ರನ್ಯಾ ರಾವ್ ಗೆ ಸೇರಿದ 34 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿಕೊಂಡಿದೆ.

ಚಿನ್ನ ಕಳ್ಳಸಾಗಾಣೆ ವೇಳೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ರನ್ಯಾ ರಾವ್ ಗೆ ಸೇರಿದ ಬೆಂಗಳೂರಿನ ವಿಕ್ಟೋರಿಯಾ ಲೇಔಟ್ ಮತ್ತು ಅರ್ಕಾವತಿ ಲೇಔಟ್ ಬಳಿ ಇರುವ ಮನೆ, ತುಮಕೂರಿನ ಕೈಗಾರಿಕಾ ಪ್ರದೇಶದಲ್ಲಿರುವ ನಿವೇಶನ, ಆನೇಕಲ್ ತಾಲೂಕಿನಲ್ಲಿರುವ ಕೃಷಿ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ರನ್ಯಾ ರಾವ್ ಗೆ ಸೇರಿದ ಆಸ್ತಿ ಮಾರುಕಟ್ಟೆ ಮೌಲ್ಯದ ಪ್ರಕಾರ 34.10 ಕೋಟಿ ರೂ. ಆಗಿದೆ ಎಂದು ಹೇಳಲಾಗಿದೆ. ರನ್ಯಾ ರಾವ್ ಚಿನ್ನ ಕಳ್ಳಸಾಗಾಣೆ ಹಿಂದೆ ದೊಡ್ಡ ಗ್ಯಾಂಗ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದು, ತನಿಖೆಯ ಅಗತ್ಯವಿದೆ ಎಂದು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ರನ್ಯಾ ರಾವ್ ನಿಜವಾದ ಹೆಸರು ಹರ್ಷವರ್ಧಿನಿ ರಾವ್ ಆಗಿದ್ದು, ಕಳೆದ ಮಾರ್ಚ್ 3ರಂದು ಬೆಂಗಳೂರಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.