ಪಂಚರಂಗಿ ಯೂ ಟ್ಯೂಬ್ ಚಾನಲ್ ನ ಮತ್ತೆ ಮೊದಲಿಂದ ಗೀತ ಗುಚ್ಛದ 3ನೇ ಹಾಡು ‘ಉನ್ಮಾದ ಉಕ್ಕಿದಾಗ…’ (ಕಾಮದ ಬಣ್ಣ ಕೆಂಪು) ಈ ಗೀತೆಯನ್ನು ಖ್ಯಾತ ನಟಿ ರಾಗಿಣಿ ದ್ವಿವೇದಿ ಯವರು ಬಿಡುಗಡೆ ಮಾಡಿ ಗಝಲ್ ಶೈಲಿಯ ಈ ಹಾಡನ್ನು ಮೆಚ್ಚಿಕೊಂಡರು.

ಯೋಗರಾಜ್ ಭಟ್ ರವರ ಸಾಹಿತ್ಯವಿರುವ ಈ ಹಾಡಿಗೆ ಚೇತನ್ – ಡ್ಯಾವಿ ಜೋಡಿ ಸಂಗೀತ ನೀಡಿದ್ದಾರೆ
ಈ ಗೀತೆ ಹೆಣ್ಣು ಹಾಗೂ ಗಂಡು ದನಿಯ ಎರಡೂ ಆವೃತ್ತಿಯಲ್ಲಿ ಮೂಡಿಬಂದಿರುವುದು ವಿಶೇಷ

ಗಂಡು ಆವೃತ್ತಿಗೆ ಖ್ಯಾತ ಗಾಯಕ ಹೇಮಂತ್ ಕುಮಾರ್ (Hemanth Kumar) ದನಿಯಾದರೆ ಹೆಣ್ಣು ದನಿ ಬಾಗಲಕೋಟೆ ಮೂಲದ ನೂತನ ಪ್ರತಿಭೆ ಅದಿತಿ ಖಂಡೇಗಲ (Aditi Khandegala) ಅವರದ್ದಾಗಿದೆ

“ಮತ್ತೆ ಮೊದಲಿಂದ” ಆಲ್ಬಂ ನಲ್ಲಿ ಇದು ಮೂರನೇ ಗೀತೆಯಾಗಿದ್ದು ಇದಕ್ಕೂ ಮೊದಲು ನಿನ್ನ ಕಣ್ಣು ನೀಲಿ… (ಮೋಹದ ಬಣ್ಣ ನೀಲಿ) ಹಾಗು ಪ್ರಿಯ ಸಖಿ… (ಪ್ರೇಮದ ಬಣ್ಣ ಬಿಳುಪು) ಎಂಬ ಎರಡು ಗೀತೆಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿದ್ದ ಯೋಗರಾಜ್ ಭಟ್ ರವರು ವಿ. ಹರಿಕೃಷ್ಣ (V Harikrishna) ರವರ ಸಂಗೀತ ಇರುವ ಮತ್ತೆ ಮೊದಲಿಂದ ಆಲ್ಬಂ ನ ನಾಲ್ಕನೇ ಗೀತೆ ‘ನೀ ಹೋದ ಮೇಲೆ… (ನೆನಪಿನ ಬಣ್ಣ ಹಸಿರು) ಗೀತೆಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದರು

ರೇಣುಕಾ ಯೋಗರಾಜ್ ಭಟ್(Renuka Yogaraj Bhat), ಶ್ರೀನಿಧಿ ದರ್ಬೆ(Srinidhi Darbe), ಶಿಲ್ಪ ಪ್ರಸನ್ನ(Shilpa Prasanna) ಅವರು ನಿರ್ಮಾಣ ಮಾಡಿದ್ದಾರೆ.