ಬಳ್ಳಾರಿ ರಾಜಕೀಯ (Bellary plotics) ಮತ್ತೆ ಗರಿಗೆದರಿದೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardana reddy) ಮತ್ತೊಂದು ಶ್ರೀರಾಮುಲುಗೆ (Sri ramulu) ರಾಜಕೀಯ ಕೌಂಟರ್ ಕೊಟ್ಟಿದ್ದಾರೆ. ಹೌದು ಗಾಲಿ ಜನಾರ್ಧನ ರೆಡ್ಡಿ ತಮ್ಮ ಆಪ್ತನಿಗೆ ಅಧ್ಯಕ್ಷ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಮಾಜಿ ಸಚಿವ ಶ್ರೀರಾಮುಲುಗೆ ತೀವ್ರ ಹಿನ್ನಡೆಯುಂಟು ಮಾಡಿದೆ.

ಹೌದು ಬಳ್ಳಾರಿ ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನದ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.ತಮ್ಮ ತಮ್ಮ ಆಪ್ತರಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ರಾಮುಲು ಮತ್ತು ರೆಡ್ಡಿ ಬ್ರದರ್ಸ್ ಗ್ಯಾಂಗ್ ಪಣ ತೊಟ್ಟಿತ್ತು. ಹಲವು ಸುತ್ತಿನ ಮಾತುಕಥೆಗಳ ಬಳಿಕ ಜನಾರ್ದನ ರೆಡ್ಡಿ ಆಪ್ತನಿಗೆ ಅಧ್ಯಕ್ಷ ಸ್ಥಾನ ಒಲಿದಿದೆ.

ಇದೀಗ ಜನಾರ್ದನ ರೆಡ್ಡಿ ಆಪ್ತ ಜಿ. ವೆಂಕಟರಮಣ ಅವರನ್ನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಜನಾರ್ದನ ರೆಡ್ಡಿ ವೆಂಕರಮಣಗೆ ಸಪೋರ್ಟ್ ಮಾಡಿದ್ದರೇ, ಸೋಮಶೇಖರ ರೆಡ್ಡಿ ಮಾರುತಿ ಪ್ರಸನ್ನ ಅವರಿಗೆ ಬೆಂಬಲ ನೀಡಿದ್ದರು. ನಿನ್ನೆ ನಡೆದ ಬೆಳವಣಿಗೆಯಲ್ಲಿ ಜನಾರ್ದನ ರೆಡ್ಡಿ ಆಪ್ತನಿಗೆ ಬಿಜೆಪಿ ಮಂಡಲ(ನಗರ) ಅಧ್ಯಕ್ಷ ಸ್ಥಾನ ಬಿಟ್ಟು ಕೊಡಲಾಗಿದೆ.

ಈ ಜಿ. ವೆಂಕಟರಮಣ ಮೊದಲು ಕಾಂಗ್ರೆಸ್ ನಿಂದ ಪಾಲಿಕೆ ಮೇಯರ್ ಆಗಿದ್ದರು, ಬಳಿಕ ಜನಾರ್ದನ ರೆಡ್ಡಿ ಜೊತೆ ಕೆಆರ್ ಪಿ ಪಕ್ಷಕ್ಕೆ ಹೋಗಿದ್ದರು.ಈಗ ಕೆ ಆರ್ ಪಿ ಪಕ್ಷ ಬಿಜೆಪಿಯಲ್ಲಿ ವಿಲೀನವಾದ ಬಳಿಕ ಪ್ರಸ್ತುತ ಬಿಜೆಪಿಯಲ್ಲಿದ್ದಾರೆ.ಬಿಜೆಪಿಯಲ್ಲಿ ರೆಡ್ಡಿ ಬೆಂಬಲಿಗರು ಅತಂತ್ರರಾಗಿದ್ದಾರೆ ಎನ್ನುವ ಚೆರ್ಚೆ ಮಧ್ಯೆ ಇದೀಗ ರೆಡ್ಡಿ ಬೆಂಬಲಿಗನಿಗೆ ಅಧ್ಯಕ್ಷ ಸ್ಥಾನ ಸಿಕ್ಕಿದೆ.