ಬಿಗ್ ಬಾಸ್ (Bigboss) ವಿಜೇತ, ನಟ ಪ್ರಥಮ್ (Pratham) ಹೈಕೋರ್ಟ್ (Highcourt) ಮೆಟ್ಟಿಲೇರಿದ್ದು ನಟ ದರ್ಶನ್ (Actor darshan) ಅಭಿಮಾನಿಗಳ ವಿರುದ್ಧ ಇಂಜೆಕ್ಷನ್ ಆರ್ಡರ್ ತಂದಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅವಹೇಳನಕಾರಿ ಪೋಸ್ಟ್ ಹಾಕುತ್ತಿದ್ದ ದರ್ಶನ್ ಫ್ಯಾನ್ಸ್ ವಿರುದ್ಧ ಪ್ರಥಮ್ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ವಾಸದಲ್ಲಿದ್ದಾಗ, ಪ್ರಥಮ್ ದರ್ಶನ್ ಅವರ ವಿರುದ್ಧವಾಗಿ ಮಾತನಾಡಿದ್ದರು ಎಂಬ ಕಾರಣಕ್ಕೆ ದರ್ಶನ್ ರ ಕೆಲ ಅಭಿಮಾನಿಗಳು ಪ್ರಥಮ್ ರನ್ನು ಟಾರ್ಗೆಟ್ ಮಾಡಿ ಅವಹೇಳನ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ವರ್ತನೆಯಿಂದ ತಮ್ಮ ಸಿನಿಮಾಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಪ್ರತಮ್ ಕೋರ್ಟ್ ಮೊರೆ ಹೋಗಿದ್ದಾರೆ. ಸದ್ಯ ಪ್ರಥಮ್ ಎರಡು ಸಿನಿಮಾಗಳ ಬಿಡುಗಡೆಯಲ್ಲಿ ಬ್ಯುಸಿಯಲ್ಲಿದ್ದಾರೆ. ಈ ಸಿನಿಮಾದ ಪ್ರಚಾರ ಮತ್ತು ಬಿಡುಗಡೆಗೆ ತೊಂದರೆಯಾಗಬಾರದು ಎಂಬುದು ಪ್ರಥಮ್ ಉದ್ದೇಶವಂತೆ.

ಹೀಗಾಗಿ ತಮ್ಮ ಸಿನಿಮಾಗಳಿಗೆ ತೊಂದರೆ ಮಾಡಿದ್ರೆ, ತಮ್ಮ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ರೆ, ಅಂಥವರ ವಿರುದ್ಧ ಕಾನೂನು ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.ಅಲ್ಲದೇ ದರ್ಶನ್ ಅಭಿಮಾನಿಗಳ ವಿರುದ್ಧ ಪ್ರಥಮ್ ಇಂಜೆಕ್ಷನ್ ಆರ್ಡರ್ ಕೂಡ ತಂದಿದ್ದಾರೆ.ಇದನ್ನೂ ಮೀರಿ ನ್ಯಾಯಾಂಗ ನಿಂದನೆ ಮಾಡಿದಲ್ಲಿ, ಕಾನೂನು ಕ್ರಮ ಮತ್ತು ಮಾನನಷ್ಟ ಮೊಕದ್ದಮ್ಮೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.