SSLC ಪರೀಕ್ಷಾ ನಿಯಮದಲ್ಲಿ ಕೆಲ ಬದಲಾವಣೆ ತರಲು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮುಂದಾಗಿದೆ. ಸಿಬಿಎಸ್‌ಇ (CBSE) ಮಾದರಿಯಲ್ಲೇ SSLC ಪರೀಕ್ಷೆ ನಡೆಸಲು ಇಲಾಖೆ ಮುಂದಾಗಿದ್ದು, SSLC ಪರೀಕ್ಷೆಯ ಉತ್ತೀರ್ಣ ಅಂಕ ಕಡಿತಗೊಳಿಸಲಾಗಿದೆ.

ಹೌದು ಇನ್ಮುಂದೆ SSLC ಪರೀಕ್ಷೆಯಲ್ಲಿ ಲಿಖಿತ ಪರೀಕ್ಷೆ ಹಾಗೂ ಆಂತರಿಕ ಅಂಕಗಳೂ ಸೇರಿ 100ಕ್ಕೆ ಕನಿಷ್ಠ ಶೇ.33 ಅಂಕ ಪಡೆದರೂ ವಿದ್ಯಾರ್ಥಿಗಳು ಉತ್ತೀರ್ಣರಾಗಲಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.ಈ ಹಿಂದೆ ಪಾಸಿಂಗ್ 35% ಇತ್ತು. ಹೀಗಾಗಿ ಪ್ರತಿ ವಿಷಯದಲ್ಲಿ ವಿದ್ಯಾರ್ಥಿ ಉತ್ತೀರ್ಣನಾಗಲು 35 ಅಂಕ ಪಡೆಯಬೇಕಿತ್ತು.

ಆದ್ರೆ ಈಗ ಪ್ರತಿ ವಿಷಯದಲ್ಲಿ 30 ಅಂಕ ಪಡೆದ್ರೆ ಉತೀರ್ಣರಾಗಲಿದ್ದಾರೆ. ಅಂದರೆ ಒಟ್ಟಾರೆ ಪಾಸಿಂಗ್ ಅಗ್ರಿಗೇಟ್ 33% ಬರಬೇಕು. ಸಿಬಿಎಸ್‌ಇ ಮಾಡಲ್ ನಲ್ಲಿ ಕೂಡ ಇದೇ ರೀತಿಯ ಮಾದರಿ ಜಾರಿಯಲ್ಲಿದೆ. ಓವರ್‌ಆಲ್ ಅಗ್ರಿಗೇಟ್ ಪಾಸಿಂಗ್ ಮಾರ್ಕ್ಸ್ ಶೇಕಡಾ 33ಕ್ಕೆ ಕಡಿತ ಮಾಡಲಾಗಿದೆ.ಈ ಬಗ್ಗೆ ಜನರ ಅಭಿಪ್ರಾಯ ತಿಳಿಸಲು 15 ದಿನ ಕಾಲಾವಕಾಶ ನೀಡಲಾಗಿದೆ.






