ಧರ್ಮಸ್ಥಳದಲ್ಲಿ (Dharmasthala case) ನೂರಾರು ಶವಗಳನ್ನ ಹೂತಿಟ್ಟ ಪ್ರಕರಣಕ್ಕೆ (Mass burials ) ಸಂಬಂಧಿಸಿದಂತೆ, ಈಗಾಗಲೇ ಹಲವು ಕಡೆಗಳಲ್ಲಿ ಉತ್ಖನನ ನಡೆದಿದ್ದು, ದೂರುದಾರ ತೋರಿಸುವ ಹೊಸ ಜಾಗದಲ್ಲಿ ಇಂದು ಕೂಡ ಅಧಿಕಾರಿಗಳ ತಂಡದಿಂದ ಪರಿಶೋಧನೆ ನಡೆಯಲಿದೆ.

ನಿನ್ನೆ (ಆ.9) ದೂರುದಾರ ಗುರುತಿಸಿದ 15ನೇ ಪಾಯಿಂಟ್ನ ನಾಲ್ಕು ಕಡೆ ಪರಿಶೋಧನೆ ನಡೆಸಲಾಯಿತು. ಇಂದು ಕೂಡ ದೂರುದಾರ ತೋರಿಸುವ ಜಾಗದಲ್ಲಿ ಪರಿಶೋಧನೆ ನಡೆಯಲಿದ್ದು, ಸ್ಥಳ ಪರಿಶೋಧನೆ ನಡೆಸುವ ವೇಳೆ, ತನ್ನ ಹೇಳಿಕೆಗಳಿಂದ ದೂರುದಾರ ಗೊಂದಲ ಸೃಷ್ಠಿಸುತ್ತಿದ್ದಾನೆ ಎನ್ನಲಾಗಿದೆ.

ಈ ಮಧ್ಯೆ ಪಾಯಿಂಟ್ ನಂಬರ್ 13 ರಲ್ಲಿ ಇನ್ನೂ ಶೋಧ ಕಾರ್ಯ ಬಾಕಿಯಿದೆ. ಈ ಸ್ಥಳದಲ್ಲಿ ಉತ್ಖನನ ಕೊಂಚ ಸವಾಲಿನ ಕೆಲಸ ಆಗಿರೋದ್ರಿಂದ ನೌಕರರ ಸಹಾಯದಿಂದ ಭೂಮಿ ಅಗೆದು ಪರಿಶೀಲಿಸುವ ಬದಲು, GPR ತಂತ್ರಜ್ಞಾನ ಬಳಸಿಕೊಂಡು ಉತ್ಖನನ ನಡೆಯುವ ಯೋಚನೆಯಲ್ಲಿ SIT ಇದೆ.











