
ಸಾಮಾಜಿಕ ಸಂತ ಎಂದು ಗುರುತ್ತಿಸುತ್ತಿವೆ. ವಿವೇಕಾನಂದರು ಸನ್ಯಾಸತ್ವಕ್ಕೆ ಹೊಸ ಅರ್ಥ ಮತ್ತು ಮೆರಗನ್ನು ತಂದರು .ಇವರು ಪರಿವ್ರಾಜಕ ವೃತದಲ್ಲಿ ಭಾರತ ಪರ್ಯಟನೆ ಕೈಗೊಂಡಾಗ ದೇಶದಲ್ಲಿನ ಬಡತನ, ಅಂಧಶ್ರದ್ದೆ,ಅನಕ್ಷರತೆ, ಜಾತಿ-ಜಾತಿಗಳ, ಜಾತಿ-ಮತ ನಡುವೆ ಕಾದಾಟ, ರೋಗ-ರುಜಿನ ಬಳಲುತ್ತಿರುವ ಸಮಾಜವನ್ನು ಕಂಡು ಮರುಗಿದರು. ಕೊನೆಗೆ ಕನ್ಯಾಕುಮಾರಿಯಲ್ಲಿ ಸತತ 3 ದಿವಸ ಧ್ಯಾನ ಮಾಡಿ ತಮ್ಮ ಜೀವನವನ್ನ ಸಮಾಜಕ್ಕಾಗಿ ಮೀಸಲಿಡಬೇಕೆಂದು ನಿಚ್ಚಯಿಸಿದರು. ಅದೇ ಸಮಯದಲ್ಲಿ ಚಿಕಗೋದಲ್ಲಿ ನಡೆಯುವ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ನಿರ್ಧರಿಸಿದರು.
ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸ್ವಾಮಿಜೀವರಿಗೆ ಎರಡು ಉದ್ದೇಶಗಳಿದ್ದವು. ಒಂದು ಪಾಶ್ಚಿಮಾತ್ಯರಿಗೆ ಹಿಂದೂ ಧರ್ಮ-ಭಾರತ ಪರಂಪರೆ ಬಗ್ಗೆ ಇರುವ ಕೀಳರಿಮೇ ಭಾವನೆ ಕಿತ್ತುಗೆದು, ಈ ನಾಡಿನ ಸಾಂಸ್ಕೃತಿಕ ಸಭ್ಯತೆ, ತತ್ವಜ್ಞಾನ-ವಿಜ್ಞಾನಗಳ ಶ್ರೇಷ್ಠತೆಯ ಮಹತ್ವವನ್ನು ವಿಶ್ವದ ಎದರು ತೆರೆದಿಡುವುದು.ಇನ್ನೊಂದು ಉದ್ದೇಶವೆಂದರೆ ಸೆಮಿನಾರ- ಸಭೆಗಳ ಮೂಲಕ ಇಲ್ಲಿನ ಸಾಮಾಜಿಕ ಕಾರ್ಯಗಳಿಗೆ ಹಣ ಸಾಮಗ್ರಿಗಳನ್ನು ಸಂಗ್ರಹಿಸುವುದು. ಈ ಎರಡು ಕಾರ್ಯಗಳಲ್ಲಿ ಸ್ವಾಮೀಜಿ ಸಂಪೂರ್ಣ ಯಶಸ್ಸುಕಂಡರು.ಭಾರತ ತಾವು ಸಂಗ್ರಹಿಸಿ ಹಣದಿಂದ ಆಗಿನ ಬಹು ದೊಡ್ಡ ಸಮಸ್ಯೆಗಳಾದ ಕ್ಷಾಮ-ಬರಗಾಲ-ಪ್ಲೇಗಗಳಿಗೆ ಮೀಸಲಿಟ್ಟರು. ಸ್ವಾಮೀಜಿ ಬಡವ – ಬಲ್ಲಿದ-ದರಿದ್ರರಲ್ಲಿ ದೇವರನ್ನು ಕಾಣಬೇಕೆಂದರು. ಹಸಿದ ಹೊಟ್ಟೆಗೆ ಆಧಾತ್ಮ-ತತ್ವಜ್ಞಾನ ಹೇಳುವುದು ಅಕ್ಷಮ್ಯ ಅಪರಾಧಯೆಂದು ಅವರ ತತ್ವವಾಗಿತ್ತು .

ಅವರು ಮಾನವ ಕಲ್ಯಾಣಗಳ ಕೆಲಸಗಳಿಗಾಗಿ ರಾಮಕೃಷ್ಣ ಮಠವನ್ನು ಸ್ಥಾಪಿಸಿದರು. ಅವರ ಗುರಿ ಉದ್ದೇಶದಂತೆ ಇಂದು ಮಠವು ಕೇವಲ ಆಧ್ಯಾತ್ಮಿಕ ಸಾಧನೆ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳಾದ ಶಿಕ್ಷಣ, ಆಸ್ಪತ್ರೆ, ನೆರೆ- ಬರೆ ಪರಿಹಾರ ಮುಂತಾದ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಸ್ವಾಮಿ ವಿವೇಕಾನಂದರು ಉತ್ತಮ ಶಿಕ್ಷಣದಿಂದ ಮಾತ್ರ ವ್ಯಕ್ತಿ-ದೇಶವನ್ನು ಕಟ್ಟಬಹುದೆಂದರು. ಆಗಿನ ಕಾಲದಲ್ಲಿ ಅನೇಕ ಮಹಾರಾಜ -ದಿವಾನರಿಗೆ ಭೇಟಿಯಾಗಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಪ್ರೇರಣೆಯದರು. ಜೆ.ರ್.ಡಿ ಟಾಟಾ ಅವರಿಂದ ನಿರ್ಮಿತ IISC ಬೆಂಗಳೂರು, ಖೇತ್ರಿ ಪ್ರಾಂತ್ಯದಲ್ಲಿ ಶಿಕ್ಷಣ ಕ್ರಾಂತಿಗೆ ಪ್ರೇರಕ ಶಕ್ತಿ ಸ್ವಾಮಿ ವಿವೇಕಾನಂದರು.

ಮಹಿಳಾ ಶಿಕ್ಷಣಕ್ಕೆ ಅತ್ಯಂತ ಮಹತ್ವ ನೀಡಿದರು. ಒಮ್ಮೆ ವಿಧವಾ-ವಿವಾಹ ಬೇಕು- ಬೇಡಾ ಎಂದು ಪ್ರಶ್ನೆ ಬಂದಾಗ ಶಿಕ್ಷಣ ಕೊಟ್ಟು ಸದೃಢರನ್ನಾಗಿ ಮಾಡಿ, ಬೇಕು-ಬೇಡ ಎನ್ನುವುದನ್ನ ಮಹಿಳೆಯರು ಸ್ವಂತಃ ನಿರ್ಧರಿಸುತ್ತಾರೆ ಎಂದು ನೇರವಾಗಿ ಹೇಳಿದರು. ತಮಗೆ ಮುಕ್ತಿಯನ್ನು ದೊರೆತರೂ ಅದನ್ನ ಧಿಕ್ಕರಿಸಿ, ಎಲ್ಲಿವರೆಗೆ ಸಮಾಜದಲ್ಲಿ ಸಮಸ್ಯೆಗಳಿರುತ್ತೇವೆಯೋ, ಕೊನೆಯ ಜೀವ ಜಂತುಗಳ ಮುಕ್ತಿಕೊಡಿಹುದಿಲ್ಲಹೋ ಅಲ್ಲಿವರೆಗೆ ತಾವು ಪುನರ್ಜನ್ಮ ತಾಳುದಕ್ಕಾಗಿ ಸಿದ್ಧರಿದ್ದೇನೆಂದರು. ಸ್ವಾಮಿಜೀಯವರ ಪ್ರಭಾವದಿಂದ ರಾಮಕೃಷ್ಣ ಆಶ್ರಮವಲ್ಲದೆ, ಅನೇಕ ಸಂಘಟನೆಗಳು ವಿವೇಕಾನಂದರ ಹೆಸರಿನಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುಹುದನ್ನು ನೋಡಬಹುದು. ಸ್ವಾಮಿ ವಿವೇಕಾನಂದರರಿಂದ ಪ್ರಭಾವಿತರಾದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ವ್ಯಕ್ತಿತ್ವದ ವಿಕಾಸ, ದೇಶ-ಧರ್ಮ ಪ್ರೇಮ , ಸಮಾಜದ ಬಗ್ಗೆ ಕಳಕಳಿ ಅಂಶಗಳನ್ನು ಕಾಣಬಹುದು.ವಿಶ್ವದಾದ್ಯಂತ ಭಾರತದ ಸಂಸ್ಕೃತಿ, ಪರಂಪರೆಯನ್ನು ಪಸರಿಸಿದ ಭಾರತದ ಆಧ್ಯಾತ್ಮಿಕ ಲೋಕದ ಅನರ್ಘ್ಯ ರತ್ನ, ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆಯಂದು ಗೌರವದ ನಮನಗಳು. ಅವರ ಚಿಂತನೆಗಳು, ಬೋಧಿಸಿದ ತತ್ವ ಆದರ್ಶಗಳು ನಮ್ಮೆಲ್ಲ ಯುವ ಸಮುದಾಯಕ್ಕೆ ಸ್ಪೂರ್ತಿ
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ – ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು.
ನವೀನ ಹೆಚ್ ಎ ಅಂಕಣಕಾರರು ಲೇಖಕರುಹನುಮನಹಳ್ಳಿ ಕೆಆರ್ ನಗರ