ಮಹದಾಯಿ ಯೋಜನೆಯ (Mahadayi project) ವಿಚಾರದಲ್ಲಿ ಕೇಂದ್ರ ಸರ್ಕಾರ ನಮ್ಮ ಕರ್ನಾಟಕದ ವಿರುದ್ಧವಾಗಿದೆ.ಕೇಂದ್ರ ಸರ್ಕಾರ ಗೋವಾ (Goa) ಪರವಾಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಸಂಸದರಿಗೆ ಮೀಸೆ ಇದ್ರೆ, ಗಂಡಸರಾಗಿದ್ರೆ ಇದರ ವಿರುದ್ಧ ಧ್ವನಿ ಎತ್ತಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಈ ಮಹದಾಯಿ ಯೋಜನೆಯಲ್ಲಿ ನಮಗೆ 13 ಟಿಎಂಸಿ ನೀರು ಕೊಡಬೇಕು ಎಂದು ಮಹದಾಯಿ ನ್ಯಾಯಾಧಿಕರಣ ಈಗಾಗಲೇ ಹೇಳಿದೆ. ಇದಕ್ಕಾಗಿ ನಾವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ.ಆದ್ರೆ ಕೇಂದ್ರ ಸಚಿವರು ಇದಕ್ಕೆ ಅನುಮತಿ ನೀಡಲ್ಲ ಎಂದು ಗೋವಾ ಸಿಎಂ ಹೇಳಿರೋದು ಕರ್ನಾಟಕಕ್ಕೆ ಆಗಿರುವ ಆಘಾತ ಎಂದಿದ್ದಾರೆ.

ಈ ವಿಚಾರದಲ್ಲಿ ಕನ್ನಡಿಗರಿಗೆ, ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ವಾಟಲ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಕರ್ನಾಟಕದ ಎಂಪಿಗಳು ಪಾರ್ಲಿಮೆಂಟ್ ನಲ್ಲಿ ಈ ಬಗ್ಗೆ ತೀವ್ರ ಹೋರಾಟ ಮಾಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.