂಬಲ ನನಗೆ ವೈಯಕ್ತಿಕವಾಗಿಯಂತೂ ಬೇಕಾಗಿಲ್ಲ. ಇದು ನಮ್ಮ ಹೋರಾಟ ಪ್ರಾಮಾಣಿಕವಾಗಿದ್ದರೂ ಅದು ಜಾತಿ/ಕುಲ/ಮತ/ಸಿದ್ಧಾಂತಗಳಂತಹ ಕ್ಷುಲ್ಲಕ ಹಿನ್ನೆಲೆಯಲ್ಲಿ ಅವರಿಗಿಷ್ಟವಾಗದ ಕಾರಣಕ್ಕೆ “ನಿಮ್ಮ ಬಗ್ಗೆ ಬಹಳ ಗೌರವ ಇತ್ತು” ಎನ್ನುವವರ ಗಮನಕ್ಕೆ. ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ. ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷರು ರವಿಕೃಷ್ಣಾ ರೆಡ್ಡಿ ಅವರು ನೇರವಾಗಿ ಉಪ ಮುಖ್ಯಮಂತ್ರಿಗೆ ಡಿಕೆ ಶಿವಕುಮಾರ್‌ ಅವರಿಗೆ ಮಾತಿನ ಚಾಟಿ ಬೀಸಿದ್ದಾರೆ.

Tags: DK Shivakumardk shivakumar on rssdk shivakumar rssdk shivakumar rss anthemdk shivakumar rss anthem in assemblydk shivakumar rss anthem videodk shivakumar rss prayer controversydk shivakumar rss songdk shivakumar sing rss songdk shivakumar sings rss anthemdk shivakumar sings rss songdk shivkumar on rssdk shivkumar rssdk shivkumar rss anthemdk shivkumar rss connectiondk shivkumar rss tuneKRSrss dk shivakumarrss song by dk shivakumarshivakumar rssshivakumar rss shakhasiddaramaiah
Previous Post

ನಾನು ಹಾಕಿರೋದು ಕೇಸರಿ ಕಲರ್‌ ಅಲ್ಲಪ್ಪ.. ನೀನು ಹಾಕಿರೋದು ಕೇಸರಿ..

Next Post

ಸಿದ್ದರಾಮಯ್ಯ ಭಾಷಣ ವೇಳೆ ಬಂದ ಡಿಕೆಶಿ, ಸಿಎಂ ಗರಂ..!

Related Posts

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
0

ಬೆಂಗಳೂರು: ನಾನು ಎಂಎಲ್ಎ ಆದ ಮೇಲೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಯಾವ ಜಾತಿ ಗಲಭೆ, ಜಾತಿ ರಾಜಕಾರಣ, ಪೊಲೀಸರ ಮೇಲೆ ಒತ್ತಡ, ಒತ್ತಾಯ ಮಾಡಿಲ್ಲ.ಕುವೆಂಪುರವರು ಹೇಳಿದಂತೆ ನಮ್ಮ...

Read moreDetails

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

January 13, 2026
ಪೊಲೀಸರ ಮೇಲಿನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್

ಪೊಲೀಸರ ಮೇಲಿನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್

January 13, 2026
Next Post

ಸಿದ್ದರಾಮಯ್ಯ ಭಾಷಣ ವೇಳೆ ಬಂದ ಡಿಕೆಶಿ, ಸಿಎಂ ಗರಂ..!

Recent News

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
Top Story

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

by ಪ್ರತಿಧ್ವನಿ
January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!
Top Story

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

by ಪ್ರತಿಧ್ವನಿ
January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ
Top Story

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
Top Story

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

January 13, 2026

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada