ಎಸ್ಐಟಿ (SIT) ಮುಖ್ಯಸ್ಥ ಪ್ರಣಬ್ ಮೊಹಂತಿ (Pranab mohanthi) ಕೇಂದ್ರ ಸೇವೆಗೆ ಹೊಗುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ (Bangalore) ಗೃಹ ಸಚಿವ ಡಾ. ಜಿ.ಪರಮೇಶ್ವರ್ (Parameshwar) ಪ್ರತಿಕ್ರಿಯಿಸಿದ್ದಾರೆ. ನೀವೆಲ್ಲರೂ ಗೊಂದಲ ಸೃಷ್ಟಿ ಮಾಡಿದ್ದೀರಿ..ಸಾಮಾನ್ಯವಾಗಿ ಎಂಪ್ಯಾಲ್ಮೆಂಟ್ ಮಾಡುವಾಗ ಸೀನಿಯರ್ ಆಧಾರ, ಬ್ಯಾಕ್ ಗ್ರೌಂಡ್ ನೋಡಿ ಮಾಡುತ್ತಾರೆ..ಅದರ ಮೇಲೆ ಕೇಂದ್ರದ ಹುದ್ದೆಗಳಿಗೆ ಆಯ್ಕೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ಪ್ರಣಬ್ ಮೊಹಂತಿ ಅದರಲ್ಲಿ ಆಗಿದ್ದು ನಮಗೆ ಕ್ರೆಡಿಟ್.ಆದ್ರೆ ಅವರಿಗೆ ತಕ್ಷಣವೇ ಯಾವ ಹುದ್ದೆ ಕೊಡ್ತಾರೆ ಅನ್ನೋದು ಇಲ್ಲ.ಅವರು ಆ ವಿಚಾರವನ್ನು ತಿಳಿಸುವುದಕ್ಕೆ ಬಂದಿದ್ದರು.ಈಗ ನಾವು ಫೇಕ್ ನ್ಯೂಸ್, ಆನ್‌ಲೈನ್ ಗ್ಯಾಂಬ್ಲಿಂಗ್ ಗೆ ಹೊಸ ಕಾನೂನು ತರುವುದಕ್ಕೆ ಹೊರಟಿದ್ದೇವೆ.ಮೊಹಂತಿ ಅವರು ಐಎಸ್‌ಡಿ ಹೆಡ್ ಇದ್ದಾರೆಇವೆಲ್ಲವೂ ಅವರಿಗೆ ಬರುತ್ತದೆ, ಹಾಗಾಗಿ ಅದರ ಬಗ್ಗೆ ಸಭೆ ಕರೆದಿದ್ದೇನೆ ಎಂದಿದ್ದಾರೆ.

ಈ ಬಗ್ಗೆ ಚರ್ಚೆ ಇದೆ, ಅದರ ಬ್ರೀಫಿಂಗ್ ಮಾಡುವುದಕ್ಕೆ ಬಂದಿದ್ದರು..ಬೇರೆ ಏನು ಚರ್ಚೆ ಇಲ್ಲ,ಧರ್ಮಸ್ಥಳದ ವಿಚಾರದಲ್ಲಿ ನಾವು ಅವರನ್ನು ಹೆಡ್ ಮಾಡಿದ್ದೇವೆ.ಆ ವಿಚಾರದ ಬಗ್ಗೆ ಪದೇ ಪದೇ ಹೇಳಿಕೆ ಕೊಡುವುದಿಲ್ಲ.ಸರ್ಕಾರಕ್ಕೆ ಅವರು ವರದಿ ಕೊಡಲಿ, ತನಿಖೆ ಸಂದರ್ಭದಲ್ಲಿ ನಾವು ಮಾತಾಡೋದು ಸಮಂಜಸವಲ್ಲ ಎಂದಿದ್ದಾರೆ.












