ಇಂದು (ಜುಲೈ.18)ಆಷಾಡ ಮಾಸದ ಕೊನೆಯ ಶುಕ್ರವಾರ ಹಿನ್ನಲೆ ಚಾಮುಂಡಿ ಬೆಟ್ಟಕ್ಕೆ (Chamundi hill) ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಆಷಾಡ ಮಾಸದ ಕೊನೆಯ ಶುಕ್ರವಾರ ಆಗಿರೋದ್ರಿಂದ ಚಾಮುಂಡೇಶ್ವರಿ ತಾಯಿ ಸಿಂಹವಾಹಿನಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.

ಇಂದು ಮುಂಜಾನೆಯಿಂದಲೇ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆಯುತ್ತಿದ್ದಾರೆ.ಮುಂಜಾನೆ 4.30 ರಿಂದಲೇ ಚಾಮುಂಡಿ ತಾಯಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಗ್ತಿದ್ದು, ದೇವಾಲಯದ ಆವರಣ ವಿವಿಧ ಪುಷ್ಪಗಳಿಂದ ಅಲಂಕಾರಗೊಂಡಿದೆ.ಜೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಬೆಟ್ಟಕ್ಕೆ ಆಗಮಿಸಿದ್ದರು.

ಈ ವೇಳೆ ನಾಳೆ ನಡೆಯಲಿರೋ ಕಾಂಗ್ರೆಸ್ ಸಾಧನ ಸಮಾವೇಶದ ಬಗ್ಗೆ ಬಿ.ವೈ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.ಚಾಮುಂಡಿ ದೇವಿ ದರ್ಶನದ ಬಳಿಕ ಮಾತನಾಡಿದ ವಿಜಯೇಂದ್ರ, ಸಿಎಂ ಸ್ಥಾನಕ್ಕೆ ಕಂಟಕ ಬಂದಾಗ ಸಿದ್ದರಾಮಯ್ಯ ಈ ರೀತಿ ಸಮಾವೇಶ ಮಾಡುತ್ತಾರೆ.ಸಿದ್ದರಾಮಯ್ಯ ನೇರವಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಬೆದರಿಸುವ ಕೆಲಸ ಮಾಡ್ತಾರೆ.ಮೊನ್ನೆ ರಾಹುಲ್ ಗಾಂಧಿ ಸಿದ್ದರಾಮಯ್ಯಗೆ ಭೇಟಿಗೆ ಅವಕಾಶ ಕೊಟ್ಟಿಲ್ಲ.ಇದು ಸಾಧನ ಸಮಾವೇಶ ಅಲ್ಲ ಕಾಂಗ್ರೆಸ್ ಹೈಕಮಾಂಡ್ ಬೆದರಿಸುವ ಸಮಾವೇಶ ಅಂತಾ ವಿಜಯೇಂದ್ರ ಗುಡುಗಿದ್ದಾರೆ.