ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ನಾಯಕತ್ವ ಬದಲಾವಣೆ, ಸಿಎಂ ಕುರ್ಚಿ ಕದನ ಜೋರಾಗಿದ್ದ ಬೆನ್ನಲ್ಲೇ ಕರ್ನಾಟಕಕ್ಕೆ (Karnataka) ಆಗಮಿಸಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Ranadeep singh surjewala) ಶಾಸಕರ ಜೊತೆ ಸಭೆ ನಡೆಸಿ ಗೊಂದಲಗಳಿಗೆ ಅಂತ್ಯವಾಡುವ ಪ್ರಯತ್ನ ಮಾಡಿರುವ ಬೆನ್ನಲ್ಲೇ, ಇನ್ನೇನು ಗೊಂದಲಗಳು ಶಮನವಾದಂತೆ ಎಂದು ಭಾವಿಸುವಷ್ಟರಲ್ಲೇ ಮತ್ತೊಂದು ಮೇಜರ್ ಬೆಳವಣಿಗೆ ನಡೆದಿದೆ.

ಹೌದು ಡಿಸಿಎಂ ಡಿಕೆ ಶಿವಕುಮಾರ್ (Dcm Dk Shivakumar) ನಿನ್ನೆ ದಿಢೀರ್ ಎಂದು ದೆಹಲಿಗೆ ತೆರಳಿದ್ದು ತೀವ್ರ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ.ಡಿಕೆಶಿ ಈ ಬಗ್ಗೆ ಯಾವುದೇ ಸುಳಿವು ನೀಡದೆ ದೆಹಲಿಗೆ ಹೋಗಿ ಯಾರನ್ನು ಭೇಟಿ ಮಾಡಿದ್ದಾರೆ..? ಯಾವ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಹೀಗೆ ನಿನ್ನೆ ದೆಹಲಿಗೆ ಹೋಗಿದ್ದ ಡಿಕೆ ಶಿವಕುಮಾರ್, ಆ ನಂತರ ಮಧ್ಯರಾತ್ರಿ ದೆಹಲಿಯಿಂದ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಇಷ್ಟು ತರಾತುರಿಯಲ್ಲಿ ದೆಹಲಿ ಕಡೆ ಪ್ರಯಾಣ ಬೆಳೆಸಿದ್ದರ ಕುರಿತು ಕಾರಣ ಕೇಳಿದಾಗ ಯಾವುದೇ ಪ್ರತಿಕ್ರಿಯೆ ನೀಡದೆ ಡಿಸಿಎಂ ಡಿ.ಕೆ ಶಿವಕುಮಾರ್ ಹೆಚ್ಎಎಲ್ ವಿಮಾನ ನಿಲ್ದಾಣದ ಕಡೆ ಹೊರಟಿದ್ದಾರೆ.ಇಂದು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮೈಸೂರು ಕಡೆ ಡಿಸಿಎಂ ಹೊರಟಿದ್ದಾರೆ.