ಬೆಂಗಳೂರಲ್ಲಿ (Bengaluru) ರಸ್ತೆ ಮೇಲಿನ ಕಿರಿಕ್ ಪ್ರಕರಣಗಳು ಮೇಲಿಂದ ಮೇಲೆ ಹೆಚ್ಚಾಗುತ್ತಲೇ ಇದೆ. ಆಗಾಗ ಭಾಷಾ ಕಲಹದ ವಿಚಾರಗಳು ಮುನ್ನಲೆಗೆ ಬರುತ್ತಲೇ ಇದೆ. ಉತ್ತರ ಭಾರತದ (North india) ಸೇರಿದಂತೆ ಹೊರ ರಾಜ್ಯದಿಂದ ಬೆಂಗಳೂರಿಗೆ ಬಂದು ನೆಲೆಸಿದವರು ಆಟಾಟೋಪಗಳು ಮಿತಿ ಮೀರಿವೆ. ಮೊನ್ನೆ ಮೊನ್ನೆಯಷ್ಟೇ ಬ್ಯಾಂಕ್ ಮ್ಯಾನೇಜರ್ ಒಬ್ಬರು ಕನ್ನಡ ಮಾತನಾಡದೇ ದರ್ಪ ಮೆರೆದಿದ್ದಳು. ಇದೀಗ ಹಿಂದಿ ಯುವತಿಯೊಬ್ಬಳು ಅತಿರೇಕದ ವರ್ತನೆ ತೋರಿದ್ದಾಳೆ.

ಈ ಘಟನೆ ಕನ್ನಡಿಗರನ್ನು ಮತ್ತೆ ಕೆರಳುವಂತೆ ಮಾಡುವಂತೆ ಮಾಡಿದೆ.ಈ ಯುವತಿ ತನ್ನ ದ್ವಿಚಕ್ರ ವಾಹನದಲ್ಲಿ ರಸ್ತೆಯಲ್ಲಿ ಚಲಿಸುವಾಗ ಹಿಂಬದಿಯಿಂದ ತನ್ನ ಗಾಡಿ ಆಟೋ ಟಚ್ ಆಗಿದೆ ಎಂದು ಆರೋಪಿಸಿ ದೊಡ್ಸ ಹೈಡ್ರಾಮ ಮಾಡಿದ್ದಾಳೆ. ಈ ವೇಳೆ ಯುವತಿಯ ಕಿರಿಕ್ ಬಗ್ಗೆ ಆಟೋ ಚಾಲಕ ವಿಡಿಯೋ ಮಾಡಿಕೊಳ್ಳಲು ಮುಂದಾಗಿದ್ದಾನೆ. ಆದ್ರೆ ಈ ವೇಳೆ ಕೋಪಗೊಂಡ ಯುವತಿ ತನ್ನ ಚಪ್ಪಲಿ ತೆಗೆದು ಆಟೋ ಚಾಲಕನನ್ನು ಥಳಿಸಿದ್ದಾಳೆ.

ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಮಹಿಳೆಯ ದುರಹಂಕಾರದ ವರ್ತನೆಗೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಬೆಂಗಳೂರಿನ ಬೆಳ್ಳಂದೂರು ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ. ನಡು ರಸ್ತೆಯಲ್ಲೇ ಕಿರಿಕ್ ತೆಗೆದಿರುವ ಯುವತಿ ವಾಹನ ಅಡ್ಡಗಟ್ಟಿ ದಾಂಧಲೆ ಎಬ್ಬಿಸಿ ಹಲ್ಲೆ ಮಾಡಿದ್ದಾಳೆ.

ಈ ಸಂದರ್ಭದಲ್ಲಿ ವಾಹನ ಸಂಚಾರಕ್ಕೂ ಅಡಚಣೆಯಾಗಿದೆ. ಆದ್ರೂ ಯಾವುದನ್ನೂ ಲೆಕ್ಕುಸದೆ ಯುವತಿ ಹುಚ್ಚು ಬಂದತೆ ವರ್ತಿಸಿದ್ದಾಳೆ. ಆಟೋ ಚಾಲಕ ಮತ್ತು ಯುವತಿಯ ನಡುವೆ ವಾಗ್ವಾದ ತಾರಕಕ್ಕೇರಿ ಯುವತಿ ಆಟೋ ಚಾಲಕನ ಮೇಲೆ ಚಪ್ಪಲಿಯಿಂದ ಥಳಿಸಿದ್ದು, ಸದ್ಯ ಚಾಲಕ ದೂರು ದಾಖಲಿಸಿದ್ದಾಳೆ.





