
ಸುಹಾಸ್ ಶೆಟ್ಟಿಯದ್ದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ವಿಧಾನ ಪರಿಷತ್ ಬಿಜೆಪಿ ಮುಖ್ಯ ಸಚೇತಕ ಎನ್.ರವಿಕುಮಾರ್ ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿರುವ ರವಿಕುಮಾರ್, ಫಾಜಿಲ್ಗೆ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಿತ್ತು. ಆ ಪರಿಹಾರದ ಹಣದಲ್ಲಿ 3 ಲಕ್ಷವನ್ನ ಕೊಲೆಗೆ ಸೂಪಾರಿ ನೀಡಲಾಗಿದೆ. ರಾಜ್ಯದಲ್ಲಿ ಮುಸ್ಲಿಂ ತುಷ್ಟೀಕರಣ ಪರಾಕಷ್ಟೆ ತಲುಪಿದೆ. ಸರ್ಕಾರಿ ಪ್ರಾಯೋಜಿತ ಕೊಲೆಗಳಾಗುತ್ತಿವೆ ಎಂದಿದ್ದಾರೆ. ಸುಹಾಸ್ ಶೆಟ್ಟಿ ರೌಡಿಶೀಟರ್ ಅಂತ ಸೇರಿಸಿದ್ದಾರೆ. ಹಸು ಕಳ್ಳರನ್ನ ಹಿಡಿಯೋರ ಮೇಲೆ ರೌಡಿಶೀಟರ್ ಹಾಕ್ತಾರೆ. ಹಿಂದೂಗಳ ಮೇಲೆ ಎಷ್ಟು ಜನರ ಮೇಲೆ ರೌಡಿಶೀಟ್ ಹಾಕಿದ್ದಾರೆ..? ಮುಸ್ಲಿಮರ ಮೇಲೆ ಎಷ್ಟು ರೌಡಿ ಶೀಟ್ ಹಾಕಿದ್ದಾರೆ..? ಎಂದು ಪ್ರಶ್ನಿಸಿದ್ದಾರೆ.

ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಒಬ್ಬರು ಸರ್ಕಾರಿ ಪ್ರಾಯೋಜಿತ ಅಂದ್ರೆ ಮೂಡಬಿದಿರೆಯ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ ಕಮಿಷನರ್ ಸೇರಿದಂತೆ ಎಲ್ಲ ಪೊಲೀಸರ ಸಹಕಾರದಿಂದ ಕೊಲೆ ನಡೆದಿದೆ ಎಂದು ಆರೋಪಿಸಿದ್ದಾರೆ. ಸುಹಾಸ್ ಶೆಟ್ಟಿ ಕೊಲೆಗೆ ಕೋಟೆ ಕಟ್ಟಿ ಹಂತಕರಿಗೆ ರಕ್ಷಣೆ ನೀಡಿದ್ದಾರೆ. ಕೊಲೆ ಮಾಡಿದವರು ವ್ಯವಸ್ಥಿತ ರೀತಿಯಲ್ಲಿ ಎಸ್ಕೇಪ್ ಆಗಲು ಮಹಿಳೆಯರು ಸಹಕಾರ ನೀಡಿದರು. ಹಂತಕರು ಮೊದಲೇ ಶರಣಾಗುತ್ತೇವೆ ಅಂತ ಪೊಲೀಸರ ಜೊತೆ ಒಡಂಬಡಿಕೆ ಮಾಡಿದ್ದಾರೆ, ಪೊಲೀಸರು ಹಂತಕರನ್ನು ಹಿಡಿದಿಲ್ಲ. ಪೊಲೀಸರ ಸಂಪೂರ್ಣ ಸಹಕಾರದಿಂದ ಕೊಲೆ ನಡೆದಿದೆ. ಪೊಲೀಸರು ಕೊಲೆಗಡುಕರು ಸೇರಿ ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ದುಬೈಯಿಂದಲೂ ಸುಹಾಸ್ ಶೆಟ್ಟಿ ಕೊಲೆಗೆ ಹಣ ಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದವನನ್ನು ಪೊಲೀಸರು ಮುಟ್ಟಲು ಹೋಗಿಲ್ಲ. ಪೊಲೀಸರು ಬದುಕಿಸಲು ಪ್ರಯತ್ನ ಮಾಡಿಲ್ಲ. ಮಂಗಳೂರು ಪೊಲೀಸ್ ಕಮಿಷನರ್ ರೀತಿಯ ಕಮಿಷನರ್‌ನನ್ನು ನಾನು ಇದುವರೆಗೆ ನೋಡಿಲ್ಲ. ಎಲ್ಲ ಅನೈತಿಕ ಚಟುವಟಿಕೆಗೆ ಹಣ ತೆಗೆದುಕೊಳ್ಳುತ್ತಾರೆ. ಬಜ್ಪೆ ಪೊಲೀಸರ ಮೊಬೈಲ್ ಪರಿಶೀಲನೆ ಮಾಡಬೇಕು. ಹಿಂದೂಗಳನ್ನು ಬಗ್ಗು ಬಡಿಯಲು ಸರ್ಕಾರ ಪೊಲೀಸರಿಗೆ ಸಹಕಾರ ನೀಡಿದ್ದಾರೆ. ಹಿಂದುಗಳ ಮನೆಗೆ ಹೋಗಿ ಇತ್ತೀಚಿನ ದಿನಗಳಲ್ಲಿ ತನಿಖೆ ನಡೆಯುತ್ತಿದೆ ಯಾಕೆ..? ಎಂದು ಪ್ರಶ್ನಿಸಿದ್ದಾರೆ. ಕಿನ್ನಿ ಪದವಿನ ಪ್ಲ್ಯಾಟ್‌ನಲ್ಲಿ ಇದ್ದು, ಎಲ್ಲ ಹತ್ಯೆ ನಡೆದಿದೆ, ಅ ಪ್ಲ್ಯಾಟ್ ಪರಿಶೀಲನೆ ನಡೆದಿದೆಯಾ..? ಎಂದು ವಾಗ್ದಾಳಿ ಮಾಡಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಬಂದು ಮುಸ್ಲಿಂ ಮುಖಂಡರ ಸಭೆ ನಡೆಸಿದ್ದಾರೆ. ಬಿಜೆಪಿ ಶಾಸಕರನ್ನು ಬಗ್ಗು ಬಡಿಯುವ ಪ್ರಯತ್ನ ನಡೆಯುತ್ತಿದೆ. ಇಲ್ಲಿನ ಪೊಲೀಸರ ಬಗ್ಗೆ ನೂಲಿನಷ್ಟು ವಿಶ್ವಾಸ ನಮಗಿಲ್ಲ. ಅದಕ್ಕಾಗಿ NIA ತನಿಖೆಗೆ ನೀಡಬೇಕು. ಪೊಲೀಸ್ ಕಮಿಷನರ್ 5 ಲಕ್ಷ ಸುಪಾರಿ ನೀಡಿ ಕೊಲೆ ನಡೆದಿದೆ ಅಂತಾರೆ. 5 ಲಕ್ಷಕ್ಕೆ ಮಾತ್ರ ಕೊಲೆಯಾಗುತ್ತಾ..? ಸುಹಾಸ್ ಶೆಟ್ಟಿ ರೌಡಿ ಶೀಟರ್ ಹಾಗಾದ್ರೆ ಕೊಂದವರು ಗಾಂಧಿಗಳಾ..? ಅವರು ರೌಡಿಗಳಲ್ವಾ? ಆತ ರೌಡಿಶೀಟರ್ ಆಗಿರಬಹುದು, ತಂದೆ ತಾಯಿ ರೌಡಿಶೀಟರ್ ಆಗಿದ್ರಾ..? ಅವರನ್ನು ಹೋಗಿ ಸಮಾಧಾನ ಮಾಡಬಹುದಿತಲ್ವಾ..? ಹಾಗಾದ್ರೆ ರೌಡಿಶೀಟರ್‌ನನ್ನು ನೀವು ಹಂತಕರ ಮೂಲಕ ಕೊಲ್ಲಿಸಿದ್ರಾ..? ಎಂದು ಪ್ರಶ್ನೆ ಮಾಡಿದ್ದಾರೆ. ಬಜ್ಪೆ ಪೊಲೀಸರು ನೇರವಾಗಿ ಹಂತಕರ ಸಂಪರ್ಕದಲ್ಲಿ ಇದ್ದಾರೆ. ಮುಸುಕು ಹಾಕಿದ ಹೆಂಗಸರ ಅರೆಸ್ಟ್ ಮಾಡಿದ್ರಾ ? ಅರೆಸ್ಟ್ ಮಾಡಿದ್ರೆ ಅದು ನಿಮ್ಮ ತಾಕತ್ತು ಎಂದಿದ್ದಾರೆ.
