ನಿರ್ದೇಶಕ ನಂದ ಕಿಶೋರ್ ವಿರುದ್ಧ ಯುವ ನಟನಿಂದ 22 ಲಕ್ಷ ವಂಚನೆ ಆರೋಪ, ಇಂದು ಫಿಲ್ಮ ಚೇಂಬರ್ ಗೆ ದೂರು ಕೊಟ್ಟ ನಟ ಶಬರೀಷ್ ಶೆಟ್ಟಿ..

ಶಬರೀಷ್ ಶೆಟ್ಟಿ ರಾಮದೂತ ಸಿನಿಮಾದ ನಾಯಕ, ಸಿನಿಮಾದಲ್ಲಿ ಅವಕಾಶ ಕೊಡಿಸೋದಾಗಿ ಹಾಗೂ ಸುದೀಪ್ ಅವರ ಜೊತೆ ಸಿನಿಮಾ ಮಾಡಿಸ್ತೀನಿ ಅಂತ ಹಣ ಪಡೆದಿದ್ದ ಆರೋಪ
ನಂದಕಿಶೋರ್ ಹಂತಹಂತವಾಗಿ 22 ಲಕ್ಷ ಹಣ ವಾಪಸ್ ಕೇಳಿದ್ರೆ ಕೊಡ್ತೇನೆ ಕೊಡ್ತೇನೆ ಅಂತ ಹೇಳಿ 9 ವರ್ಷಗಳ ಕಳೆದಿದ್ದಾರೆ..
ಸುದೀಪ್ ಅವರ ಅಭಿಮಾನಿ ನಾನು.. ಅವರನ್ನು ಭೇಟಿ ಮಾಡಿಸ್ತೇನೆ ಅಂತ ಹೇಳಿ ನನ್ನ ಯಾಮಾರಿಸಿದ್ರು

ಆದರೆ ಇದಕ್ಕೂ ಸುದೀಪ್ ಸರ್ ಗೂ ಯಾವುದೇ ಸಂಬಂಧ ಇಲ್ಲ.. ನಾನು ಅವರ ಅಭಿಮಾನಿ ಅಷ್ಟೇ.. ಈ ಪ್ರಕರಣಕ್ಕೂ ಸುದೀಪ್ ಸರ್ ಗೂ ಯಾವುದೆರ ಸಂಬಂಧ ಇಲ್ಲ..
ಹಣ ವಾಪಸ್ ಕೊಡಿ ಅಂತ ಕೇಳಿದ್ರೆ ಬೆದರಿಕೆ ಹಾಕ್ತಾಯಿದ್ದಾರೆ
ಕೆಸಿಸಿ ಯಿಂದ ಹೊರಗೆ ಹಾಕಿಸ್ತೇನೆ, ಸಿನಿಮಾ ಮಾಡಲು ಅವಕಾಶ ಕೊಡಿಸೋಲ್ಲ ಅಂತ ಬೆದರಿಕೆ ಹಾಕಿಸಿದ್ದಾರೆ

ಅವರಿಗೆ ಹಣ ಕೊಟ್ಟಿರೋ ಎಲ್ಲಾ ದಾಖಲೆಗಳು ನನ್ನ ಬಳಿಯಿದೆ…
ಗುರುವಾರದವರೆಗೂ ಸಮಯ ಕೊಡ್ತೇನೆ ..ಅದಾದ ನಂತರವೂ ಹಣ ಕೊಡದೇ ಇದ್ರೆ ಕಾನೂನಿನ ಮೂಲಕ ಹೋರಾಟ ಮಾಡ್ತೇನೆ
ಶಬರೀಷ್ ಶೆಟ್ಟಿ, ನಟ










