ಭಾರತ (India) ಆಪರೇಷನ್ ಸಿಂಧೂರ (Operation sindhoor) ಆರಂಭಿಸಿದ್ದೇ ತಡ, ದೊಡ್ಡ ವೀರನಂತೆ ಮೈ ಕೊಡವಿಕೊಂಡು ಯುದ್ಧ ಸನ್ನದ್ಧ ಎಂದು ಪೋಸ್ ಕೊಟ್ಟು ಭಾರತದ ಮೇಲೆ ದಾಳಿ ಮಾಡಲು ಮುಂದಾದ ಪಾಕಿಸ್ತಾನಕ್ಕೆ (Pakistan) ಭಾರತ ದೊಡ್ಡ ಮರ್ಮಾಘಟವನ್ನೇ ನೀಡಿದೆ. ಪಾಕಿಸ್ತಾನದ ಏರ್ ಪೋರ್ಟ್, ಬಂದರು, ಹಲವು ನಗರಗಳ ಮೇಲೆ ಭಾರತ ಡ್ರೋನ್ ದಾಳಿ ನಡೆಸಿ ವಿಧ್ವಂಸ ಸೃಷ್ಟಿ ಮಾಡಿದೆ.

ಈ ದಾಳಿಗಳಿಗೆ ಸಂಬಂಧಪಟ್ಟ ಸಾಕಷ್ಟು ವಿಡಿಯೋಗಳು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ನೂರಾರು ಸಂಖ್ಯೆಯಲ್ಲಿ ಹರಿದಾಡುತ್ತಿದೆ. ಆದ್ರೆ ಈ ಪೈಕಿ ನಿಜವಾದ ದಾಳಿಯ ವಿಡಿಯೋಗಳು ಯಾವುದು..? ಹಳೆಯ ವಿಡಿಯೋ ಅಥವಾ ಫೋಟೋಗಳು ಯಾವುದು ಎಂಬುದೇ ತಿಳಿಯುತ್ತಿಲ್ಲ. ಹೀಗಾಗೀ ಈ ಕುರಿತು ಭಾರತೀಯ ಸೇನೆ ಪ್ರತಿಕ್ರಿಯಿಸಿದೆ.

ಹೌದು, ಇದುವರೆಗೂ ಪ್ರಸಾರ ಆಗಿರೋ ಶೇಕಡಾ 90% ವಿಡಿಯೋ ಹಾಗೂ ಪೋಟೋಗಳು ಫೇಕ್ ಆಗಿವೆ. ಹೀಗಾಗಿ ದಯವಿಟ್ಟು ದಾಳಿಗೆ ಸಂಬಂಧಪಟ್ಟ ಫೋಟಿಸ್ ವಿಡಿಯೋಗಳು ಹಾಗೂ ಅಧಿಕೃತ ಮಾಹಿತಿಗಳಿಗೆ ನಮ್ಮ ಸೈನ್ಯ ಅಧಿಕೃತ ಮಾಹಿತಿ ನೀಡುವವರೆಗೂ ಕಾಯಿರಿ ಎಂದು ಭಾರತದ ಸೇನೆ ಹೇಳಿಕೊಂಡಿದೆ.