“ಇನಿಫಿನಿಟಿ ಕ್ರಿಯೇಷನ್ಸ್” ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ, “ಅಪ್ಪು ಪಪ್ಪು”(Appu Pappu), ” ಮಸ್ತ್ ಮಜಾ ಮಾಡಿ”(Mast Maja Madi), “ನಂದ(Nanda)” ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಆರ್ ಅನಂತರಾಜು ನಿರ್ದೇಶನದ ಹಾಗೂ “ಜಿಂದಗಿ”(Jindagi) ಚಿತ್ರದ ನಂತರ ರಾಜೀವ್ ರೆಡ್ಡಿ (Rajeev Reddy) ನಾಯಕನಾಗಿ ನಟಿಸಿರುವ “ಕ್ಯಾಪಿಟಲ್ ಸಿಟಿ” ಚಿತ್ರ ಇದೇ ಜುಲೈ 4 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಹಾಡುಗಳು, ಟೀಸರ್ ಹಾಗೂ ಟ್ರೇಲರ್ ಮೂಲಕ ಚಿತ್ರ ಜನರ ಮನಸ್ಸಿಗೆ ಹತ್ತಿರವಾಗಿದೆ.

ಪ್ರೇರಣ (Prerana) ನಾಯಕಿಯಾಗಿ ನಟಿಸಿರುವ ಈ ಚಿತ್ರದ ಪ್ರಮುಖಪಾತ್ರದಲ್ಲಿ ಖ್ಯಾತ ನಟರಾದ ಸುಮನ್(Suman), ರವಿಶಂಕರ್(Ravishankar), ಶರತ್ ಲೋಹಿತಾಶ್ವ(Sharath Lohitashwa), ಕೆ.ಎಸ್ ಶ್ರೀಧರ್ (KS Sridhar) ಮುಂತಾದವರಿದ್ದಾರೆ. ನಾಗ್ ಸಂಗೀತ ನಿರ್ದೇಶನ, ಪ್ರದೀಪ್ ಛಾಯಾಗ್ರಹಣ, ಈಶ್ವರ್ ಸಂಕಲನ ಹಾಗೂ ಡಿಫರೆಂಟ್ ಡ್ಯಾನಿ (Different Danni) ಸಾಹಸ ನಿರ್ದೇಶನ “ಕ್ಯಾಪಿಟಲ್ ಸಿಟಿ” ಚಿತ್ರಕ್ಕಿದೆ.
