
ನಟಿ ರಮ್ಯಾ Vs ದರ್ಶನ್ ಫ್ಯಾನ್ಸ್ ನಡುವೆ (Actress ramya vs darshan fans) ಸೋಶಿಯಲ್ ಮೀಡಿಯಾದಲ್ಲಿ (Social media) ವಾರ್ ಜೋರಾಗಿದೆ. ನಟಿ ರಮ್ಯಾ ಅವರನ್ನು ಟಾರ್ಗೆಟ್ ಮಾಡಿ ಕೆಲ ದರ್ಶನ್ ಅಭಿಮಾನಿಗಳು ಕೆಟ್ಟ ಸಿಮೆಂಟ್ಸ್ ಮತ್ತು ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸಿದ್ದರು.ಈ ಬಗ್ಗೆ ಸ್ಕ್ರೀನ್ ಶಾಟ್ ಸಮೇತ ಪೋಸ್ಟ್ ಮಾಡಿದ್ದ ರಮ್ಯಾ ಅಕ್ಷರಶಃ ಡಿ ಫ್ಯಾನ್ಸ್ ವಿರುದ್ಧ ಸಿಡಿದೆದ್ದಿದ್ದರು.

ಈ ಮಧ್ಯೆ ನಟಿ ರಮ್ಯಾಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ಪೋಸ್ಟ್ ಮೂಲಕ ಟಕ್ಕರ್ ಕೊಟ್ಟಂತಿದೆ. ಈ ಬಗ್ಗೆ ಸ್ಟೋರಿ ಅಪ್ಲೋಡ್ ಮಾಡಿರುವ ಅವರು, ಮೂರ್ಖ ಅವನ ಮಾತಿನಿಂದ ಗುರುತಿಸಲ್ಪಡುತ್ತಾನೆ, ಬುದ್ಧಿವಂತನು ಮೌನದಲ್ಲಿ ಗುರುತಿಸಿಕೊಳ್ಳುತ್ತಾನೆ ಎಂದು ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮಾಡಿದ್ದಾರೆ.

ಈ ರೀತಿಯ ಮಾರ್ಮಿಕ ಪೋಸ್ಟ್ ಮೂಲಕ ವಿಜಯಲಕ್ಷ್ಮೀ ನಟಿ ರಮ್ಯಾಗೆ ಠಕ್ಕರ್ ಕೊಟ್ಟಂತೆ ಭಾಸವಾಗುತ್ತಿದೆ. ಹೀಗಾಗಿ ಇನ್‌ಸ್ಟಾದಲ್ಲಿ ವಿಜಯಲಕ್ಷ್ಮೀ ದರ್ಶನ್ ಮಾಡಿರುವ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ.