ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ರೈತ ನೀತಿ (Labour & farmer policy) ವಿರೋಧಿಸಿ ಇಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿದ್ದು, ಇಂದು ದೇಶಾದ್ಯಂತ ಟ್ರೇಡ್ ಯೂನಿಯನ್‌ಗಳು (Trade union) ಇಂದು ಭಾರತ್ ಬಂದ್‌ಗೆ (Bharath bund) ಕರೆ ನೀಡಿವೆ.ಸುಮಾರು 25 ಕೋಟಿ ಕಾರ್ಮಿಕರು, ರೈತರು ಹಾಗೂ ಕೃಷಿ ಕಾರ್ಮಿಕರು ಬಂದ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಬಂದ್ ಕೇವಲ ಪ್ರತಿಭಟನೆಗೆ ಸೀಮಿತವಾಗಿರಲಿದ್ದು,ಇಂದು 10 ಗಂಟೆಗೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಪ್ರತಿಭಟನೆ ನಡೆಯಲಿದೆ.ಈ ಪ್ರತಿಭಟನಾ ರ್ಯಾಲಿಯಲ್ಲಿ ಸಾವಿರಕ್ಕೂ ಹೆಚ್ಚು ವಿವಿಧ ಕಾರ್ಮಿಕರು, ಸಂಘಟನೆ ಮುಖಂಡರು ಭಾಗಿಯಾಗುವ ಸಾದ್ಯತೆಯಿದೆ.

ಗುಲಾಮಗಿರಿ ತಳ್ಳುವ ನಾಲ್ಕು ಕಾರ್ಮಿಕ ಸಂಹಿತೆ ರದ್ದತಿ, ರಾಜ್ಯ ಸರ್ಕಾರ ಕಾರ್ಮಿಕ ಕಾನೂನಿನಲ್ಲಿ ಕೆಲಸದ ಅವಧಿ ಹೆಚ್ಚಳ ವಿರೋಧ ಸೇರಿದಂತೆ,ಹಲವು ಬೇಡಿಕೆಗಳನ್ನಿಟ್ಟು ಇಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದೆ.ದೆಹಲಿ, ರಾಜಸ್ಥಾನ, ಮುಂಬೈ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ಕಾವು ಪಡೆಯೋ ಸಾದ್ಯತೆಯಿದ್ದು ಸರ್ಕಾರಗಳು ಅಲರ್ಟ್ ಆಗಿದೆ.