ಇಂದಿನಿಂದ ಜಮ್ಮು ಕಾಶ್ಮೀರದಲ್ಲಿ (Jammu Kashmir) ಅಮರನಾಥ ಯಾತ್ರೆ (Amaranatha yatra) ಆರಂಭವಾಗಲಿದೆ. ಈ ಯಾತ್ರೆಯ ಯಾತ್ರಾರ್ಥಿಗಳು ಕಾಶ್ಮೀರದ ಪಹಲ್ಗಾಮ್ (Pahalgam) ಮೂಲಕವೇ ಸಾಗಿ ಹೋಗಬೇಕಿದೆ. ಹೀಗಾಗಿ ಯಾತ್ರೆಯ ಮಾರ್ಗದ ಉದ್ದಕ್ಕೂ ಹೆಚ್ಚಿನ ಪೊಲೀಸ್, ಮಿಲಿಟರಿ, ಪ್ಯಾರಾ ಮಿಲಿಟರಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಪ್ರತಿ ವರ್ಷ ನಡೆಯುವ ಅಮರನಾಥ ಯಾತ್ರೆಗೆ ಈ ಬಾರಿ ಉಗ್ರರ ದಾಳಿಯ ಆತಂಕ ಎದುರಾಗಿದೆ. ಇದಕ್ಕೆ ಕಾರಣ ಏಪ್ರಿಲ್ ತಿಂಗಳಲ್ಲಿ ಪಹಲ್ಗಮ್ ನಲ್ಲಿ ನಡೆದ ಉಗ್ರರ ದಾಳಿ. ಹೀಗಾಗಿ ಪೆಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಬಳಿಕ ಮೊದಲ ಭಾರಿಗೆ ಅಮರನಾಥ ಯಾತ್ರೆಯಾಗಿರುವುದರಿಂದ ಕೇಂದ್ರ ಸರ್ಕಾರ ಹೈ ಅಲರ್ಟ್ ಆಗಿದೆ.

ಈಗಾಗಲೇ ಈ ಯಾತ್ರೆಗೆ ಉಗ್ರರ ದಾಳಿಯ ಬೆದರಿಕೆಯಿರುವ ಹಿನ್ನಲೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು..ಕೇಂದ್ರ ಸರ್ಕಾರ, ಜಮ್ಮು ಕಾಶ್ಮೀರ ಸರ್ಕಾರ ಒಟ್ಟಾಗಿ ಸೇರಿ ಅತಿ ಹೆಚ್ಚಿನ ಬಿಗಿ ಭದ್ರತೆ ಒದಗಿಸಿದೆ.