ಪಾಪ ನಿರುದ್ಯೋಗಿಗಳು ಗೊಣಗುವುದು ಹೊಟ್ಟೆ ಪಾಡಿಗಾಗಿ.

ಎಲ್ಲಾ ಸರ್ಕಾರಗಳಂತೆಯೇ ಇದೂ ಒಂದು ಸರ್ಕಾರ.ಕಾಂಗ್ರೆಸ್ ಬೆಂಬಲಿಗರು ಇದೊಂದು ಉತ್ತಮ,ಜನಪರ ಸರ್ಕಾರವೆಂದೂ, ವಿರೋಧಿಗಳು ಇದೊಂದು ಅತ್ಯಂತ ಭ್ರಷ್ಟ,ನೀಚ ಸರ್ಕಾರವೆಂದೂ ವಾದಿಸುತ್ತಾರೆ.ವಿರೋದ ಪಕ್ಷದವರು ವಿರೋದ ಪಕ್ಷದ ಕಾರ್ಯಕರ್ತರು ಎರಡು ಅಭಿಪ್ರಾಯಗಳು ಪೂರ್ಣ ಸತ್ಯವಲ್ಲ.ತಾವು ಅಧಿಕಾರಕ್ಕೆ ಬರಲು ಜನಪ್ರಿಯ ಯೋಜನೆಗಳನ್ನು ಘೋಷಿಸಿದರು, ಬಿಜೆಪಿ ಯವರ ದೌರ್ಬಲ್ಯವನ್ನು ಉಪಯೋಗಿಸಿಕೊಂಡರು.
ಸಾದ್ಯವಾದಷ್ಟು ಮತ್ತು ಸಾಧ್ಯವಿದ್ದಲ್ಲಿ ಹಣವನ್ನೂ ಚೆಲ್ಲಿದರು ಹಾಗೂ.. ಅಧಿಕಾರಕ್ಕೆ ಬಂದರು.ಈಗ ಆಡಳಿತ ನಡೆಸಬೇಕಾಗಿದೆ.ಘೋಷಿಸಿರುವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಉದಾಹರಣೆಗೆ. ಎಲ್ಲಾ ಮಹಿಳೆಯರಿಗೂ ಯೋಜನೆಗಳು ಹಲವರಿಗೆ ಅನುಕೂಲವಾಗಿರುವುದು ನಿಜ.ಆದರೆ ಅದಕ್ಕಾಗಿ ಊರೂರುಗಳಲ್ಲಿ ಮದ್ಯದಂಗಡಿಗಳನ್ನು ತೆರೆಯುತ್ತಿರುವುದು ಮೂರ್ಖತನ.ಮದ್ಯದ ಮೇಲಿನ ಟ್ಯಾಕ್ಸ್ ಏರಿಸಿರುವುದರಲ್ಲಿ ತಪ್ಪೇನಿಲ್ಲ.
ಆದರೆ ಭೂಮಿ ಖರೀದಿಗೆ ಸ್ಟಾಂಪ್ ಡ್ಯೂಟಿ ಏರಿಕೆಯಿಂದಾಗಿ ಮದ್ಯಮ ವರ್ಗದ ಜನರು ತೊಂದರೆ ಅನುಭವಿಸುವಂತಾಗಿದೆ.ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಸರಿಯಾದ ಮಾರ್ಗ ಹುಡುಕುವ ಬಾಧ್ಯತೆ ಸರ್ಕಾರದ ಮೇಲಿದೆ.ಒಳಜಗಳಗಳನ್ನು ನಿವಾರಿಸಿಕೊಳ್ಳುವ ಜಾಣತನ ತೋರದಿದ್ದಲ್ಲಿ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ದುಬಾರಿಯಾಗಬಹುದು.ಅಧಿಕಾರಕ್ಕೆ ಬಂದಾಗಿದೆ.ಯಾರ ಮೇಲೂ ದ್ವೇಷ ಸಾಧಿಸುವ ಸಮಯ ಇದಲ್ಲ.ಹಾಗೆಂದು ಮೂಲಭೂತ ವಾದಿಗಳು ಉಪಟಳವನ್ನು ಹತ್ತಿಕ್ಕದೇ ಇರುವುದೂ ತಪ್ಪಾಗುತ್ತದೆ.ಅದು ಯಾವ ಜಾತಿ ಧರ್ಮದವರಾದರೂ ಅವರ ರಕ್ಷಣೆ ಸರ್ಕಾರದ ಜವಾಬ್ದಾರಿ.ಜನಸಾಮಾನ್ಯರ ನಿರೀಕ್ಷೆಗಳು ಬೆಟ್ಟದಷ್ಟಿದೆ.ಅವುಗಳನ್ನು ಆದ್ಯತೆಗನುಗುಣವಾಗಿ ಪೂರೈಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದು ಮುಖ್ಯ.ಭ್ರಷ್ಟಾಚಾರ ನಿರ್ಮೂಲನೆ ಅಸಾದ್ಯ.ಆದರೆ ನಿಯಂತ್ರಣ ಖಂಡಿತಾ ಸಾಧ್ಯ. ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳು ಮಾನ್ಯ ಶ್ರೀ ಸಿದ್ಧರಾಮಯ್ಯ.ಸರ್ ಅರಸುರವರ ದಾಖಲೆ ಮುನ್ನುಗುತ್ತಿದ್ದಾರೆ ಹಾಗೂ

ಉಪ ಮುಖ್ಯಮಂತ್ರಿಗಳು ಹಾಗೆ. ತಮ್ಮ ಸಹೋದ್ಯೋಗಿಗಳು ಹಗರಣ ಮಾಡಿಕೊಳ್ಳದಂತೆ ಕಣ್ಣಿರಿಸುವುದು ಅಗತ್ಯ.ಜನ ಅವರಿಗೆ ಅಧಿಕಾರ ಕೊಟ್ಟಾಗಿದೆ 3ವರುಷ ಒಳ್ಳೆಯ ಕೆಲಸಗಳಿಗೆ ಸಹಕಾರ ನೀಡುವುದು ಮತ್ತು ಜನವಿರೋಧಿ ನೀತಿಗಳನ್ನು ರಚನಾತ್ಮಕವಾಗಿ ವಿರೋಧಿಸುವ ಜವಾಬ್ದಾರಿ ನಮ್ಮ ಮೇಲಿದೆ. ವಿರೋಧ ಪಕ್ಷಗಳಿಗೆ ಹೊಟ್ಟೆಕಿಚ್ಚು ಬಂದಿದೆ ಇಷ್ಟೆಲ್ಲ ಸೀಟು ಬಂತಲ್ಲ ಅಂತ ವಿರೋಧ ಪಕ್ಷಗಳು ಬಿಡಿ.ಎಲ್ಲವನ್ನೂ ವಿರೋಧಿಸುತ್ತವೆ.ಪದೇ ಪದೇ ಚುನಾವಣೆಗೆ ಹೋಗುವುದಾಗಲೀ,ಒಂದೇ ಅವಧಿಯಲ್ಲಿ ಮೂರ್ನಾಲ್ಕು ಬಾರಿ ಸರ್ಕಾರಗಳು ಬದಲಾಗುವುದಾಗಲೀ, ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.
ಜನರು ಮತ ಹಾಕಿ ಗೆಲ್ಲಿಸಿದ ಒಂದು ರಾಜಕೀಯ ಪಕ್ಷ. ಐದು ವರ್ಷ ಇದು ಆಳ್ವಿಕೆ ನಡೆಸಬಹುದು. ಕಿತ್ತಾಟ ಇಲ್ಲದಿದ್ದರೆ. ಈಗ 2 ವರ್ಷ ಪೂರೈಸಿದ್ದಾರೆ.
ಚುನಾವಣೆಯಲ್ಲಿ ಹೇಳಿದಂತೆ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದೆ.

ಕಾಂಗ್ರೆಸ್ ಆಡಳಿತದ ಬಗ್ಗೆ ಬಿಜೆಪಿಯವರು ಅಸಮದಾನ ವ್ಯಕ್ತ ಪಡಿಸುತ್ತಿದ್ದಾರೆ. ಇದು ಸಹಜ. ಕಾರಣ ಅವರು ಇಲ್ಲಿ ವಿರೋಧ ಪಕ್ಷ. ನಿರುದ್ಯೋಗ ಸಮಸ್ಯೆ ಅವರಲ್ಲಿ ಕಾಡುತ್ತಿದೆ. ಕೆಲಸ ಸಿಗದ ನಿರುದ್ಯೊಗಿಗಳಂತೆ ಅವರು ಗೊಣಗುತ್ತಿದ್ದಾರೆ. ಪಾಪ ನಿರುದ್ಯೋಗಿಗಳು ಗೊಣಗುವುದು ಹೊಟ್ಟೆ ಪಾಡಿಗಾಗಿ. ಇವರಿಗೆ ಅಧಿಕಾರ ಕೈ ತಪ್ಪಿತಲ್ಲ ಎಂದು.
ಮೇಲಿನದೆಲ್ಲಾ ನಮ್ಮ ಆಶಯಗಳಷ್ಟೇ.ಏನಾಗಲಿದೆ? ಕಾದು ನೋಡೋಣ.
ನವೀನ ಹೆಚ್ ಎ ಹನುಮನಹಳ್ಳಿ ಕೆ ಆರ್ ನಗರ