
ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕಾಂಗ್ರೆಸ್ ಹೈ ಕಮಾಂಡ್ ಗೆ (Highcommand) ತಲೆನೋವಾಗಿ ಪರಿಣಮಿಸಿದೆ. ಹೌದು ಡಿಸಿಎಂ ಡಿ.ಕೆ ಶಿವಕುಮಾರ್ (Dk Shivakumar) ದೆಹಲಿ ಭೇಟಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ತಲೆ ಕೆಡಿಸಿಕೊಂಡಿದೆ.

ಮೊನ್ನೆ (ಜು.13) ಖಾಸಗಿ ಕಾರ್ಯಕ್ರಮ ನಿಮಿತ್ತ ಡಿಸಿಎಂ ಡಿ.ಕೆ ಶಿವಕುಮಾರ್ ಶಿರಡಿಯಿಂದ ನೇರವಾಗಿ ದೆಹಲಿಗೆ ತೆರಳಿದ್ರು.ಸದ್ಯ ಡಿ.ಕೆ ಶಿವಕುಮಾರ್ ದೆಹಲಿಗೆ ಬಂದಿದ್ದೇಕೆ ಎಂಬ ಕುತೂಹಲ ಕಾಂಗ್ರೆಸ್ ಹೈಕಮಾಂಡ್‌ಗೆ ಮೂಡಿದ್ದು, ದೆಹಲಿಯಲ್ಲಿ ಯಾವ ನಾಯಕರನ್ನ ಭೇಟಿಯಾಗಿದ್ರು ಎಂಬ ಚರ್ಚೆಯಾಗ್ತಿದೆ.
ಇತ್ತ ಬಿಜೆಪಿ ನಾಯಕರೂ ಕೂಡ ಡಿಸಿಎಂ ಡಿಕೆ ಶಿವಕುಮಾರ್ ಅವರ ನಡೆಯ ಮೇಲೆ ಕಣ್ಣಿಟ್ಟಿದ್ದಾರೆ. ಈ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ವೇಳೆ..ಪ್ರಯತ್ನ ವಿಫಲವಾದ್ರೂ ಪ್ರಾರ್ಥನೆ ವಿಫಲವಾಗಲ್ಲ ಎಂದು ಹೇಳಿಕೆ ನೀಡಿದ್ದು, ಡಿಕೆ ನಡೆ ನಿಗೂಢವಾಗಿದೆ.














