ಗಣಿದಣಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮತ್ತೆ ದೊಡ್ಡ ಶಾಕ್ ಎದುರಾಗಿದೆ. ಹೌದು ಜನಾರ್ಧನ ರೆಡ್ಡಿ ಮೇಲೆ ಗಂಭೀರ ಆರೋಪವಿದ್ದ ಓಬಳಾಪುರ ಅಕ್ರಮ ಗಣಿಗಾರಿಕೆ ಕೇಸ್ ನಲ್ಲಿ ಜನಾರ್ದನ ರೆಡ್ಡಿ ಅಪರಾಧಿ ಎಂದು ಸಿಬಿಐ ಕೋರ್ಟ್ ಮಹತ್ವದ ಆದೇಶ ನೀಡಿದೆ.

ಈಗಾಗಲೇ ಗಣಿಗಾರಿಕೆ ಕೇಸ್ ನಲ್ಲಿ 3 ವರ್ಷಗಳ ಕಾಲ ಜೈಲುಪಾಲಾಗಿ ಹೊರಬಂದಿದ್ದ ರೆಡ್ಡಿಗೆ ಈಗ ಮತ್ತೆ ಜೈಲು ಸೇರುವ ಭೀತಿ ಎದುರಾಗಿದೆ. ಈ ಕುರಿತು ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯ ಜನಾರ್ದನ ರೆಡ್ಡಿ ಅಪರಾಧಿ ಎಂದು ತೀರ್ಪು ನೀಡಿದೆ.
ಓಬಳಾಪುರ ಅಕ್ರಮ ಗಣಿಗಾರಿಕೆ ಕೇಸ್ ನಲ್ಲಿ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ನ್ಯಾಯಾಲಯ ಬರೋಬ್ಬರಿ 7 ವರ್ಷ ಜೈಲು ಶಿಕ್ಷೆ ಪ್ರಕಟ ಮಾಡಿದೆ. ಈ ಪ್ರಕರಣದಲ್ಲಿ 29 ಲಕ್ಷ ಟನ್ ಅಕ್ರಮ ಗಣಿಗಾರಿಕೆ ಮಾಡಿರುವ ಆರೋಪ ರೆಡ್ಡಿ ಮೇಲಿತ್ತು. ಅಂದ್ರೆ ಸರಿಸುಮಾರು 884 ಕೋಟಿ ರೂಪಾಯಿ ಅಕ್ರಮ ಮಾಡಿರೋದು ಈಗ ಸಾಬೀತಾಗಿದೆ.

ಹೀಗಾಗಿ ಸಿಬಿಐ ಕೋರ್ಟ್ ಈ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಟೀಪ್ರು ನೀಡಿದ್ದು, ಈಗಾಗಲೇ ತಮ್ಮ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಬೇಕು ಎಂದು ರೆಡ್ಡಿ ಕೋರ್ಟ್ ಮುಂದೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.